ಕರ್ನಾಟಕ

karnataka

ETV Bharat / state

ರಮೇಶ್​​ ಜಾರಕಿಹೊಳಿ‌ ನೇತೃತ್ವದಲ್ಲಿ ಮುಸ್ಲಿಂ ಮುಖಂಡರ ಸಭೆ : ವಿದ್ಯಾರ್ಥಿಗಳಿಗೆ ಹಿಜಾಬ್ ,ಕೇಸರಿ ಧರಿಸದಂತೆ ಸೂಚನೆ - ಗೋಕಾಕ್​​ನಲ್ಲಿ ರಮೇಶ್​​ ಜಾರಕಿಹೊಳಿ‌ ನೇತೃತ್ವದಲ್ಲಿ ಸಭೆ

ಸೋಮವಾರದಿಂದ ಶಾಲೆಗಳು ಪ್ರಾರಂಭವಾಗುತ್ತಿದ್ದು, ಮಕ್ಕಳ ಪರೀಕ್ಷೆಗಳು ಹತ್ತಿರ ಬರುತ್ತಿರುವೆ. ಹೀಗಾಗಿ, ನಾವೆಲ್ಲರೂ ಮಕ್ಕಳ ಶಿಕ್ಷಣಕ್ಕೆ ಸಹಕಾರ ನೀಡಬೇಕಿದೆ. ಶಾಂತಿ, ಸೌಹಾರ್ದಯುತವಾಗಿ ನಾವೆಲ್ಲರೂ ನೆಲೆಸಿದ್ದೇವೆ. ತಾಲೂಕಿನಲ್ಲಿ ಶಾಂತಿ, ಸುವ್ಯವಸ್ಥೆ ಕದಡುವ ಕೆಲಸ ಮಾಡುವವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಇದೇ ಸಂದರ್ಭದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು..

Ramesh Jarkiholi make meeting with muslim leaders at Gokak
ಮುಸ್ಲಿಂ ಮುಖಂಡರ ಜೊತೆ ರಮೇಶ್​​ ಜಾರಕಿಹೊಳಿ ಸಭೆ

By

Published : Feb 13, 2022, 3:59 PM IST

ಗೋಕಾಕ್​​ :ನಮ್ಮ ದೇಶ ಸಂವಿಧಾನದ ಮೇಲೆ ನಿಂತಿದೆ. ನ್ಯಾಯಾಲಯದ ಆದೇಶ ಪಾಲನೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಹೀಗಾಗಿ, ವಿದ್ಯಾರ್ಥಿಗಳು ಶಾಲೆ-ಕಾಲೇಜು ಆವರಣಗಳಲ್ಲಿ ಹಿಜಾಬ್ ಹಾಗೂ ಕೇಸರಿ ಶಾಲು ಧರಿಸಬಾರದು ಎಂದು ಮಾಜಿ ಸಚಿವ ರಮೇಶ್​​ ಜಾರಕಿಹೊಳಿ ಮನವಿ ಮಾಡಿದರು.

ನಗರದ ತಮ್ಮ ಗೃಹ ಕಚೇರಿಯಲ್ಲಿ ಹಿಜಾಬ್ ವಿಚಾರ ಕುರಿತು ಗೋಕಾಕ್ ಮತಕ್ಷೇತ್ರದ ಮುಖಂಡರುಗಳ ಹಾಗೂ ಅಧಿಕಾರಿಗಳ ತುರ್ತು ಸಭೆ ನಡೆಸಿ ಮಾತನಾಡಿದರು. ಹಿಜಾಬ್ ವಿಚಾರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅಶಾಂತಿ ಕದಡುವ ಕೆಲಸಗಳಾಗುತ್ತಿವೆ.

