ಬೆಳಗಾವಿ: ಸಮ್ಮಿಶ್ರ ಸರ್ಕಾರ ಪತನಕ್ಕೆ ಅಥಣಿ ಇಂದಾನೆ ಬಂಡಾಯ ಪ್ರಾರಂಭಯ್ತು. ಅನರ್ಹ ಶಾಸಕರನ್ನು ಕಾಂಗ್ರೆಸ್ ಪಕ್ಷವೇ ಹೊರಹಾಕಿದೆ ಎಂದು ಬಂಡಾಯ ಚಟುವಟಿಕೆಗಳಿಗೆ ನಾಯಕತ್ವವಹಿಸಿಕೊಂಡಿದ್ದ ರಮೇಶ್ ಜಾರಕಿಹೊಳಿ ಹೇಳಿಕೊಂಡಿದ್ದಾರೆ.
ಜಿಲ್ಲೆಯ ಅಥಣಿ ತಾಲೂಕಿನ ದರೂರು ಗ್ರಾಮದಲ್ಲಿ ಸಭೆ ನಡೆಸಿದ ರಮೇಶ್ ಸಾಹುಕಾರ್, ಕಳೆದ ಚುನಾವಣೆ ವೇಳೆ ಅಥಣಿ ಜನಕ್ಕೆ ನೀರಾವರಿ ಯೋಜನೆಗಳನ್ನು ನೀಡುತ್ತೇನೆ ಎಂದು ಭರವಸೆ ನೀಡಿದ್ದೆ. ಅಥಣಿ ಜನತೆ ಪ್ರಮುಖ ಮೂರು ಬೇಡಿಕೆಗಳನ್ನು ಮುಂದಿಟ್ಟಿದ್ದರು. ಯಾವುದೇ ಸರ್ಕಾರ ಬರಲಿ ಕರಿಮಸೂತಿ ಕಾಲುವೆ ನೀರಾವರಿ ಯೋಜನೆಗೆ ಪ್ರತಿ ವರ್ಷ 40 ಲಕ್ಷದಿಂದ ಒಂದು ಕೋಟಿವರೆಗೆ ಹಣ ಬಿಡುಗಡೆಯಾಗುತ್ತಿತ್ತು. ಆದರೆ, ಸಮ್ಮಿಶ್ರ ಸರ್ಕಾರದಲ್ಲಿ ಕರಿಮಸೂತಿ ನೀರಾವರಿ ಯೋಜನೆಗೆ ಹಣ ಬಿಡುಗಡೆ ಮಾಡಲಿಲ್ಲ. ಇದೇ ನನ್ನ ಅಸಮಾಧಾನಕ್ಕೆ ಕಾರಣ ಎಂದು ತಿಳಿಸಿದರು.