ಕರ್ನಾಟಕ

karnataka

ETV Bharat / state

'ವೀರಶೈವ ಲಿಂಗಾಯತ ಸಮುದಾಯದ ನಾಯಕನನ್ನು ಸಿಎಂ ಆಗಿ ನೇಮಿಸಿರುವುದು ಸ್ವಾಗತಾರ್ಹ'

ಮೈಸೂರು ಪ್ರಾಂತ್ಯದಲ್ಲಿ ಆಗುತ್ತಿದ್ದ ಅಭಿವೃದ್ಧಿ ಕಾರ್ಯಗಳು ಉತ್ತರ ಕರ್ನಾಟಕದಲ್ಲಿ ಆಗ್ತಿಲ್ಲ ಎಂಬ ಕೂಗು ಕೇಳಿ ಬರುತ್ತಿತ್ತು. ಬೆಳಗಾವಿಯ ಸುವರ್ಣಸೌಧದಲ್ಲಿ ಎರಡು ವರ್ಷಗಳಿಂದ ಅಧಿವೇಶನ ಆಗಿಲ್ಲ. ರಾಜಧಾನಿ ಬೆಂಗಳೂರಿನ ಕಾರ್ಯಾಲಯಗಳನ್ನು ಸುವರ್ಣಸೌಧಕ್ಕೆ ಸ್ಥಳಾಂತರಿಸಬೇಕು. ಇದರಿಂದ ಅಭಿವೃದ್ಧಿಗೆ ಶಕ್ತಿ‌ ಬರುತ್ತದೆ. ಇದರ ಕಡೆ ಬೊಮ್ಮಾಯಿ ಹೆಚ್ಚಿನ ಲಕ್ಷ್ಯವಹಿಸಬೇಕು. ಉತ್ತರಕರ್ನಾಟಕದಲ್ಲಿ ಅಭಿವೃದ್ಧಿಗಳು ಕಾರ್ಯ ಕುಂಠಿತವಾಗಿದ್ದು, ಅದಕ್ಕೆ ವೇಗ ತರಬೇಕು.‌ ಈ ಭಾಗದ ರೈತ ಸಮುದಾಯಕ್ಕೆ ನೀರಿನ ಸೌಲಭ್ಯ ಒದಗಿಸಬೇಕು. ಮೌಲ್ಯಾಧರಿತ ಶಿಕ್ಷಣಕ್ಕೆ ಒತ್ತು ನೀಡಿ ಜಾತಿ-ಮತ-ವರ್ಗಗಳನ್ನು ಮರೆತು ಕೆಲಸ ಮಾಡಬೇಕು..

Rambapuri Swamiji
ರಂಭಾಪುರಿ ಪೀಠದ ಶ್ರೀ ಜಗದ್ಗುರು

By

Published : Jul 28, 2021, 3:49 PM IST

ಬೆಳಗಾವಿ : ಬಿಎಸ್‌ವೈ ಪದತ್ಯಾಗದಿಂದ‌ ಬಹುಸಂಖ್ಯಾತ ವೀರಶೈವ ಲಿಂಗಾಯತ ಸಮುದಾಯದವರು ಬೇಸರದಲ್ಲಿದ್ದರು. ಅದನ್ನು ಸರಿದೂಗಿಸಲು ಮತ್ತೋರ್ವ ವೀರಶೈವ ಲಿಂಗಾಯತ ಸಮುದಾಯದ ನಾಯಕನನ್ನು ಸಿಎಂ ಆಗಿ ನೇಮಕ ಮಾಡಿರುವುದು ಸ್ವಾಗತಾರ್ಹ ಎಂದು ರಂಭಾಪುರಿ ಪೀಠದ ಜಗದ್ಗುರುಗಳು ಹೇಳಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ರೇಸ್‌ನಲ್ಲಿ ನಾಲ್ಕೈದು ಜನರ ಹೆಸರು ಕೇಳಿ ಬಂದಿತ್ತು. ಆದ್ರೆ, ಬಸವರಾಜ್ ಬೊಮ್ಮಾಯಿ ಅವರನ್ನ ಸರ್ವಾನುಮತದಿಂದ ಆಯ್ಕೆ ಮಾಡಿರೋದು, ಅವರ ಪಕ್ಷದ ಒಗ್ಗಟ್ಟು, ದೂರದೃಷ್ಟಿಗೆ ಸಾಕ್ಷಿ ಎಂದರು.

ಬೊಮ್ಮಾಯಿ ಸಿಎಂ ಆಗಿರುವುದಕ್ಕೆ ರಂಭಾಪುರಿ ಪೀಠದ ಜಗದ್ಗುರುಗಳ ಪ್ರತಿಕ್ರಿಯೆ..

