ಚಿಕ್ಕೋಡಿ :ಕೊರೊನಾ ಸೋಂಕಿನ ಪ್ರಭಾವ ಕಡಿಮೆಯಾದ ಬಳಿಕ ಚಿಕ್ಕೋಡಿ ಜಿಲ್ಲೆಯ ಬಗ್ಗೆ ಸಿಎಂ ಅವರ ಬಳಿ ಚರ್ಚೆ ಮಾಡುವೆ ಎಂದು ಬೆಳಗಾವಿ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಆಶ್ವಾಸನೆ ನೀಡಿದ್ದಾರೆ ಎಂದು ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಬಿ.ಆರ್.ಸಂಗಪ್ಪಗೋಳ ಹೇಳಿದ್ದಾರೆ.
ಚಿಕ್ಕೋಡಿ ಪ್ರವಾಸ ಮಂದಿರದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ಚಿಕ್ಕೋಡಿ ಜಿಲ್ಲೆ ಮಾಡಲು ಯಾರು ಯಾರು ರಾಜಕಾರಣ ಮಾಡಿದ್ದಾರೆ ನನಗೆ ಗೊತ್ತು. ನಾಟಕದ ಮಾತು ಹಾಗೂ ಸ್ವಚ್ಛ ಮಾತು ನನಗೆ ಅರ್ಥವಾಗುತ್ತದೆ. ಇವರಿಗೆ ರಾಜಕಾರಣ ಕಲಿಸಿದವನು ನಾನು. ಆದರೆ, ರಮೇಶ್ ಜಾರಕಿಹೊಳಿ ಇದ್ದಿದ್ದು ಇದ್ದಂತೆ ಮಾತನಾಡುವ ಸ್ವಭಾವದವರು. ಇಲ್ಲ ಅಂದರೆ ಇಲ್ಲ, ಹೂಂ ಅಂದರೆ ಹೂಂ ಎನ್ನುವ ಮಾತುಗಳನ್ನು ರಮೇಶ್ ಮಾತನಾಡುತ್ತಾರೆ. ಇವರ ಮಾತುಗಳನ್ನ ಕೇಳಿದರೆ ಬಹುತೇಕ ಚಿಕ್ಕೋಡಿ ಜಿಲ್ಲೆಯನ್ನಾಗಿ ಮಾಡುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ಹೇಳಿದರು.