ಗೋಕಾಕ: ಬಿ ಎಸ್ ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿಯೋದಕ್ಕೆ ಕಾರಣ ರಮೇಶ ಜಾರಕಿಹೊಳಿ ರಾಜೀನಾಮೆ ಎಂದು ಬಿಜೆಪಿ ರಾಜ್ಯಸಭೆ ಸದಸ್ಯ ಪ್ರಭಾಕರ್ ಕೋರೆ ಹೇಳಿದರು.
'ಯಡಿಯೂರಪ್ಪ ಸಿಎಂ ಆಗಿದ್ದೇ ರಮೇಶ್ ಜಾರಕಿಹೊಳಿ ರಾಜೀನಾಮೆಯಿಂದ..' - belgavi by election latest news
ಕಾಂಗ್ರೆಸ್ನಲ್ಲಿ ಇರಲು ಸಾಧ್ಯವಿಲ್ಲದೇ ನಾ ಓಡಿ ಬಂದೆ. ಕೆಟ್ಟ ಪಕ್ಷದಲ್ಲಿ ಇದ್ದೀಯಾ ಎಂದು ನಾನು ಅನೇಕ ಬಾರಿ ರಮೇಶ ಜಾರಕಿಹೊಳಿಗೆ ಹೇಳುತ್ತಿದ್ದೆ. ಈಗ ರಮೇಶ್ ಜಾರಕಿಹೊಳಿ ಬಿಜೆಪಿ ಸೇರಿರುವುದು ಸಂತಸ ತಂದಿದೆ ಎಂದು ಹೇಳಿದರು
ನಗರದ ಕೆಎಲ್ಇ ಶಾಲೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ನನಗೆ ಹಾಗೂ ರಮೇಶ ಜಾರಕಿಹೊಳಿ ಇಬ್ಬರಿಗೂ, ವಿರೇಂದ್ರ ಪಾಟೀಲ್ ಟಿಕೆಟ್ ನೀಡಿದ್ದರು. ಬೆಂಗಳೂರಿನಿಂದ ಕ್ಷೇತ್ರಕ್ಕೆ ಬರುವಷ್ಟರಲ್ಲಿಯೇ ಟಿಕೆಟ್ ಬದಲಾವಣೆ ಆಗಿತ್ತು. ರಮೇಶ, ನಾನು ಇಬ್ಬರೂ ಮೊದಲು ಕಾಂಗ್ರೆಸ್ ಮುಖಂಡರು. ಆದರೆ, ಆಗಿನ ಕಾಂಗ್ರೆಸ್, ಈಗಿನ ಕಾಂಗ್ರೆಸ್ ಬೇರೆಯಾಗಿದೆ ಎಂದು ರಾಜ್ಯಸಭಾ ಸದಸ್ಯ ಪ್ರಭಾಕರ್ ಕೋರೆ ಹೇಳಿದರು.
ಕಾಂಗ್ರೆಸ್ನಲ್ಲಿ ಇರಲು ಸಾಧ್ಯವಿಲ್ಲದೇ ನಾ ಓಡಿ ಬಂದೆ. ಕೆಟ್ಟ ಪಕ್ಷದಲ್ಲಿ ಇದ್ದೀಯಾ ಎಂದು ನಾನು ಅನೇಕ ಬಾರಿ ರಮೇಶ ಜಾರಕಿಹೊಳಿಗೆ ಹೇಳುತ್ತಿದ್ದೆ. ಈಗ ರಮೇಶ್ ಜಾರಕಿಹೊಳಿ ಬಿಜೆಪಿ ಸೇರಿರುವುದು ಸಂತಸ ತಂದಿದೆ ಎಂದು ಹೇಳಿದರು.