ಕರ್ನಾಟಕ

karnataka

ETV Bharat / state

ಅಪ್ರಾಪ್ತೆಯ ಮೇಲೆ ಅತ್ಯಾಚಾರ; ಮೆಡಿಕಲ್ ಟೆಸ್ಟ್ ವೇಳೆ ಪೊಲೀಸರ ಕಣ್ತಪ್ಪಿಸಿ ಆರೋಪಿ ಪರಾರಿ! - ಮೆಡಿಕಲ್ ಟೆಸ್ಟ್ ವೇಳೆ ಅತ್ಯಾಚಾರ ಆರೋಪಿ ಪರಾರಿ!

ಕಾಕತಿ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮವೊಂದರ ಯುವಕ ಎರಡು ದಿನಗಳ ಹಿಂದೆ ಅಪ್ರಾಪ್ತೆ ಮೇಲೆ ಎಸಗಿ ಪರಾರಿಯಾಗಿದ್ದನು‌. ಪ್ರಕರಣ ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.

Rape accused escape when going to medical test
ಅತ್ಯಾಚಾರ ಆರೋಪಿ ಪರಾರಿ

By

Published : Sep 16, 2021, 3:26 AM IST

ಬೆಳಗಾವಿ: ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿರುವ ಆರೋಪಿಯೋರ್ವ ಪೊಲೀಸರಿಗೆ ಚೆಳ್ಳೆ ಹಣ್ಣು ತಿನ್ನಿಸಿ ಪರಾರಿಯಾಗಿರುವ ಘಟನೆ ಇಲ್ಲಿನ ಜಿಲ್ಲಾಸ್ಪತ್ರೆಯ ಆವರಣದಲ್ಲಿ ಬುಧವಾರ ನಡೆದಿದೆ.

ಕಾಕತಿ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮವೊಂದರ ಯುವಕ ಎರಡು ದಿನಗಳ ಹಿಂದೆ ಅಪ್ರಾಪ್ತೆ ಮೇಲೆ ಎಸಗಿ ಪರಾರಿಯಾಗಿದ್ದನು‌. ಪ್ರಕರಣ ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.

ಬಳಿಕ ಆರೋಪಿಯನ್ನು ಕಾಕತಿ ಠಾಣೆ ಪೊಲೀಸರು ವೈದ್ಯಕೀಯ ತಪಾಸಣೆಗೆಂದು ಜಿಲ್ಲಾಸ್ಪತ್ರೆಗೆ ಕರೆತಂದಿದ್ದರು‌. ಆಗ ಪೊಲೀಸರಿಗೆ ಯಾಮಾರಿಸಿ ಆಸ್ಪತ್ರೆ ಆವರಣದಿಂದಲೇ ಪರಾರಿಯಾಗಿದ್ದಾನೆ. ಆರೋಪಿಗಾಗಿ ಎಪಿಎಂಸಿ ಹಾಗೂ ಕಾಕತಿ ಠಾಣೆ ಪೊಲೀಸರು ಜಂಟಿಯಾಗಿ ಶೋಧ ಕಾರ್ಯ ನಡೆಸಿದ್ದಾರೆ. ಆರೋಪಿ ವಿರುದ್ಧ ಈಗಾಗಲೇ ಕಾಕತಿ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿದೆ.

ಇದನ್ನು ಓದಿ:ಯಾದಗಿರಿ ಹಲ್ಲೆ ಪ್ರಕರಣಕ್ಕೆ ತಿರುವು: ಅಪಹರಿಸಿ ಗ್ಯಾಂಗ್​ರೇಪ್ ನಡೆದಿದೆ ಎಂಬ ಭಯಾನಕ ಸತ್ಯ ಬಹಿರಂಗ

ABOUT THE AUTHOR

...view details