ಕರ್ನಾಟಕ

karnataka

ETV Bharat / state

ಫ್ರೀ ಹೇರ್‌ಕಟ್ ಮೂಲಕ ನೆಚ್ಚಿನ ನಾಯಕನ ಬರ್ತ್​ಡೇ ಆಚರಿಸಿದ ಕತ್ತಿ ಅಭಿಮಾನಿ - Ramesh katthi birthday

ಮಾಜಿ ಸಂಸದ ಹಾಗೂ ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ್ ಕತ್ತಿ ಹುಟ್ಟುಹಬ್ಬದ ನಿಮಿತ್ತವಾಗಿ ಅಂಗಡಿಗೆ ಬರುವ ಪ್ರತಿಯೊಬ್ಬ ಗ್ರಾಹಕನಿಗೂ ಉಚಿತ ಹೇರ್‌ಕಟ್, ಶೇವಿಂಗ್ ಮಾಡುವ ಮೂಲಕ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದ ಅಭಿಮಾನಿಯೊಬ್ಬ ಅಭಿಮಾನ ಮೆರೆದಿದ್ದಾನೆ.

Ramesh katthi fan cut hair for free on his leader birthday
ಉಚಿತವಾಗಿ ಹೇರ್​ ಕಟ್ ಮಾಡಿ ನೆಚ್ಚಿನ ನಾಯಕನ ಬರ್ತ್​ಡೆ ಆಚರಿಸಿದ ಕತ್ತಿ ಅಭಿಮಾನಿ

By

Published : Oct 23, 2020, 12:19 PM IST

ಚಿಕ್ಕೋಡಿ (ಬೆಳಗಾವಿ):ತಮ್ಮ ಸ್ವಂತದವರ ಅಥವಾ ತಮಗೆ ಬೇಕಾದವರ ಹುಟ್ಟುಹಬ್ಬವನ್ನು ಹಲವರು ಅನ್ನದಾನ, ರಕ್ತದಾನ ಹಾಗು ಸಿಹಿ ಹಂಚಿ ಆಚರಿಸುತ್ತಾರೆ.‌ ಆದರೆ, ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ವ್ಯಕ್ತಿಯೊಬ್ಬ ತನ್ನ ನೆಟ್ಟಿನ ರಾಜಕೀಯ ನಾಯಕನ ಹುಟ್ಟುಹಬ್ಬಕ್ಕೆ ಉಚಿತವಾಗಿ ಕ್ಷೌರ ಮಾಡಿದ್ದಾನೆ.

ರವಿ ನಣದಿ ಎಂಬ ಯುವಕ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಎರಡು ವರ್ಷಗಳಿಂದ ಆರ್.​ಕೆ ಹೆಸರಿನ ಹೇರ್ ಕಟ್ ಸೆಲೂನ್ ನಡೆಸುತ್ತಿದ್ದಾನೆ. ಮಾಜಿ ಸಂಸದ ಹಾಗೂ ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ್ ಕತ್ತಿ ಹುಟ್ಟುಹಬ್ಬದ ನಿಮಿತ್ತವಾಗಿ ಅಂಗಡಿಗೆ ಬರುವ ಪ್ರತಿಯೊಬ್ಬ ಗ್ರಾಹಕನಿಗೂ ಉಚಿತ ಹೇರ್‌ಕಟ್, ಶೇವಿಂಗ್ ಮಾಡುತ್ತಿದ್ದಾನೆ.

ಆರ್.ಕೆ ಅಂದ್ರೆ?

ಆರ್.ಕೆ ಅಂದ್ರೆ ರವಿಯ ನೆಚ್ಚಿನ ನಾಯಕ 'ರಮೇಶ್ ಕತ್ತಿ' ಹೆಸರು. ಅವರ ಮೇಲಿನ ಅಭಿಮಾನಕ್ಕೋಸ್ಕರ ಅವರ ಹೆಸರನ್ನೇ ತನ್ನ ಅಂಗಡಿಗೆ ಇಟ್ಟಿದ್ದಾನೆ.

ಈ ಸಂಬಂಧ ಮಾತನಾಡಿರುವ ರವಿ, ನಮ್ಮ ಸಾಹುಕಾರನ ಮೇಲೆ ನಮಗೆ ಅಭಿಮಾನವಿದೆ. ನಾನು ಪ್ರತಿ ವರ್ಷವೂ ಸಾಹುಕಾರನ ಹುಟ್ಟುಹಬ್ಬದ ದಿನದಿಂದ ಉಚಿತವಾಗಿ ಹೇರ್‌ಕಟ್ ಮಾಡುತ್ತೇನೆ ಎನ್ನುತ್ತಾರೆ.

ABOUT THE AUTHOR

...view details