ಕರ್ನಾಟಕ

karnataka

ETV Bharat / state

ರಮೇಶ್ ಜಾರಕಿಹೊಳಿ ಬೆಳಗಾವಿ ಜಿಲ್ಲೆಗೇ ಸಾಹುಕಾರ, ಅವರ ಬಗ್ಗೆ ಟೀಕೆ ಟಿಪ್ಪಣಿ ಮಾಡುವುದಿಲ್ಲ: ಲಕ್ಷಣ್​ ಸವದಿ - ETV Bharat kannada News

ಅಥಣಿ ಟಿಕೆಟ್​ ವಿಚಾರವಾಗಿ ರಮೇಶ ಜಾರಕಿಹೊಳಿ ಅಪಾರ್ಥ ಮಾಡಿಕೊಂಡಿದ್ದಾರೆ ಎಂದು ಲಕ್ಷಣ್​ ಸವದಿ ಹೇಳಿದರು.

Former DCM Laxman Savadi
ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ

By

Published : Mar 21, 2023, 4:14 PM IST

ರಮೇಶ ಜಾರಕಿಹೊಳಿ ಅವರು ಒಬ್ಬ ಪ್ರಬುದ್ಧ ರಾಜಕಾರಣಿ :ಲಕ್ಷಣ್​ ಸವದಿ

ಚಿಕ್ಕೋಡಿ (ಬೆಳಗಾವಿ) :ನಾನು ವರಿಷ್ಠರ ಹತ್ತಿರ ಟಿಕೆಟ್ ಕೇಳಿಲ್ಲ, ಬಿ ಫಾರಂ ಕೇಳಬೇಕೋ? ಕೇಳಬಾರದೋ? ಎಂಬುದನ್ನು ಜನರ ಅಭಿಪ್ರಾಯ ಸಂಗ್ರಹ ಮಾಡುತ್ತಿದ್ದೇನೆ. ಇದನ್ನೇ ರಮೇಶ್ ಜಾರಕಿಹೊಳಿ ಅವರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಅವರು ಹೇಳಿದರು. ವಿಧಾನಸಭೆ ಕ್ಷೇತ್ರ ಚುನಾವಣೆ ಹತ್ತಿರವಾಗುತ್ತದ್ದಂತೆ ಎಲ್ಲಾ ಪಕ್ಷಗಳಲ್ಲಿ ಟಿಕೆಟ್ ಆಕಾಂಕ್ಷಿಗಳು ಹೆಚ್ಚಾಗುತ್ತಿದ್ದು, ಜೊತೆಗೆ ಹಲವಾರು ಗೊಂದಲದಲ್ಲಿ ಸಿಲುಕಿಕೊಂಡಿದ್ದಾರೆ. ಈ ಒಂದು ವಿಚಾರದಿಂದ ಒಂದು ಪಕ್ಷ ಬಿಟ್ಟು ಮತ್ತೊಂದು ಪಕ್ಷಕ್ಕೆ ವಲಸೆ ಹೋಗುವ ಪ್ರಕ್ರಿಯೆ ನಡೆಯುತ್ತಿದೆ. ಈ ಬೆನ್ನಲ್ಲೇ ಸದ್ಯ ಬಿಜೆಪಿ ಭದ್ರಕೋಟೆಯಾಗಿರುವ ಅಥಣಿ ಕ್ಷೇತ್ರದ ಟಿಕೆಟ್​ಗಾಗಿ ಭಾರಿ ಪೈಪೋಟಿ ನಡೆಯುತ್ತಿದೆ.

ನಿನ್ನೆಯಷ್ಟೇ ಟಿಕೆಟ್​ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದ ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಅವರು, ಲಕ್ಷ್ಮಣ್ ಸವದಿ ಬುದ್ಧಿವಂತ ರಾಜಕಾರಣಿ, ಯಾಕೆ ಆ ರೀತಿ ಟಿಕೆಟ್​ ವಿಚಾರದಲ್ಲಿ ಗೊಂದಲ ಮಾಡುತ್ತಿದ್ದಾರೆ ಎಂಬುದು ತಿಳಿದಿಲ್ಲ ಎಂದು ಹೇಳಿಕೆ ನೀಡಿದ್ದರು. ಈ ಕುರಿತು ಅಥಣಿ ತಾಲೂಕಿನ ಯಂಕಂಚಿ ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಅವರು, ರಮೇಶ್​ ಜಾರಕಿಹೊಳಿ ಅವರು ಒಬ್ಬ ಪ್ರಬುದ್ಧ ರಾಜಕಾರಣಿ, ಅವರಿಗೆ ಅದು ಅರ್ಥ ಆಗುತ್ತದೆ ಎಂದು ನಾನು ತಿಳಿದಿದ್ದೇನೆ. ಜಾರಕಿಹೊಳಿಯವರು ಅಪಾರ್ಥ ಮಾಡಿಕೊಂಡಿದ್ದಾರೆ ಎಂದರು.

