ಕರ್ನಾಟಕ

karnataka

ETV Bharat / state

ಮುಂದಿನ ಚುನಾವಣೆಯಲ್ಲಿ ಲಕ್ಷ್ಮೀ ಸೋತ್ರೆ ಮರಾಠಿ ಮತದಾರರಿಗೆ ಕುಕ್ಕರ್​ ಕೊಡ್ತೀನಿ: ರಮೇಶ್​ ಜಾರಕಿಹೊಳಿ - Cooker gift by ramesh jarakiholi

ನಾನು ಮಾಡಿದ ತಪ್ಪಿನಿಂದ ಲಕ್ಷ್ಮೀ ಹೆಬ್ಬಾಳ್ಕರ್​ ಶಾಸಕಿಯಾಗಿದ್ದು. ಮುಂದಿನ ಚುನಾವಣೆಯಲ್ಲಿ ಅವ್ರು ಸೋಲಬೇಕು. ಅದಕ್ಕಾಗಿ ನಿಮಗೆಲ್ಲ ಒಂದೊಂದು ಕುಕ್ಕರ್​ ಕೊಡ್ತೀನಿ. ಅಷ್ಟೇ ಅಲ್ಲದೆ ಐದು ಕೋಟಿ ಫಂಡಿಂಗ್ ಮಾಡುತ್ತೇನೆ ಎಂದು ನಾವಗೆ ಗ್ರಾಮದಲ್ಲಿ ಹಿಂದೂಪರ‌ ಸಂಘಟನೆ ಆಯೋಜಿಸಿದ್ದ ಭೋಜನಕೂಟದಲ್ಲಿ ಪಾಲ್ಗೊಂಡ ರಮೇಶ್​ ಜಾರಕಿಹೊಳಿ ಹೇಳಿದ್ದಾರೆ.

lakshmi hebbalkar
ಮುಂದಿನ ಚುನಾವಣೆಯಲ್ಲಿ ಲಕ್ಷ್ಮೀ ಸೋತರೆ ನಿಮಗೆಲ್ಲಾ ಕುಕ್ಕರ್​ ಕೊಡ್ತೀನಿ

By

Published : Dec 30, 2019, 11:20 AM IST

ಬೆಳಗಾವಿ:ನಾನು ಮಾಡಿದ ತಪ್ಪಿನಿಂದ ಲಕ್ಷ್ಮೀ ಹೆಬ್ಬಾಳ್ಕರ್​ ಶಾಸಕಿಯಾಗಿದ್ದು. ಮುಂದಿನ ಚುನಾವಣೆಯಲ್ಲಿ ಅವ್ರು ಸೋಲಬೇಕು. ಅದಕ್ಕಾಗಿ ನಿಮಗೆಲ್ಲ ಒಂದೊಂದು ಕುಕ್ಕರ್​ ಕೊಡ್ತೀನಿ. ಅಷ್ಟೇ ಅಲ್ಲದೆ ಐದು ಕೋಟಿ ರೂಪಾಯಿ ಫಂಡಿಂಗ್ ಮಾಡುತ್ತೇನೆ ಎಂದು ಶಾಸಕ ರಮೇಶ್​ ಜಾರಕಿಹೊಳಿ ಹೇಳಿದ್ದಾರೆ.

ತಾಲೂಕಿನ ನಾವಗೆ ಗ್ರಾಮದಲ್ಲಿ ಹಿಂದೂಪರ‌ ಸಂಘಟನೆ ಆಯೋಜಿಸಿದ್ದ ಭೋಜನಕೂಟದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮರಾಠ ಮುಖಂಡರ ಜತೆ ಸಭೆ ಮಾಡಿ ಹೆಬ್ಬಾಳ್ಕರ್ ಬೆಂಬಲಿಸುವಂತೆ ಹೇಳಿದ್ದೇ ನನ್ನ ತಪ್ಪಾಯ್ತು. ಒಳ್ಳೆಯ ಸಂಸ್ಕೃತಿಯ ನಾಡಿನ‌ ಹೆಣ್ಣುಮಗಳು ಎಂದು ಸಹಾಯ‌ ಮಾಡಿದ್ದೆ. ಈಗ ಬೆಳಗಾವಿ ಗ್ರಾಮೀಣ ಕ್ಷೇತ್ರದ ಜನರಲ್ಲಿ ನಾನು ಕ್ಷಮೆ ಕೇಳುತ್ತೇನೆ ಎಂದರು.

