ಅಥಣಿ (ಬೆಳಗಾವಿ) :ನಿನ್ನೆ ನೀಡಿರುವ ಹೇಳಿಕೆಗೆಳಿಗೆ ನಾನು ಬದ್ಧ ಇದ್ದೇನೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಅಥಣಿಯ ಸ್ನೇಹಿತರ ಮನೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಭೇಟಿಯಲ್ಲಿ ಏನೂ ವಿಶೇಷತೆಯಿಲ್ಲ, ಇದೊಂದು ಸೌಹಾರ್ದ ಭೇಟಿ ಎಂದಿದ್ದಾರೆ.
ಸದ್ಯ ರಾಜಕೀಯ ವಿಷಗಳನ್ನು ಬಹಿರಂಗವಾಗಿ ಮಾತನಾಡಬೇಡಿ ಎಂದು ನಮ್ಮ ಹಿರಿಯ ಮುಖಂಡರು ಸೂಚನೆ ನೀಡಿದ್ದಾರೆ. ಇದರಿಂದಾಗಿ ಒಂದು ವಾರದ ವರೆಗೆ ಏನೂ ಪ್ರತಿಕ್ರಿಯೆ ನೀಡುವುದಿಲ್ಲ. ನಿನ್ನೆ ಆಡಿರುವ ಮಾತಿಗೆ ನಾನು ಬದ್ಧನಾಗಿದ್ದೇನೆಂದು ಎಂದಿದ್ದಾರೆ.