ಬೆಳಗಾವಿ :ಎಂಎಲ್‍ಸಿ ಹೆಚ್ ವಿಶ್ವನಾಥ್ ರಾಜ್ಯ ಸರ್ಕಾರದ ವಿರುದ್ಧ ಬಹಿರಂಗವಾಗಿಯೇ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ಆದರೆ, ಅವರು ಪಕ್ಷದ ವಿರುದ್ಧ ಮಾತನಾಡಿಲ್ಲ ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಸಾ ರಾ ಮಹೇಶ್ ವಿಚಾರದಲ್ಲಿ ಆ ರೀತಿ ಮಾತನಾಡಿದ್ದಾರೆ ಅಂತಾ ವಿಶ್ವನಾಥ್ ಅವರ ಹೇಳಿಕೆಯನ್ನ ಸಚಿವರು ಸಮರ್ಥಿಸಿಕೊಂಡಿದ್ದಾರೆ.
ಹೆಚ್ ವಿಶ್ವನಾಥ್ ಪರ ಬ್ಯಾಟ್ ಬೀಸಿದ ಸಚಿವ ರಮೇಶ್ ಜಾರಕಿಹೊಳಿ ನಗರದಲ್ಲಿ ಗ್ರಾಮ ಸ್ವರಾಜ್ಯ ಸಮಾವೇಶ ಮುಗಿದ ಬಳಿಕ ಹೆಚ್ ವಿಶ್ವನಾಥ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಮಾಧ್ಯಮದಲ್ಲಿ ಸಾ ರಾ ಮಹೇಶ್ ಮತ್ತು ಹೆಚ್ ವಿಶ್ವನಾಥ್ ಅವರ ಬಗ್ಗೆ ಒಟ್ಟಾಗಿ ತೋರಿಸಿದಾಗ ಆ ರೀತಿ ಮಾತನಾಡಿದ್ದಾರೆ. ಪಕ್ಷದ ವಿರುದ್ಧ ಮಾತನಾಡಿಲ್ಲ.
ಈ ಕುರಿತು ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಮೂಲ ಆದೇಶವನ್ನೇ ಸುಪ್ರೀಂಕೋರ್ಟ್ನಲ್ಲಿ ಪ್ರಶ್ನೆ ಮಾಡುತ್ತೇವೆ. ಇದನ್ನ ಪದೇಪದೆ ಹೇಳೋದಿಲ್ಲ. ಇಡೀ ಬಿಜೆಪಿ ಪಕ್ಷವೇ ಹೆಚ್ ವಿಶ್ವನಾಥ್ ಅವರ ಪರ ನಿಲ್ಲುತ್ತದೆ ಎಂದು ಹೇಳಿದರು.
ಈ ವೇಳೆ, ರಮೇಶ್ ಜಾರಕಿಹೊಳಿ ಮಾತಿಗೆ ಧ್ವನಿಗೂಡಿಸಿದ ಜಗದೀಶ ಶೆಟ್ಟರ್, ಹೆಚ್ ವಿಶ್ವನಾಥ್ ಅವರನ್ನು ಕೈಬಿಡುವ ಪ್ರಶ್ನೆ ಬರೋದಿಲ್ಲ ಎಂದರು. ಬೆಳಗಾವಿ ಬೈ ಎಲೆಕ್ಷನ್‍ನಲ್ಲಿ ಜಗದೀಶ ಶೆಟ್ಟರ್ ಹೆಸರು ಕೇಳಿ ಬರುತ್ತಿದೆ ಎಂಬ ಮಾಧ್ಯಮಗಳ ಪ್ರಶ್ನೆಗೆ, ಅದರ ಬಗ್ಗೆ ಈಗ ಚರ್ಚೆ ಮಾಡೋದೇ ಬೇಡ, ಕೋರ್ ಕಮೀಟಿ ಸಭೆಯಲ್ಲಿ ಚರ್ಚೆ ಮಾಡುವಂತಹುದನ್ನು ಮಾಧ್ಯಮಗಳ ಜೊತೆ ಮಾತನಾಡುವುದು ಸರಿಯಲ್ಲ. ನಮ್ಮ ಪಕ್ಷ ಶಿಸ್ತಿನ ಪಕ್ಷ ಎಂದು ತಮ್ಮ ಮಾತು ಮುಗಿಸಿದರು.