ಕರ್ನಾಟಕ

karnataka

ETV Bharat / state

ನಾಳೆ ರಮೇಶ್​ ಜಾರಕಿಹೊಳಿ ನಿವಾಸದಲ್ಲಿ ಸಭೆ : ಬೆಂಬಲಿಗರಿಗೆ ಆಹ್ವಾನ - meeting

ನಾಳೆ ಗೋಕಾಕ್​ನ ತಮ್ಮ‌ಗೃಹ ಕಚೇರಿಯಲ್ಲಿ ರಮೇಶ ಜಾರಕಿಹೊಳಿ ಅಧ್ಯಕ್ಷತೆಯಲ್ಲಿ ಅತೃಪ್ತರ ಸಭೆ ನಡೆಯಲಿದೆ. ಈ ಸಭೆ ತೀವ್ರ ಕುತೂಹಲ ಮೂಡಿಸಿದೆ. ಈ ಸಂಬಂಧ ಈಗಾಗಲೇ ಬೆಂಬಲಿಗರಿಗೆ ಸಭೆಯ ಆಹ್ವಾನ ಪತ್ರಿಕೆ ಕಳುಹಿಸಲಾಗುತ್ತಿದೆ.

ನಾಳೆ ರಮೇಶ್​ ಜಾರಕಿಹೊಳಿ ಸಭೆ

By

Published : Jul 7, 2019, 4:11 PM IST

ಬೆಳಗಾವಿ‌: ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಮುಂಬೈನ ಐಶಾರಾಮಿ ಹೋಟೆಲಿನಲ್ಲಿ ತಂಗಿರುವ ಕಾಂಗ್ರೆಸ್ ರೆಬಲ್‌ ನಾಯಕ ರಮೇಶ ಜಾರಕಿಹೊಳಿ ನಾಳೆ ಗೋಕಾಕಿನಲ್ಲಿ‌ ಬೆಂಬಲಿಗರ ಸಭೆ ಕರೆದಿದ್ದಾರೆ.

ಗೋಕಾಕಿನ ತಮ್ಮ‌ಗೃಹ ಕಚೇರಿಯಲ್ಲಿ ರಮೇಶ ಜಾರಕಿಹೊಳಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಭೆ ತೀವ್ರ ಕುತೂಹಲ ಮೂಡಿಸಿದೆ. ಈ ಸಂಬಂಧ ಈಗಾಗಲೇ ಬೆಂಬಲಿಗರಿಗೆ ಸಭೆಯ ಆಹ್ವಾನ ಪತ್ರಿಕೆ ಕಳುಹಿಸಲಾಗುತ್ತಿದೆ.

ಆಹ್ವಾನ ಪತ್ರಿಕೆ ಈಟಿವಿ ಭಾರತಕ್ಕೆ ಲಭ್ಯವಾಗಿದೆ. ಸಭೆ ಹಿನ್ನೆಲೆಯಲ್ಲಿ ಮುಂಬೈನಿಂದ ನಾಳೆ ರಮೇಶ ಜಾರಕಿಹೊಳಿ ಗೋಕಾಕಿಗೆ ಬರುವ ಸಾಧ್ಯತೆ ಇದೆ.

ABOUT THE AUTHOR

...view details