ಈ ಹೇಳಿಕೆ ಬಗ್ಗೆ ನಾನು ಟೀಕೆ ಮಾಡುವುದಕ್ಕೆ ಹೋಗುವುದಿಲ್ಲ. ಅವರು ಬಹಳ ದೊಡ್ಡವರು, ಬೆಳಗಾವಿ ಜಿಲ್ಲೆಯಲ್ಲೇ ಸಾಹುಕಾರ ಎಂದು ಹೆಸರು ಹೊಂದಿದವರು. ಅವರ ಬಗ್ಗೆ ಟೀಕೆ ಟಿಪ್ಪಣಿ ಮಾಡುವ ಅವಶ್ಯಕತೆ ಇಲ್ಲ ಅಂತ ನಾನು ತಿಳಿದಿದ್ದೇನೆ ಎಂದು ಲಕ್ಷಣ್​ ಸವದಿ ಅವರು ಪ್ರತಿಕ್ರಿಯಿಸಿದರು.

ಜನರ ನಿರ್ಧಾರವೇ ಅಂತಿಮ :ನಾನು ವರಿಷ್ಠರಲ್ಲಿ ಇನ್ನೂ ಟಿಕೆಟ್ ಕೇಳಿಲ್ಲ. ಬದಲಾಗಿ ಕ್ಷೇತ್ರದಲ್ಲಿ ಎಲ್ಲಾ ಸಮುದಾಯದ ಮುಖಂಡರ ಜೊತೆ ಸಮಾಲೋಚನೆ ನಡೆಸಿ ಜನರ ಬಳಿ ಅಭಿಪ್ರಾಯಗಳನ್ನು ಸಂಗ್ರಹಿಸಿ ನಂತರ ಟಿಕೆಟ್ ಕೇಳಬೇಕೋ ಅಥವಾ ಬೇಡವೋ ಅನ್ನೋದನ್ನು ನಾನು ನಿರ್ಧರಿಸುತ್ತೇನೆ. ಹಾಗು ಚುನಾವಣೆಯಲ್ಲಿ ನನ್ನ ಸ್ಪರ್ಧೆಗೆ ಜನಾಭಿಪ್ರಾಯ ಪಡೆದುಕೊಳ್ಳುವೆ ಎಂದು ಹೇಳಿದರು.

ಟಿಕೆಟ್​ ಕೇಳವ ವಿಚಾರವನ್ನು ಸಂಪೂರ್ಣ ಜವಬ್ದಾರಿಯನ್ನು ಜನರಿಗೆ ಬಿಟ್ಟಿದ್ದೇನೆ. ಒಂದು ವೇಳೆ ಜನರು ಟಿಕೆಟ್​ ಕೇಳೋದು ಬೇಡ ಎಂದರೇ ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ. ಇದೇ ತಿಂಗಳ 27ರ ಒಳಗೆ ಎಲ್ಲಾ ಸಮುದಾಯದ ಅಭಿಪ್ರಾಯ ಪಡೆದುಕೊಂಡು ಮುಂದಿನ ತೀರ್ಮಾನ ಮಾಡಲಾಗುವುದು ಎಂದು ಮಾಜಿ ಡಿಸಿಎಂ ಲಕ್ಷಣ್​ ಸವದಿ ಅವರು ಹೇಳಿದರು.

ಕೊಕಟನೂರ ಪಶು ವೈದ್ಯಕೀಯ ಮಹಾವಿದ್ಯಾಲಯ ಉದ್ಘಾಟನೆ ಕೇಂದ್ರದಿಂದ ಅನುಮತಿ ನೀಡಿದ ನಂತರವೇ ಲೋಕಾರ್ಪಣೆ ಮಾಡಲಾಗುವುದು. ಜೊತೆಗೆ ಕೆಲವು ಸನ್ನ ಪುಟ್ಟ ಕೆಲಸಗಳು ಬಾಕಿ ಇರುವುದರಿಂದ ಆದಷ್ಟು ಬೇಗನೆ ಮುಗಿಸಿಕೊಂಡು ಕೇಂದ್ರದ ವರಿಷ್ಠರು ಬಂದು ಈ ಕಾಲೇಜಿನ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ಲಕ್ಷ್ಮಣ್ ಸವದಿ ಅವರು ಹೇಳಿದರು.

ಇದನ್ನೂ ಓದಿ :ಮಹೇಶ್​ ಕುಮಟಳ್ಳಿಗೆ ಟಿಕೆಟ್​ ನೀಡದಿದ್ದರೆ ರಾಜಕೀಯ ನಿವೃತ್ತಿ: ರಮೇಶ್ ಜಾರಕಿಹೊಳಿ

ABOUT THE AUTHOR

...view details