ಕರ್ನಾಟಕ

karnataka

ETV Bharat / state

ಡಿ. 5ರಂದು ಮೈತ್ರಿ ಸರ್ಕಾರ ಪತನದ ಹಿಂದಿನ ಸತ್ಯ ತಿಳಿಸುವೆ: ರಮೇಶ್​​​ ಜಾರಕಿಹೊಳಿ - ಮೈತ್ರಿ ಸರ್ಕಾರ ಪತನ ಕುರಿತು ರಮೇಶ್ ಜಾರಕಿಹೊಳಿ ಹೇಳಿಕೆ ಸುದ್ದಿ

ಬಾಲಚಂದ್ರ ಜಾರಕಿಹೊಳಿ ಮತ್ತು ಸುರೇಶ್ ಅಂಗಡಿ ಹೇಳಿಕೆಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಡಿಸೆಂಬರ್​​ 5ರಂದು ಪ್ರೆಸ್‌ಮೀಟ್ ಮಾಡಿ ಸರ್ಕಾರ ಯಾಕೆ ಬಿತ್ತು, ಯಾರಿಂದ ಬಿತ್ತು ಎಂಬುದನ್ನು ತಿಳಿಸುವೆ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

ramesh-jarkiholi-statement-on-lakshmi-hebbalkar
ರಮೇಶ್ ಜಾರಕಿಹೊಳಿ ಉಪ ಚುನಾವಣಾ ಪ್ರಚಾರ

By

Published : Nov 28, 2019, 8:31 PM IST

ಗೋಕಾಕ:ಡಿಸೆಂಬರ್ 5ರಂದು ಸರ್ಕಾರ ಯಾತಕ್ಕೆ ಬಿತ್ತು, ಯಾರಿಂದ ಬಿತ್ತು ಎಂಬ ಸತ್ಯವನ್ನು ತಿಳಿಸುತ್ತೇನೆ ಎಂದು ರಮೇಶ್ ಜಾರಕಿಹೊಳಿ ಹೊಸ ಬಾಂಬ್​ ಸಿಡಿಸಿದ್ದಾರೆ.

ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಿರುವ ರಮೇಶ್​, ಬಾಲಚಂದ್ರ ಜಾರಕಿಹೊಳಿ ಮತ್ತು ಸುರೇಶ್ ಅಂಗಡಿ ಹೇಳಿಕೆಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಡಿಸೆಂಬರ್​ 5ರಂದು ಪ್ರೆಸ್‌ಮೀಟ್ ಮಾಡಿ ಸರ್ಕಾರ ಯಾಕೆ ಬಿತ್ತು, ಯಾರಿಂದ ಬಿತ್ತು ಎಂಬುದನ್ನು ತಿಳಿಸುವೆ ಎಂದರು.

ರಮೇಶ್ ಜಾರಕಿಹೊಳಿ ಪ್ರಚಾರ

ಕಾಂಗ್ರೆಸ್ ತೊರೆದು ಬಿಜೆಪಿಗೆ ಬನ್ನಿ ಎಂದು ನಾನು ಕರೆದಿದ್ದಾಗಿ ನಿನ್ನೆ ಲಕ್ಷ್ಮೀ ಹೆಬ್ಬಾಳ್ಕರ್​​​ ಹೇಳಿದ್ದಾರೆ. ನಾನು ಹೀಗೆ ಹೇಳಲು ಸಾಧ್ಯವಿದೆಯಾ? ರಾಜಕಾರಣದಲ್ಲಿ ಸುಳ್ಳು ಹೇಳಲು ಮಿತಿ ಇರಬೇಕು. ಲಕ್ಷ್ಮೀ ಹೆಬ್ಬಾಳ್ಕರ್​ರನ್ನು ಬಿಜೆಪಿಗೆ ಬಾ ಎಂದು ನಾನು ದೇವರಾಣೆಗೂ ಕರೆದಿಲ್ಲ ಎಂದರು.

For All Latest Updates

TAGGED:

ABOUT THE AUTHOR

...view details