ಕರ್ನಾಟಕ

karnataka

ETV Bharat / state

100ಕ್ಕೆ 101 ಅಂಕ‌ ಕೊಟ್ಟ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ - undefined

ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬಿ.ಕಾಂ ವಿದ್ಯಾರ್ಥಿನಿಗೆ 100ಕ್ಕೆ 101 ಅಂಕ ನೀಡಿ ಎಡವಟ್ಟು ಮಾಡಿದೆ.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯ

By

Published : Jun 12, 2019, 2:03 PM IST

ಚಿಕ್ಕೋಡಿ: ವಿದ್ಯಾರ್ಥಿನಿಯೊಬ್ಬರಿಗೆ 100ಕ್ಕೆ 101 ಅಂಕ‌ ನೀಡುವ ಮೂಲಕ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಎಡವಟ್ಟು ಮಾಡಿದೆ.

100ಕ್ಕೆ 101 ಅಂಕ ನೀಡಿದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ

ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಬಿ.ಕಾಂ 6ನೇ ಸೆಮಿಸ್ಟರ್ ವಿದ್ಯಾರ್ಥಿನಿ ಶೈಲಶ್ರೀ ಸಾಂವಗಾಂವ ಅವರಿಗೆ ಮಾಡರ್ನ್​ ಆಡಿಟಿಂಗ್ ಆ್ಯಂಡ್ ಪ್ರಾಕ್ಟೀಸಸ್​ ವಿಷಯದಲ್ಲಿ 100 ಕ್ಕೆ 101 ಅಂಕ ನೀಡಿರುವುದು ಕಾಲೇಜಿನ ಆಡಳಿತ ಮಂಡಳಿಗೆ, ವಿದ್ಯಾರ್ಥಿನಿ ಹಾಗೂ ಪಾಲಕರ ಅಚ್ಚರಿಗೆ ಕಾರಣವಾಗಿದೆ.

ವೆಬ್​ಸೈಟ್​ನಲ್ಲಿ ಪ್ರಕಟವಾದ ಫಲಿತಾಂಶದಲ್ಲಿ ಈ ಮಾಹಿತಿ ಇತ್ತು. ವಿಷಯ ತಿಳಿದ ನಂತರ ವಿದ್ಯಾರ್ಥಿನಿಯ ರಿಸಲ್ಟ್​ ಶೀಟ್​ ಅಳಿಸಿ ಹಾಕಲಾಗಿದೆ. ಸದ್ಯ ವಿದ್ಯಾರ್ಥಿನಿ ವೆಬ್​ಸೈಟ್​ನಲ್ಲಿ ಫಲಿತಾಂಶಕ್ಕಾಗಿ ತನ್ನ ರಿಜಿಸ್ಟರ್​ ನಂಬರ್ ಹಾಕಿದರೆ ಇನ್ ವ್ಯಾಲಿಡ್ ರಿಜಿಸ್ಟರ್ ನಂಬರ್​ ಎಂದು ಬರುತ್ತಿದೆ. ಹೀಗಾಗಿ ತಾನು ಎಷ್ಟು ಅಂಕ ಗಳಿಸಿದ್ದೇನೆ ಎಂದು ತಿಳಿಯದೇ ವಿದ್ಯಾರ್ಥಿನಿ ಗೊಂದಲಕ್ಕೆ ಒಳಗಾಗಿದ್ದಾರೆ.

For All Latest Updates

TAGGED:

ABOUT THE AUTHOR

...view details