ಕರ್ನಾಟಕ

karnataka

ETV Bharat / state

ರಮೇಶ್ ಜಾರಕಿಹೊಳಿಗೆ ಸರ್ಕಾರ ಉರುಳಿಸುವ ಶಕ್ತಿ ಇದೆ.. ಸತೀಶ್ ಜಾರಕಿಹೊಳಿ ಹೇಳಿಕೆ..!

ರಾಜ್ಯ ರಾಜಕಾರಣದಲ್ಲಿ ನಾವು ನಾಲ್ವರು ಸಹೋದರರಿದ್ದೇವೆ. ನಾಲ್ವರು ಒಂದೇ ಎಂದು ಭಾವಿಸಬಾರದು. ನಾಲ್ವರು ಸಹೋದರರ ಕೆಲಸವೂ ಬೇರೆ ಬೇರೆ ಇದೆ. ಯಾರೂ ಕನ್ಫ್ಯೂಸ್​ ಮಾಡಿಕೊಳ್ಳಬಾರದು‌ ಎಂದು ಸತೀಶ್​ ಜಾರಕಿಹೊಳಿ ಹೇಳಿದ್ದಾರೆ.

Sathish Jarakiholi
ಸತೀಶ್ ಜಾರಕಿಹೊಳಿ

By

Published : Sep 24, 2022, 7:12 PM IST

ಬೆಳಗಾವಿ:ರಾಜ್ಯದಲ್ಲಿ ರಮೇಶ್ ಜಾರಕಿಹೊಳಿಗೆ ಸರ್ಕಾರ ಉರುಳಿಸುವ ಶಕ್ತಿ ಇದೆ. ಅವರು ಇನ್ನೊಮ್ಮೆ ಸರ್ಕಾರ ಉರುಳಿಸುವ ಪ್ರಯತ್ನ ಮಾಡಲಿ ಎಂದು ನಾವೆಲ್ಲ ದೇವರಲ್ಲಿ ಪ್ರಾರ್ಥಿಸೋಣ‌ ಎಂದು ಸಹೋದರ ರಮೇಶ್ ಅವರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಕಾಲೆಳೆದಿದ್ದಾರೆ.

ಗೋಕಾಕ್ ನಗರದಲ್ಲಿ ನಡೆದ ಉಪ್ಪಾರ ಸಮಾಜದ ಕಾರ್ಯಕ್ರಮದಲ್ಲಿ ಭಾಷಣದ ವೇಳೆ ರಮೇಶ್ ಜಾರಕಿಹೊಳಿ ಕಾಲೆಳೆದ ಸತೀಶ್ ಜಾರಕಿಹೊಳಿ, ರಾಜ್ಯ ರಾಜಕಾರಣದಲ್ಲಿ ನಾವು ನಾಲ್ವರು ಸಹೋದರರಿದ್ದೇವೆ. ನಾಲ್ವರು ಒಂದೇ ಎಂದು ಭಾವಿಸಬಾರದು. ನಾಲ್ವರು ಸಹೋದರರ ಕೆಲಸವೂ ಬೇರೆ ಬೇರೆ ಇದೆ. ಯಾರೂ ಕನ್ಫ್ಯೂಸ್​ ಮಾಡಿಕೊಳ್ಳಬಾರದು‌ ಎಂದರು.

ಸತೀಶ್ ಜಾರಕಿಹೊಳಿ

ನಮ್ಮಲ್ಲಿ ಸರ್ಕಾರ ಉರಳಿಸುವ ಶಕ್ತಿ ರಮೇಶ್ ಜಾರಕಿಹೊಳಿಗೆ ಮಾತ್ರ ಇದೆ. ಉಳಿದ ನಾಲ್ವರು ಸಹೋದರರು ಸರ್ಕಾರ ಉರಳಿಸುವುದರ ಭಾಗವಾಗುವುದಿಲ್ಲ ಎಂದು ಹೇಳಿದರು.

ಇದನ್ನೂ ಓದಿ:ಬಿಜೆಪಿ ಭ್ರಷ್ಟಾಚಾರ ಗಿನ್ನೆಸ್​ ದಾಖಲೆ ಸೇರುವ ನಿರೀಕ್ಷೆ: ಸತೀಶ ಜಾರಕಿಹೊಳಿ‌ ವ್ಯಂಗ್ಯ

ABOUT THE AUTHOR

...view details