ಬೆಳಗಾವಿ: ರಮೇಶ್ ಜಾರಕಿಹೊಳಿ ಅವರ ರಾಜಕೀಯವೇ ಬೇರೆ. ಯಾವ ವಿಷಯ, ಯಾಕೆ ಮಾತನಾಡಿದೆ ಎಂದು ಅವರಿಗೆ ಗೊತ್ತಿರುವುದಿಲ್ಲ. ಹಾಗಾಗಿ ನನ್ನ ಸಮನಾಗಿ ಅವರಿಗೆ ವಿಚಾರ ಮಾಡುವ ಶಕ್ತಿ ಇಲ್ಲ ಎಂದು ರಮೇಶ್ ಜಾರಕಿಹೊಳಿ ವಿರುದ್ಧ ಮಾಜಿ ಸಚಿವ ಎಂ.ಬಿ. ಪಾಟೀಲ್ ಗುಡುಗಿದ್ದಾರೆ.
ರಮೇಶ್ ಜಾರಕಿಹೊಳಿ ನನ್ನಷ್ಟು ವಿಚಾರವಂತರಲ್ಲ: ಎಂ.ಬಿ. ಪಾಟೀಲ್ - ಎಂ.ಬಿ. ಪಾಟೀಲ್
ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಮಾಜಿ ಗೃಹ ಸಚಿವ ಎಂ.ಬಿ. ಪಾಟೀಲ್ ಅವರು, ನನಗೂ ನಮ್ಮ ಸರ್ಕಾರ ಇದ್ದ ಸಂದರ್ಭದಲ್ಲಿ ಅಸಮಾಧಾನ ಇತ್ತು. ಆದರೆ ನಾನು ಯಾವತ್ತಿಗೂ ಬಿಜೆಪಿ ಬಾಗಿಲಿಗೆ ಹೋಗಲಿಲ್ಲ. ಅಲ್ಲದೇ ನನ್ನ ಸಮನಾಗಿ ರಮೇಶ್ ಜಾರಕಿಹೊಳಿಗೆ ವಿಚಾರ ಮಾಡುವ ಶಕ್ತಿ ಇಲ್ಲ ಎಂದು ಅವರ ವಿರುದ್ಧ ಗುಡುಗಿದ್ದಾರೆ.
ಇಂದು ನಗರದಲ್ಲಿ ಕೇಂದ್ರ ಸರ್ಕಾರ ಪ್ರವಾಹ ಪರಿಹಾರ ನೀಡುವುದಕ್ಕೆ ವಿಳಂಬ ಮಾಡುತ್ತಿದೆ. ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಮಾಜಿ ಗೃಹ ಸಚಿವ ಎಂ.ಬಿ. ಪಾಟೀಲ್ ನನಗೂ ನಮ್ಮ ಸರ್ಕಾರ ಇದ್ದ ಸಂದರ್ಭದಲ್ಲಿ ಅಸಮಾಧಾನ ಇತ್ತು. ಆದರೆ ನಾನು ಯಾವತ್ತಿಗೂ ಬಿಜೆಪಿ ಬಾಗಿಲಿಗೆ ಹೋಗಲಿಲ್ಲ. ರಮೇಶ್ ಜಾರಕಿಹೊಳಿ ಮನೆಗೆ ನಾನು ಹೋಗಿಲ್ಲ. ಆದರೆ ನನ್ನ ಮನೆಗೆ ಅವರು ಬಂದಿದ್ದಾರೆ ಎಂದು ಪ್ರತಿಕ್ರಿಯಿಸಿದರು.
ನನ್ನ ಮನೆಗೆ ಬಂದು ಚಹಾ ಕುಡಿದವರು ಮಂತ್ರಿ ಆಗಿದ್ದಾರೆ ಎಂಬ ರಮೇಶ್ ಜಾರಕಿಹೊಳಿ ಹೇಳಿಕೆಗೆ ಟಾಂಗ್ ನೀಡಿದ ಎಂ.ಬಿ. ಪಾಟೀಲ್. ರಮೇಶ್ ಅವರು ನನ್ನ ಸಮನಾಗಿ ಯೋಚನೆ ಮಾಡುವ ಶಕ್ತಿ ಇಲ್ಲ. ಅವರು ಕೇವಲ ಮಹೇಶ್ ಕುಮಟಳ್ಳಿ ಅಂತವರ ಮಟ್ಟದಲ್ಲಿ ಮಾತನಾಡಲಿ ಎಂದರು.