ನಿಮ್ಮ ಮಕ್ಕಳಿಗೆ ಬುದ್ಧಿವಾದ ಹೇಳುವುದು ನಿಮ್ಮ ಕರ್ತವ್ಯವಾಗಿದೆ. ಶಾಲೆ-ಕಾಲೇಜು ಆವರಣಗಳಲ್ಲಿ ಯಾವುದೇ ಧರ್ಮದ ಉಡುಪುಗಳನ್ನು ಹಾಕದಂತೆ ಹೈಕೋರ್ಟ್​​​​ ಮಧ್ಯಂತರ ಆದೇಶ ನೀಡಿದೆ‌. ನ್ಯಾಯಾಲಯದ ಆದೇಶವನ್ನು ನಾವೆಲ್ಲರೂ ಪಾಲನೆ ಮಾಡಬೇಕು ಎಂದರು.

ಮಂಡ್ಯದ ಕಾಲೇಜಿನಲ್ಲಿ ಯುವತಿಯೋರ್ವಳು ಅಲ್ಲಾ ಹು ಅಕ್ಬರ್ ಘೋಷಣೆ ಎಂದು ಭಾವೋದ್ವೇಗವಾಗಿ ಹೇಳಿದ್ದಾಳೆ. ಆದರೆ, ಶಾಂತಿ, ಸುವ್ಯಸ್ಥೆ ಹಾಳು ಮಾಡಲು ಅವಳಿಗೆ ಬಹುಮಾನ ಘೋಷಿಸಿದ್ದಾರೆ. ಇಂತಹ ಘಟನೆಗಳು ನಡೆಯಬಾರದಿತ್ತು. ಹೀಗಾಗಿ, ನಾವೆಲ್ಲರೂ ಸಹೋದರತ್ವದಲ್ಲಿ ಸಹಬಾಳ್ವೆ ನಡೆಸಬೇಕು.

ಸೋಮವಾರದಿಂದ ಶಾಲೆಗಳು ಪ್ರಾರಂಭವಾಗುತ್ತಿದ್ದು, ಮಕ್ಕಳ ಪರೀಕ್ಷೆಗಳು ಹತ್ತಿರ ಬರುತ್ತಿರುವೆ. ಹೀಗಾಗಿ, ನಾವೆಲ್ಲರೂ ಮಕ್ಕಳ ಶಿಕ್ಷಣಕ್ಕೆ ಸಹಕಾರ ನೀಡಬೇಕಿದೆ. ಶಾಂತಿ, ಸೌಹಾರ್ದಯುತವಾಗಿ ನಾವೆಲ್ಲರೂ ನೆಲೆಸಿದ್ದೇವೆ. ತಾಲೂಕಿನಲ್ಲಿ ಶಾಂತಿ, ಸುವ್ಯವಸ್ಥೆ ಕದಡುವ ಕೆಲಸ ಮಾಡುವವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಇದೇ ಸಂದರ್ಭದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ಸಭೆಯಲ್ಲಿ ತಹಶೀಲ್ದಾರ್​​​​ ಪ್ರಕಾಶ್​​​ ಹೊಳೆಪ್ಪಗೋಳ ಹಾಗೂ ಡಿವೈಎಸ್‌ಪಿ ಮನೋಜ್​​​ಕುಮಾರ್​​​, ಸಿಪಿಐಗಳಾದ ಗೋಪಾಲ ರಾಠೋಡ್, ಶ್ರೀಶೈಲ್ ಬ್ಯಾಕೂಡ, ಪಿಎಸ್‌ಐಗಳಾದ ನಾಗರಾಜ ಖಿಲಾರೆ, ಕೆ ವಾಲಿಕಾರ, ಕ್ಷೇತ್ರ ಶಿಕ್ಷಣಾಧಿಕಾರಿ ಜಿಬಿ ಬಳಗಾರ, ನಗರಸಭೆ ಸ್ಥಾಯಿ ಸಮಿತಿ ಚೇರಮನ್ ಕುತ್ಬುದ್ದೀನ್ ಮೊದಲಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ: ವಕೀಲರ ಗಲಾಟೆ ಪ್ರಕರಣ: ವಕೀಲ ಜಗದೀಶ್​ಗೆ ನ್ಯಾಯಾಂಗ ಬಂಧನ

For All Latest Updates

TAGGED:

ABOUT THE AUTHOR

...view details