ಬೆಳಗಾವಿ: ಯೋಗ ನಮ್ಮ ದೈನಂದಿನ ಬದುಕಿನ ಅವಿಭಾಜ್ಯ ಅಂಗವಾಗಿದ್ದು, ಕೊರೊನಾವನ್ನು ಹೊಡೆದೊಡಿಸಲು ಎಲ್ಲರೂ ಯೋಗವನ್ನು ಮಾಡಬೇಕು ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ವಿಶ್ವ ಯೋಗ ದಿನದ ಶುಭಾಶಯಗಳನ್ನು ನಾಡಿನ ಜನತೆಗೆ ತಿಳಿಸಿದ್ದಾರೆ.
ನಾಡಿನ ಜನತೆಗೆ ಯೋಗ ದಿನದ ಶುಭಾಶಯ ತಿಳಿಸಿದ ರಮೇಶ್ ಜಾರಕಿಹೊಳಿ - Ramesh jarakiholi news
ಯೋಗವು ದೈಹಿಕ, ಮಾನಸಿಕ, ಅಧ್ಯಾತ್ಮಿಕ ಮತ್ತು ಬೌದ್ಧಿಕವಾಗಿ ಮನುಷ್ಯನನ್ನು ಗಟ್ಟಿಗೊಳಿಸುತ್ತದೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ವಿಶ್ವ ಯೋಗ ದಿನದ ಶುಭಾಶಯಗಳನ್ನು ನಾಡಿನ ಜನತೆಗೆ ತಿಳಿಸಿದ್ದಾರೆ.
Ramesh jarkiholi
ಯೋಗ ಭಾರತೀಯರ ಹೆಮ್ಮೆ. ಜೊತೆಗೆ ಯೋಗವು ದೈಹಿಕ, ಮಾನಸಿಕ, ಅಧ್ಯಾತ್ಮಿಕ ಮತ್ತು ಬೌದ್ಧಿಕವಾಗಿ ಮನುಷ್ಯನನ್ನು ಗಟ್ಟಿಗೊಳಿಸುತ್ತದೆ. ಮೇಲಾಗಿ ಯೋಗ ಜೀವನ, ಜ್ಞಾನ, ವಿಜ್ಞಾನವಾಗಿದೆ. ನಾಡಿನ ಸಮಸ್ತ ಜನತೆ ಆರೋಗ್ಯಪೂರ್ಣವಾಗಿರಬೇಕು. ಹೀಗಾಗಿ ಎಲ್ಲರೂ ಯೋಗವನ್ನು ಕಡ್ಡಾಯವಾಗಿ ಮೈಗೂಡಿಸಿಕೊಳ್ಳಬೇಕು ಎಂದು ವಿಶ್ವ ಯೋಗ ದಿನದ ಶುಭಾಶಯವನ್ನು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.