ಬೆಳಗಾವಿ: ರಮೇಶ್ ಜಾರಕಿಹೊಳಿ ಮತ್ತು ಡಿ.ಕೆ ಶಿವಕುಮಾರ್ ನಡುವೆ ವೈಯಕ್ತಿಕ ಯುದ್ಧ ನಡೆಯುತ್ತಿದೆ ಎಂದು ರಮೇಶ್ ಜಾರಕಿಹೊಳಿ ಹೇಳಿದರು. ಬೆಳಗಾವಿ ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಇದೊಂದು ವೈಯಕ್ತಿಯ ಯುದ್ಧ. ರಮೇಶ್ ಜಾರಕಿಜೊಳಿ ಅಂಜಿ ಮನೆಯಲ್ಲಿ ಕೂತಿದ್ದಾರೆ ಅಂದು ಕೊಂಡಿದ್ರು. ಆದರೆ, ನಾನು ಮತ್ತೆ ರಾಜಕಾರಣದಲ್ಲಿ ಸಕ್ರಿಯವಾಗಿದ್ದೇನೆ ಎಂದರು.
ರಾಜಕಾರಣಿ ಅನ್ನೋಕ್ಕೆ ಯೋಗ್ಯತೆ ಇಲ್ಲ:ಮಿಸ್ಟರ್ ಶಿವಕುಮಾರ್ ಅವರನ್ನು ರಾಜಕಾರಣಿ ಅನ್ನೋಕ್ಕೆ ಯೋಗ್ಯತೆ ಇಲ್ಲ. ರಾಜಕಾರಣದಲ್ಲಿ ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ದ ನಾಲಾಯಕ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸುಮಾರು ಒಂದು ವರ್ಷದಿಂದ ಸುಮ್ಮನೆ ಕುಳಿತಿದ್ದೆ. ನಾನು ವೈಯಕ್ತಿಕ ಯಾರನ್ನು ದ್ವೇಷ ಮಾಡುವುದಿಲ. ನಾನು ಯಾವುದೇ ಸಿಡಿ ರಿಲೀಸ್ ಮಾಡಲ್ಲ. ಜಾರಕಿಹೊಳಿ ಯಾವುದೇ ಗಾಳಿಯಲ್ಲಿ ಗುಂಡು ಹಾರಿಸಲ್ಲ. ಡಿ.ಕೆ ಶಿವಕುಮಾರ್ ಒಬ್ಬ ಮಹಿಳೆ ಮುಖಾಂತರ ನನ್ನ ಜೀವನ ಹಾಳು ಮಾಡಿದ್ದಾರೆ ಎಂದು ಆರೋಪಿಸಿದರು.
ಡಿ.ಕೆ ಶಿವಕುಮಾರ್ ಒಬ್ಬ ವ್ಯಕ್ತಿಯ ಜೀವನ ಹಾಳು ಮಾಡಿ ರಾಜಕೀಯ ಮಾಡುತ್ತಾರೆ. ಅವರು, ಸಾವಿರಾರು ಕೋಟಿ ಮಾಲೀಕ. ಸಿಡಿ ಲೇಡಿ ಹಾಗೂ ಅವರಿಗೆ ಸಹಕರಿಸಿದ ಎಲ್ಲರನ್ನು ಸಿಬಿಐ ತಂಡ ಆದಷ್ಟು ಬೇಗ ಬಂಧಿಸಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು. ಡಿ.ಕೆ ಶಿವಕುಮಾರ್ ಅವರು ಹಾಸ್ಪಿಟಲ್ಗೆ ಅಡ್ಮಿಟ್ ಆದಾಗ ನೋಡೋಕೆ ಹೋಗಿದ್ದೆ. ಆಗ ಡಿಕೆಶಿ ಅವರ ಪತ್ನಿ ಉಷಾ ಅವರು ಕಾಂಗ್ರೆಸ್ ಪಕ್ಷ ಬಿಡದಂತೆ ಬೇಡಿಕೊಂಡಿದ್ದರು. ನಾನು ಮಾತನಾಡಿರುವ ಒಂದು ಅವಾಚ್ಯ ಶಬ್ದವನ್ನು ಎಡಿಟ್ ಮಾಡಿ ಕಿತ್ತೂರು ಚನ್ನಮ್ಮ ಹೋಲಿಸಿ ಜಾತಿ ಮಧ್ಯ ಜಗಳ ಹಚ್ಚುವ ಷಡ್ಯಂತ್ರ ಮಾಡಿದ್ದಾರೆ. ಸಿಡಿ ಮಾಡಿ ಹಲವು ಅಧಿಕಾರಿಗಳನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆ. ಶಿವಕುಮಾರ್ ಅವರ ಬ್ಲಾಕ್ ಮನಿ ಬಗ್ಗೆ ಸಿಬಿಐ ಮೂಲಕ ತನಿಖೆ ನಡೆಸಬೇಕೆಂದು ರಮೇಶ್ ಜಾರಕಿಹೊಳಿ ಒತ್ತಾಯಿಸಿದರು.
ಸಿಡಿ ಟೀಮ್ ಬಂಧಿಸಬೇಕು:ನನ್ನ ಬಳಿ 120ಕ್ಕೂ ಹೆಚ್ಚು ಡಾಕ್ಯುಮೆಂಟ್ ಇದೆ. ಆದರೆ, ಬಿಡುಗಡೆ ಮಾಡಲ್ಲ. ಸಿಡಿ ವಿಚಾರ ಈಗ ಬಹಿರಂಗ ಪಡಿಸಲ್ಲ. ಸಿಡಿ ಸಂಬಂಧ ಎಲ್ಲ ದಾಖಲಾತಿಗಳನ್ನು ಸಿಬಿಐಗೆ ನೀಡುತ್ತೇನೆ. ಆದರೆ, ಸಿಡಿಯಲ್ಲಿ ಆಡಿಯೋ ಬಿಡುಗಡೆ ಮಾಡುತ್ತೇನೆ. ಸಿಡಿ ಲೇಡಿ, ಸುರೇಶ ಮತ್ತು ನರೇಶ ಅವರನ್ನು ಬಂಧಿಸಬೇಕು. ಈ ಪ್ರಕರಣದಲ್ಲಿ ಯಾರೇ ಇದ್ದರೂ ಅವರನ್ನು ಬಂಧಿಸಬೇಕು. ಸಿಡಿ ಕೇಸ್ನಲ್ಲಿ ಹಲವು ನಾಯಕರಿದ್ದಾರೆ.