ಬೆಳಗಾವಿ :ಬೆಂಗಳೂರು ಮಾದರಿಯಲ್ಲೇ ಗೋಕಾಕ್ ತಾಲೂಕನ್ನೂ 10 ದಿನಗಳ ಕಾಲ ಲಾಕ್ಡೌನ್ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ತಾಲೂಕು ಪಂಚಾಯತಿ ಆವರಣದಲ್ಲಿ ಕೋವಿಡ್ ಅಧಿಕಾರಿಗಳೊಂದಿಗಿನ ಟಾಸ್ಕ್ ಫೋರ್ಸ್ ಸಭೆಯ ಬಳಿಕ ಮಾತನಾಡಿದ ಅವರು, ಹೆಚ್ಚುತ್ತಿರುವ ಕೊರೊನಾ ವೈರಸ್ ತಡೆಯಲು ಮಂಗಳವಾರ ರಾತ್ರಿ 8 ಗಂಟೆಯಿಂದ ಗೋಕಾಕ್ ತಾಲೂಕಿನಲ್ಲಿ ಲಾಕ್ಡೌನ್ ಜಾರಿ ಮಾಡಲಾಗುವುದು ಎಂದರು.
ಗೋಕಾಕ್ ಜನರು ಸ್ವಯಂಪ್ರೇರಿತವಾಗಿ ಲಾಕ್ಡೌನ್ಗೆ ಸಲಹೆ ಕೊಟ್ಟಿದ್ದಾರೆ. ಹೀಗಾಗಿ ಸೋಂಕು ನಿಯಂತ್ರಣ ಸಂಬಂಧ ಗೋಕಾಕ್ನಲ್ಲಿ ಕಟ್ಟುನಿಟ್ಟಿನ ನಿಯಮ ಮುಂದುವರೆಸಲಾಗುವುದು. ಈ ವೇಳೆ ಅಧಿಕಾರಿಗಳ ಸಮಿತಿ ರಚಿಸಿ ಹಾಲು, ತರಕಾರಿ ಅಗತ್ಯ ಸೇವೆ ಪೂರೈಕೆ ಮಾಡಲಾಗುವುದು ಎಂದು ತಿಳಿಸಿದರು.
ಮಂಗಳವಾರದಿಂದ 10 ದಿನಗಳ ಕಾಲ ಲಾಕ್ಡೌನ್: ಜಾರಕಿಹೊಳಿ ಕೆಲ ಖಾಸಗಿ ವೈದ್ಯರು ಅಸೋಸಿಯೇಷನ್ ಮಾಡಿಕೊಂಡು ಜನರನ್ನು ಬ್ಲಾಕ್ಮೇಲ್ ಮಾಡುತ್ತಿದ್ದಾರೆ ಎಂಬ ದೂರುಗಳು ಬಂದಿವೆ. ಬ್ಲಾಕ್ಮೇಲ್ ಮಾಡಿದ ಖಾಸಗಿ ವೈದ್ಯರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ ಎಂದು ಸಚಿವರು ಹೇಳಿದರು.