ಕರ್ನಾಟಕ

karnataka

ETV Bharat / state

ಸವದತ್ತಿ ಯಲ್ಲಮ್ಮ: ರತ್ನಾ ಮಾಮನಿಗೆ ಬಿಗ್ ರಿಲೀಫ್... ನಾಮಪತ್ರ ಅಂಗೀಕಾರ - ಬಿಜೆಪಿ ಅಭ್ಯರ್ಥಿ ರತ್ನಾ ಮಾಮನಿ ನಾಮಪತ್ರ ಅಂಗೀಕಾರ

ರತ್ನಾ ಮಾಮನಿ ಅವರ ನಾಮಪತ್ರ ಸ್ವೀಕಾರ್ಹ- ಚುನಾವಣಾಧಿಕಾರಿ ಡಾ.ರಾಜೀವ ಕೊಲೇರ್ ಘೋಷಣೆ.

Ratna Mamani
ರತ್ನಾ ಮಾಮನಿ

By

Published : Apr 22, 2023, 2:16 PM IST

ಬೆಳಗಾವಿ:ತೀವ್ರ ಕುತೂಹಲ ಮೂಡಿಸಿದ್ದ ಸವದತ್ತಿ ಯಲ್ಲಮ್ಮ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರತ್ನಾ ಮಾಮನಿ ನಾಮಪತ್ರ ಕೊನೆಗೂ ಅಂಗೀಕಾರವಾಗಿದೆ. ಇದರಿಂದ ಅವರು ನಿಟ್ಟುಸಿರು ಬಿಟ್ಟಿದ್ದಾರೆ. ರತ್ನಾ ಮಾಮನಿ ಅವರು ನಾಮಪತ್ರದ ಸೆಟ್ ಜತೆ ಸಲ್ಲಿಸಿದ್ದ ನಮೂನೆ 26ರಲ್ಲಿ ಗೊಂದಲವಿದೆ. 2018 ರ ಮಾದರಿಯ ( ಹಳೆಯ ಮಾದರಿಯ ) ಫಾರಂ ಸಲ್ಲಿಸಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ವಿಶ್ವಾಸ್​ ವೈದ್ಯ ಹಾಗೂ ಆಪ್ ಅಭ್ಯರ್ಥಿ ಬಾಪುಗೌಡ ಪಾಟೀಲ ಆಕ್ಷೇಪಣೆ ಸಲ್ಲಿಸಿದ್ದರು.

ಆ ಹಿನ್ನೆಲೆಯಲ್ಲಿ ಸವದತ್ತಿ ಕ್ಷೇತ್ರದ ಚುನಾವಣಾ ಅಧಿಕಾರಿ ರಾಜೀವ ಕೂಲೇರ ಈ ಬಗ್ಗೆ ಶುಕ್ರವಾರದಿಂದಲೇ ವಿಚಾರಣೆ ನಡೆಸಿದ್ದರು. ಇದರಿಂದ ಬಿಜೆಪಿ ಪಾಳಯದಲ್ಲಿ ಆತಂಕ ಮನೆ ಮಾಡಿತ್ತು. ಶನಿವಾರ ಬೆಳಗ್ಗೆ 10 ಗಂಟೆಯಿಂದ ವಿಚಾರಣೆ ಆರಂಭವಾಗಿತ್ತು. ಈ ವೇಳೆ ರತ್ನಾ ಮಾಮನಿ ವಿಚಾರಣೆಗೆ ಹಾಜರಾಗಿದ್ದರು. ವಿಚಾರಣೆಯ ನಂತರ ಚುನಾವಣಾಧಿಕಾರಿ ಡಾ.ರಾಜೀವ ಕೊಲೇರ್ ತೀರ್ಪು ನೀಡಿದ್ದು, ರತ್ನಾ ಮಾಮನಿ ಅವರ ನಾಮಪತ್ರ ಸ್ವೀಕಾರ್ಹ ಎಂದು ಘೋಷಣೆ ಮಾಡಿದ್ದಾರೆ.