ನೂತನ ಸಿಎಂ ಬಸವರಾಜ್​​ ಬೊಮ್ಮಾಯಿ ಚಾಣಾಕ್ಷ್ಯ ರಾಜಕಾರಣಿ, ದಕ್ಷ ಆಡಳಿತಗಾರ, ಯಾವುದೇ ಆರೋಪಗಳಿಲ್ಲ. ಹೀಗಾಗಿ, ಬಿಜೆಪಿಯ ಎಲ್ಲಾ ಶಾಸಕರನ್ನು ವಿಶ್ವಾಸಕ್ಕೆ ತಗೆದುಕೊಂಡು ಹೋಗುವ ಸಾಮರ್ಥ್ಯವಿದೆ. ಬಿಎಸ್‌ವೈ ಇದರಲ್ಲಿ ಹೆಚ್ಚಿನ ಮುತುವರ್ಜಿವಹಿಸಿರೋದುವುದು ಕಾಣುತ್ತಿದೆ.‌ ಬಿಎಸ್‌ವೈ ಮಾತಿಗೆ ರಾಷ್ಟ್ರೀಯ ನಾಯಕರು ಗೌರವ ಕೊಟ್ಟಿದ್ದಾರೆ ಎಂದು ಭಾವಿಸಿದ್ದೇವೆ ಎಂದರು.

ಮೈಸೂರು ಪ್ರಾಂತ್ಯದಲ್ಲಿ ಆಗುತ್ತಿದ್ದ ಅಭಿವೃದ್ಧಿ ಕಾರ್ಯಗಳು ಉತ್ತರ ಕರ್ನಾಟಕದಲ್ಲಿ ಆಗ್ತಿಲ್ಲ ಎಂಬ ಕೂಗು ಕೇಳಿ ಬರುತ್ತಿತ್ತು. ಬೆಳಗಾವಿಯ ಸುವರ್ಣಸೌಧದಲ್ಲಿ ಎರಡು ವರ್ಷಗಳಿಂದ ಅಧಿವೇಶನ ಆಗಿಲ್ಲ. ರಾಜಧಾನಿ ಬೆಂಗಳೂರಿನ ಕಾರ್ಯಾಲಯಗಳನ್ನು ಸುವರ್ಣಸೌಧಕ್ಕೆ ಸ್ಥಳಾಂತರಿಸಬೇಕು. ಇದರಿಂದ ಅಭಿವೃದ್ಧಿಗೆ ಶಕ್ತಿ‌ ಬರುತ್ತದೆ.

ಇದರ ಕಡೆ ಬೊಮ್ಮಾಯಿ ಹೆಚ್ಚಿನ ಲಕ್ಷ್ಯವಹಿಸಬೇಕು. ಉತ್ತರಕರ್ನಾಟಕದಲ್ಲಿ ಅಭಿವೃದ್ಧಿಗಳು ಕಾರ್ಯ ಕುಂಠಿತವಾಗಿದ್ದು, ಅದಕ್ಕೆ ವೇಗ ತರಬೇಕು.‌ ಈ ಭಾಗದ ರೈತ ಸಮುದಾಯಕ್ಕೆ ನೀರಿನ ಸೌಲಭ್ಯ ಒದಗಿಸಬೇಕು. ಮೌಲ್ಯಾಧರಿತ ಶಿಕ್ಷಣಕ್ಕೆ ಒತ್ತು ನೀಡಿ ಜಾತಿ-ಮತ-ವರ್ಗಗಳನ್ನು ಮರೆತು ಕೆಲಸ ಮಾಡಬೇಕು ಎಂದರು.

ಈವರೆಗೂ ಬಿಜೆಪಿ ಗುಂಪುಗಳಾಗಿ ಕೆಲಸ ಮಾಡುತ್ತಿದ್ದರು. ಸಿಎಂ ಬೊಮ್ಮಾಯಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ಕೆಲಸ ಮಾಡಬೇಕು. ಬಿಎಸ್‌ವೈ ದೂರದೃಷ್ಟಿ, ಸಂಕಲ್ಪಿತ ಯೋಜನೆ ಸಾಕಾರಗೊಳಿಸುವ ನಿಟ್ಟಿನಲ್ಲಿ ಬೊಮ್ಮಾಯಿ ಕೆಲಸ ಮಾಡಲಿ ಎಂದು ಶ್ರೀಗಳು ಶುಭ ಹಾರೈಸಿದರು.

ಇದನ್ನೂ ಓದಿ:ನಾನು ರಬ್ಬರ್​ ಸ್ಟಾಂಪ್​ ಆಗಿರಲ್ಲ, ಆಡಳಿತಾತ್ಮಕ ಸ್ಟಾಂಪ್​ ಆಗುತ್ತೇನೆ: ಸಿಎಂ ಬೊಮ್ಮಾಯಿ

ABOUT THE AUTHOR

...view details