ಕರ್ನಾಟಕ

karnataka

ETV Bharat / state

ರಮೇಶ್ ಜಾರಕಿಹೊಳಿ‌ ಉತ್ತರ ಕರ್ನಾಟಕದ ಹಿರೋ, ಬಿಎಸ್​ವೈ ಸಿಎಂ ಆಗಲು ಅವರೇ ಕಾರಣ: ನಡಹಳ್ಳಿ - ಗೋಕಾಕ್ ಉಪ ಚುನಾವಣೆ

ಯಡಿಯೂರಪ್ಪ ಬಹುಮತ ಪಡೆಯಲು ಈ ಹಿಂದೆ ಅನೇಕ ಸಲ ಜಾರಕಿಹೊಳಿ‌ ಕುಟುಂಬ ಸಹಾಯ ಮಾಡಿದೆ ಎಂದು ಬಿಜೆಪಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದ್ದಾರೆ.

ರಮೇಶ್ ಜಾರಕಿಹೊಳಿ‌ ಒಬ್ಬ ಉತ್ತರ ಕರ್ನಾಟಕದ ಹಿರೋ

By

Published : Nov 20, 2019, 8:08 PM IST

ಗೋಕಾಕ್​:ಸಮ್ಮಿಶ್ರ ಸರ್ಕಾರದಲ್ಲಿ ರಮೇಶ್​ ಜಾರಕಿಹೊಳಿ‌ ಮಂತ್ರಿಯಾಗಿದ್ದರು. ಅಲ್ಲೆ ಮಂತ್ರಿಯಾಗಿ ಇರಬಹುದಿತ್ತು ಆದರೆ ಯಡಿಯೂರಪ್ಪ ಅವರನ್ನ ಸಿಎಂ ಮಾಡಲು ರಮೇಶ್​ ಜಾರಕಿಹೊಳಿ‌ ತ್ಯಾಗ ಮಾಡಿದ್ದಾರೆ ಎಂದು ಬಿಜೆಪಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದ್ದಾರೆ.

ರಮೇಶ್ ಜಾರಕಿಹೊಳಿ‌ ಒಬ್ಬ ಉತ್ತರ ಕರ್ನಾಟಕದ ಹಿರೋ

ನಗರದ ಎನ್‌ಎಸ್‌ಎಫ್‌ ಅತಿಥಿ ಗೃಹದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ರಮೇಶ್​ ಜಾರಕಿಹೊಳಿ‌ ಒಬ್ಬರೇ ಅಲ್ಲ 17 ಜನ ಶಾಸಕರನ್ನು ಕರೆದುಕೊಂಡ ಹೋದರು. ಮಂತ್ರಿ ಪದವಿ ತೆಗೆದ್ರು, ಅಪಮಾನ ಮಾಡಿದ್ರು. ಕೆಲವರು ತೋಳ ಬಂತು ತೋಳ ಎಂದು ಅಪಹಾಸ್ಯ ಮಾಡಿದರು ಆದರೆ ರಮೇಶ್​ ಬಹಳ ಚಾಣಾಕ್ಷತನಿಂದ ಸಾಮೂಹಿಕ ರಾಜೀನಾಮೆ ನೀಡಿದ್ದಾರೆ ಎಂದಿದ್ದಾರೆ.

ಜಾರಕಿಹೊಳಿ‌ ಕುಟುಂಬಕ್ಕೆ ಯಡಿಯೂರಪ್ಪಗೆ ಅವಿನಾಭಾವ ಸಂಬಂಧವಿದೆ. ಸಿಎಂ ಯಡಿಯೂರಪ್ಪ ಹುಟ್ಟು ಹೋರಾಟಗಾರ. ಈ ಹಿಂದೆ ಯಡಿಯೂರಪ್ಪ ಸಿಎಂ ಆಗಬೇಕು ಎಂದು ಬಾಲಚಂದ್ರ ಜಾರಕಿಹೊಳಿ‌ ಸಹಾಯ ಮಾಡಿದ್ದಾರೆ. ಜಗದೀಶ್ ಶೆಟ್ಟರ್ ಸಿಎಂ ಮಾಡಲು ಬಾಲಚಂದ್ರ ಜಾರಕಿಹೊಳಿ‌ ಕಾರಣರಾಗಿದ್ದಾರೆ.

ಯಡಿಯೂರಪ್ಪ ಬಹುಮತ ಪಡೆಯಲು ಈ ಹಿಂದೆ ಅನೇಕ ಸಲ ಜಾರಕಿಹೊಳಿ‌ ಕುಟುಂಬ ಸಹಾಯ ಮಾಡಿದೆ. ರಮೇಶ್​ ಜಾರಕಿಹೊಳಿ‌ ಒಬ್ಬ ಉತ್ತರ ಕರ್ನಾಟಕದ ಹಿರೋ ಆಗಿದ್ದಾರೆ. ಕೆಲ ವಿಷಪೂರಿತ ಹಾವುಗಳು ರಮೇಶ್​ ಜಾರಕಿಹೊಳಿ ಮೇಲೆ‌ ಹೊಂಚು‌ ಹಾಕುತ್ತಿವೆ. ಇವನ್ನು ಒಳಗೆ ಬರದಂತೆ ನೋಡಿಕೊಳ್ಳಬೇಕು.ಇದು ರಮೇಶ್​ ಜಾರಕಿಹೊಳಿ‌ ಚುನಾವಣೆ ಅಲ್ಲ ಬಿಜೆಪಿ ಕಾರ್ಯಕರ್ತರ ಚುನಾವಣೆ ಎಂದು ತಿಳಿದು ಮತ ಹಾಕಿ ಎಂದು ಮನವಿ ಮಾಡಿದ್ದಾರೆ.

ABOUT THE AUTHOR

...view details