ಮುಂದಿನ ಚುನಾವಣೆಯಲ್ಲಿ ಲಕ್ಷ್ಮೀ ಸೋತರೆ ನಿಮಗೆಲ್ಲಾ ಕುಕ್ಕರ್​ ಕೊಡ್ತೀನಿ

ಬೆಳಗಾವಿ ಗ್ರಾಮೀಣ ಕ್ಷೇತ್ರ ಮರಾಠಿ ಭಾಷಿಕರ‌ ಹಕ್ಕು. ಅಲ್ಲಿ‌ ಮರಾಠಿ ಸಮುದಾಯದ ‌ಜನರೇ ಆಯ್ಕೆ‌ ಆಗಬೇಕು.‌ ಮುಂದಿನ ‌ಚುನಾವಣೆಯಲ್ಲಿ ಮರಾಠಿ‌ ಭಾಷಿಕ‌ ಮುಖಂಡರು ‌ಒಮ್ಮತದಿಂದ ಅಭ್ಯರ್ಥಿಯನ್ನು ‌ಆಯ್ಕೆ ‌ಮಾಡಬೇಕು. ಮರಾಠಿ‌ ಭಾಷಿಕರು‌ ಒಂದಾಗಬೇಕು. ಈಗಾಗಲೇ ‌17 ಮಂದಿ ಬಿಜೆಪಿಗೆ ಬಂದಿದ್ದಾರೆ.‌ ಇನ್ನೂ 17 ಮಂದಿ ಬಿಜೆಪಿ‌ ಸೇರುತ್ತಾರೆ. ಸಂಘದ ಕಾರ್ಯಕರ್ತರ ‌ಶ್ರಮದಿಂದಲೇ ಉಪಚುನಾವಣೆಯಲ್ಲಿ ಬಿಜೆಪಿ‌‌ 12 ಸ್ಥಾನ‌ಗಳನ್ನು ಗೆದ್ದಿದೆ. ಮುಂದಿನ ಬಾರಿ ಬೆಳಗಾವಿ ಗ್ರಾಮೀಣ, ಖಾನಾಪುರ, ಯಮಕನಮರಡಿ ಮೂರು ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸೋ ಜವಾಬ್ದಾರಿ ನಾನು ತೆಗೆದುಕೊಳ್ಳುತ್ತೇನೆ. ಕಾರ್ಯಕರ್ತರು ಗಟ್ಟಿಯಾದ್ರೆ ಯಾವುದು ಅಸಾಧ್ಯವಲ್ಲ ಎಂದರು.

ಬಿಜೆಪಿ‌‌ ಸರ್ಕಾರದಲ್ಲಿ ನಾನು ಸಚಿವ ಆಗಬಹುದು, ಆಗದೇನೂ ಇರಬಹುದು. ಸಚಿವ ಆಗುವುದು ಬಿಡುವುದು ದೇವರಿಚ್ಛೆ. ನಾನು ಸಚಿವನಾದ ಬಳಿಕ ಬೆಳಗಾವಿ ಗ್ರಾಮೀಣ ಕ್ಷೇತ್ರದ ಸುಳೆಬಾವಿ ಗ್ರಾಮದಲ್ಲಿ ಕಾರ್ಯಕ್ರಮ ಮಾಡೋಣ. ಗ್ರಾಮೀಣ ಕ್ಷೇತ್ರದ ಐವತ್ತು ಸಾವಿರ ಜನರನ್ನು ಸೇರಿಸೋಣ. ಈಗಿಂದಲೇ ಚುನಾವಣೆ ತಯಾರಿ ಮಾಡಬೇಕಿದೆ. ಮರಾಠಿ ಭಾಷಿಕ ಅಭ್ಯರ್ಥಿ ಯಾರಾಗಬೇಕು ಎಂಬುವುದನ್ನು ಹೈಕಮಾಂಡ್ ನಿರ್ಧರಿಸಲಿದ್ದಾರೆ. ಆದ್ರೆ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸುವ ಜವಾಬ್ದಾರಿ ನಂದು ಎನ್ನುವ ಮೂಲಕ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ ವಿರುದ್ಧ ರಮೇಶ್​ ಜಾರಕಿಹೊಳಿ ಗುಡುಗಿದ್ದಾರೆ.

ABOUT THE AUTHOR

...view details