ಕರ್ನಾಟಕ

karnataka

ETV Bharat / state

ರಮೇಶ ಜಾರಕಿಹೊಳಿ ಸಿಡಿ ಪ್ರಕರಣ: ಯುವತಿಯ ಬಗ್ಗೆ ಬೆಳಗಾವಿ ಪೊಲೀಸರಿಗೆ ಮಹತ್ವದ ಸುಳಿವು - ದೆಹಲಿಯಲ್ಲಿ ಕೊನೆಯ ಬಾರಿ ಯುವತಿ ಫೋನ್​ ಆ್ಯಕ್ಟಿವ್​,

ರಮೇಶ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ಬಗ್ಗೆ ಬೆಳಗಾವಿ ಪೊಲೀಸರಿಗೆ ಮಹತ್ವದ ಸುಳಿವೊಂದು ಸಿಕ್ಕಿದೆ.

Ramesh Jarkiholi cd case, Ramesh Jarkiholi cd case news, Young woman phone active, Young woman phone last time active in Delhi, ರಮೇಶ ಜಾರಕಿಹೊಳಿ ಸಿಡಿ ಪ್ರಕರಣ, ರಮೇಶ ಜಾರಕಿಹೊಳಿ ಸಿಡಿ ಪ್ರಕರಣ ಸುದ್ದಿ, ಯುವತಿ ಫೋನ್​ ಆ್ಯಕ್ಟಿವ್​, ಕೊನೆಯ ಬಾರಿ ಯುವತಿ ಫೋನ್​ ಆ್ಯಕ್ಟಿವ್​, ದೆಹಲಿಯಲ್ಲಿ ಕೊನೆಯ ಬಾರಿ ಯುವತಿ ಫೋನ್​ ಆ್ಯಕ್ಟಿವ್​, ಯುವತಿಯ ಬಗ್ಗೆ ಬೆಳಗಾವಿ ಪೊಲೀಸರಿಗೆ ಮಹತ್ವದ ಸುಳಿವು,
ರಮೇಶ ಜಾರಕಿಹೊಳಿ ಸಿಡಿ ಪ್ರಕರಣ

By

Published : Mar 18, 2021, 12:13 PM IST

ಬೆಳಗಾವಿ:ರಮೇಶ್ ಜಾರಕಿಹೊಳಿ ಜೊತೆ ವಿಡಿಯೋದಲ್ಲಿದ್ದಾರೆ ಎನ್ನಲಾದ ಯುವತಿ ಬಗ್ಗೆ ಬೆಳಗಾವಿ ಪೊಲೀಸರಿಗೆ ಮಹತ್ವದ ಸುಳಿವೊಂದು ಸಿಕ್ಕಿದೆ.

ರಾಸಲೀಲೆ ಪ್ರಕರಣದ‌ ಸಿಡಿ ಬಹಿರಂಗವಾದ ನಂತರ ಯುವತಿ ನಾಪತ್ತೆ ಆಗಿದ್ದಾಳೆ. ಪ್ರಕರಣ ಬೆಳಕಿಗೆ ಬಂದು 14 ದಿನಗಳ ನಂತ್ರ ಯುವತಿಯ ಪೋಷಕರು ಇಲ್ಲಿನ ಎಪಿಎಂಸಿ ಠಾಣೆಯಲ್ಲಿ ಕಿಡ್ನಾಪ್ ಕೇಸ್ ದಾಖಲಿಸಿದ್ದರು. ಕೇಸ್ ದಾಖಲಾಗುತ್ತಿದ್ದಂತೆ ಎಚ್ಚೆತ್ತ ಮಹಾನಗರ ಪೊಲೀಸರು ಮಾರ್ಕೆಟ್ ಎಸಿಪಿ ಸದಾಶಿವ ಕಟ್ಟಿಮನಿ ನೇತೃತ್ವದಲ್ಲಿ ತಂಡ ರಚಿಸಿ, ಯುವತಿಗಾಗಿ ಶೋಧ ಕೈಗೊಂಡಿದ್ದಾರೆ.

ತನಿಖೆ ಚುರುಕುಗೊಳಿಸಿದ ಮಹಾನಗರ ಪೊಲೀಸರಿಗೆ ಯುವತಿ ಬಗ್ಗೆ ಮಹತ್ವದ ಸುಳಿವು ಸಿಕ್ಕಿದೆ. ಯುವತಿ ಬಳಸುತ್ತಿದ್ದ ಮೊಬೈಲ್ ಕೊನೆಯ ಸಲ ಆ್ಯಕ್ಟಿವ್ ಆಗಿದ್ದು, ದೆಹಲಿಯಲ್ಲಿ ಎಂಬುವುದು ಗೊತ್ತಾಗಿದೆ. ಈ ಸಂಗತಿಯನ್ನು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

ಸಿಡಿ ಬಿಡುಗಡೆ ಆಗಿ ಕೆಲ ದಿನ ಬೆಂಗಳೂರಿನಲ್ಲಿದ್ದ ಯುವತಿ ಬಳಿಕ ದೆಹಲಿಗೆ ತೆರಳಿದ್ದಳು ಎಂಬುವುದು ತನಿಖೆಯಿಂದ ದೃಢಪಟ್ಟಿದೆ. ಯುವತಿ ಪತ್ತೆಗಾಗಿ ಈಗಾಗಲೇ ಬೆಂಗಳೂರಿಗೆ ತೆರಳಿರುವ ಎಸಿಪಿ ಸದಾಶಿವ ಕಟ್ಟಿಮನಿ ನೇತೃತ್ವದ ತಂಡ ಪರಿಶೀಲನೆ ನಡೆಸುತ್ತಿದೆ. ಯುವತಿಯ ಫೋನ್ ಕೊನೆಯ ಬಾರಿ ದೆಹಲಿಯಲ್ಲಿ ಆ್ಯಕ್ಟಿವ್ ಆಗಿರುವ ಕಾರಣ ಬೆಳಗಾವಿ ಪೊಲೀಸರು ದೆಹಲಿಗೂ ಹೋಗುವ ಸಾಧ್ಯತೆ ದಟ್ಟವಾಗಿದೆ.

ABOUT THE AUTHOR

...view details