ಗೋಕಾಕ: ಗೋಕಾಕ್ ಕ್ಷೇತ್ರದ ಉಪಚುನಾವಣೆ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಹರಿಹಾಯ್ದಿದ್ದಾರೆ.
ಸಮ್ಮಿಶ್ರ ಸರ್ಕಾರ ಬೀಳಲು ಬಿಎಸ್ವೈ, ಶಾ ಕಾರಣ ಅಲ್ಲ, ಕಾಂಗ್ರೆಸ್ ನಡವಳಿಕೆ ಕಾರಣ: ರಮೇಶ್ ಜಾರಕಿಹೊಳಿ - ಗೋಕಾಕ ಕ್ಷೇತ್ರದಲ್ಲಿ ಸಭೆ ಲೆಟೆಸ್ಟ್ ನ್ಯೂಸ್
ಗೋಕಾಕ್ ಕ್ಷೇತ್ರದ ಉಪಚುನಾವಣೆ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಹರಿಹಾಯ್ದಿದ್ದಾರೆ.
ಮಕ್ಕಳಗೇರಿ ಗ್ರಾಮದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿನ ವಿದ್ಯಾಮಾನ, ಅಲ್ಲಿನ ನಡುವಳಿಕೆ ಬಗ್ಗೆ ನಾವು ರೋಸಿ ಹೋಗಿದ್ದೇವು. ತಕ್ಷಣ ಪಕ್ಷವನ್ನು ಬಿಡದೆ ಆರು ತಿಂಗಳ ಕಾಲ ಮಾಧ್ಯಮಗಳಲ್ಲಿ ನಮ್ಮ ಅಸಮಾಧಾನ ಹೊರ ಹಾಕಿದ್ದೆವು. ಕಾಂಗ್ರೆಸ್ ಪಕ್ಷದ ಹಿರಿಯರು ಎಲ್ಲಾ ಸಮಸ್ಯೆಗಳನ್ನು ಪರಿಹರಿಸುತ್ತಾರೆ ಅಂದುಕೊಂಡಿದ್ದೆ, ಆದರೆ ಕಾಂಗ್ರೆಸ್ ಪಕ್ಷದ ದುರಂಹಕಾರ, ಸೊಕ್ಕಿನ ಮಾತುಗಳಿಂದ ಬೇಸತ್ತು ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾಗಿದ್ದೇನೆ ಎಂದರು.
ಸಮ್ಮಿಶ್ರ ಸರ್ಕಾರ ಬೀಳಲು ಬಿಜೆಪಿಯದ್ದು ಒಂದು ಪರ್ಸೆಂಟ್ ಕೂಡ ಸಂಬಂಧ ಇಲ್ಲ. ಅಮಿತ್ ಶಾ ಮತ್ತು ಯಡಿಯೂರಪ್ಪನವರನ್ನು ನಂಬಿ ಬಿಜೆಪಿ ಪಕ್ಷ ಸೇರಿದ್ದೇವೆ. ಸಮ್ಮಿಶ್ರ ಸರ್ಕಾರ ಯಡಿಯೂರಪ್ಪ ಅಧಿಕಾರದ ದಾಹದಿಂದ ಬಿದ್ದಿಲ್ಲ. ಕಾಂಗ್ರೆಸ್ ಪಕ್ಷದ ನಡುವಳಿಕೆಯಿಂದ ಸರ್ಕಾರ ಬಿದ್ದಿದ್ದು. ಕಾಂಗ್ರೆಸ್ ಮತ್ತು ಕುಮಾರಸ್ವಾಮಿ ಬಹಳ ಸುಳ್ಳುಗಾರರು. ಇಂತಹ ಜನರೊಂದಿಗೆ ನಮ್ಮ ಜೀವನ ಆಗುವುದಿಲ್ಲ ಎಂದು ಪಕ್ಷ ಬಿಟ್ಟೆವು ಎಂದರು.