ಸತ್ಯಕ್ಕೆ ಜಯ: ತಮ್ಮ ನಾಮಪತ್ರ ಸ್ವೀಕಾರ ಬಳಿಕ ಮಾಧ್ಯಮಗಳ ಜತೆಗೆ ಮಾತನಾಡಿದ ರತ್ನಾ ಮಾಮನಿ, "ನಾನು ಯಾವುದೇ ತಪ್ಪು ಮಾಡಿಲ್ಲ. ಹೀಗಾಗಿ ಆತಂಕ ಇರಲಿಲ್ಲ. ನಮ್ಮ ಯಜಮಾನರು ನೇರಾನೇರ ರಾಜಕಾರಣ ಮಾಡಿದ್ದರು. ನಾನು ಕೂಡ ಅದೇ ದಾರಿಯಲ್ಲಿ ನಡೆಯುತ್ತಿದ್ದು, ಸತ್ಯಕ್ಕೆ ಜಯ ಸಿಕ್ಕಿದೆ" ಎಂದರು. ಚುನಾವಣಾ ಸಮಯದಲ್ಲಿ ಈ ರೀತಿ ವಿರೋಧಿಗಳು ಬೆನ್ನಿಗೆ ಚೂರಿ ಇರಿಯುವ ಕೆಲಸ ಮಾಡಿದ್ದಾರೆ. ಇದು ಸರಿಯಲ್ಲ. ಚುನಾವಣಾ ಕಣದಲ್ಲಿ ಫೇಸ್ ಟೂ ಫೇಸ್ ಫೈಟ್ ಮಾಡಲಿ ಎಂದು ವಿರೋಧಿಗಳಿಗೆ ರತ್ನಾ ಮಾಮನಿ ಸವಾಲು ಹಾಕಿದರು.

ಬೆಂಬಲಿಗರ ಮಧ್ಯೆ ಮಾತಿನ ಚಕಮಕಿ:ಸವದತ್ತಿ ಮಿನಿ ವಿಧಾನಸೌದ ಮುಂದೆ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ವಿಶ್ವಾಸ್ ವೈದ್ಯ ಹಾಗೂ ರತ್ನಾ ಮಾಮನಿ ಬೆಂಬಲಿಗರ ಮಧ್ಯೆ ಮಾತಿನ ಚಕಮಕಿ ನಡೆದು, ಬ್ಯಾರಿಕೇಡ್ ತಳ್ಳಿ ನೂಕಾಟ ನಡೆದಿತ್ತು. ನೂರಾರು ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ವಿರುದ್ದ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ, ಪೋಲಿಸರು ಹಾಗೂ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆದಿತ್ತು, ಒಳಗಡೆ ಹೋಗಲು ಅವಕಾಶ ಮಾಡಿ ಕೊಡುತ್ತಿಲ್ಲ ಎಂದು ಕಾರ್ಯಕರ್ತರು ಗಲಾಟೆ ಮಾಡಿದ್ದರು. ಹೀಗಾಗಿ 144 ಸೆಕ್ಸನ್ ಜಾರಿ ಆಗಿರುವ ಹಿನ್ನೆಲೆ 100 ಮೀಟರ್ ಆವರಣದ ಹೊರಗೆ ಇರುವಂತೆ ಪೊಲೀಸರು ಸೂಚನೆ ನೀಡಿದ್ದರು.

ಡಿಕೆಶಿ ನಾಮಪತ್ರ ಅಂಗೀಕಾರ: ಕನಕಪುರ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಡಿ.ಕೆ.ಶಿವಕುಮಾರ್ನನ್ನ ನಾಮಪತ್ರ ತಿರಸ್ಕರಿಸಲು ಅಧಿಕಾರಿಗಳ ಮೇಲೆ ಒತ್ತಡ ಹಾಕಿ, ಷಡ್ಯಂತ್ರ ಮಾಡಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದರು. ಆದರೆ, ಅವರ ನಾಮಪತ್ರವನ್ನು ಚುನಾವಣಾಧಿಕಾರಿಗಳು ನಿನ್ನೆ ಅಂಗೀಕರಿಸಿದ್ದಾರೆ. ಈ ಮೂಲಕ ನಾಮಪತ್ರ ತಿರಸ್ಕೃತವಾಗುವ ಭೀತಿಯಲ್ಲಿದ್ದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಿಗೆ ರಿಲೀಫ್ ಸಿಕ್ಕಿದೆ.

ಇದನ್ನೂ ಓದಿ:ಕನಕಪುರದಿಂದ ಸ್ಪರ್ಧಿಸಿರುವ ಡಿ ಕೆ ಶಿವಕುಮಾರ್ ನಾಮಪತ್ರ ಅಂಗೀಕಾರ

ABOUT THE AUTHOR

...view details