ಕರ್ನಾಟಕ

karnataka

ETV Bharat / state

ಸಂಸತ್​ನಲ್ಲಿ ಪ್ರತಿಪಕ್ಷಗಳನ್ನು‌ ನಿಯಂತ್ರಿಸಿದ್ದು ಮಾರ್ಷಲ್​​ಗಳಲ್ಲ, ಗೂಂಡಾಗಳು: ಹನುಮಂತಯ್ಯ - Hanumanthaiah's outrage against central govt

ದೇಶದ ಭದ್ರತೆಗೆ ಧಕ್ಕೆ ತರುವ ಕೃತ್ಯಕ್ಕೆ ಕೇಂದ್ರ ‌ಸರ್ಕಾರ ಕೈ ಹಾಕಿದೆ. ರಾಜಕೀಯ ನಾಯಕರು, ಪತ್ರಕರ್ತರ ಫೋನ್ ‌ಕದ್ದಾಲಿಕೆ ಮಾಡಲಾಗಿದೆ ಎಂದು ರಾಜ್ಯಸಭಾ ಸದಸ್ಯ ಹನುಮಂತಯ್ಯ ಆರೋಪಿಸಿದ್ದಾರೆ.

rajya-sabha-member-hanumanthaiah
ರಾಜ್ಯಸಭಾ ಸದಸ್ಯ ಹನುಮಂತಯ್ಯ

By

Published : Aug 16, 2021, 6:49 PM IST

ಬೆಳಗಾವಿ: ಸಂಸತ್ ಮುಂಗಾರು ಅಧಿವೇಶನ ವೇಳೆ ಪ್ರತಿಪಕ್ಷದವರನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ‌ ಗೂಂಡಾಗಳನ್ನು ನಿಯೋಜಿಸಿದೆ ಎಂದು ರಾಜ್ಯಸಭಾ ಸದಸ್ಯ ಹನುಮಂತಯ್ಯ ಆರೋಪಿಸಿದ್ದಾರೆ.

ಈ ಕುರಿತು ನಗರದಲ್ಲಿ ಮಾತನಾಡಿದ ಅವರು, ಅಧಿವೇಶನ ವೇಳೆ ಗಲಾಟೆ ಆದಾಗ ಅಲ್ಲಿ ಮಾರ್ಷಲ್​ಗಳು ಇರಲಿಲ್ಲ. ಸದನದ ಬಗ್ಗೆ ತಿಳುವಳಿಕೆ ಇಲ್ಲದಿರುವ ಹೊರಗಿನ ಗೂಂಡಾಗಳನ್ನು ಅಲ್ಲಿ ಕರೆ ತರಲಾಗಿತ್ತು. ಕೇಂದ್ರ ಸರ್ಕಾರ ಯಾವ ರೀತಿ ವರ್ತಿಸುತ್ತಿದೆ ಎಂಬುದು ಇದರಿಂದಲೇ ಗೊತ್ತಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಹಿಟ್ಲರ್ ರೀತಿಯಲ್ಲಿ ಆಡಳಿತ ‌ನಡೆಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ರಾಜ್ಯಸಭಾ ಸದಸ್ಯ ಹನುಮಂತಯ್ಯ

ರಾಜ್ಯಸಭೆ ಕಲಾಪದ ಗಲಾಟೆ ಬಗ್ಗೆ ಸ್ಪೀಕರ್ ಕಾಗೇರಿ ಹಾಗೂ ಬಿಜೆಪಿ ನಾಯಕರ ಹೇಳಿಕೆಗೆ ಹನುಮಂತಯ್ಯ ಇದೇ ವೇಳೆ ತಿರುಗೇಟು ನೀಡಿದರು. ಅಧಿವೇಶನ ಮುಂದೂಡಿದ ಬಳಿಕ ಬಿಜೆಪಿಯ 8 ನಾಯಕರು ಮಾಧ್ಯಮಗೋಷ್ಟಿ ನಡೆಸಿದ್ದಾರೆ. ಕಾಂಗ್ರೆಸ್ ‌ನಾಯಕರೇ ಸಂಸತ್ ಅಧಿವೇಶನಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿದರು.

ಪ್ರಧಾನಿ ‌ಮೋದಿ ಆದಿಯಾಗಿ ಹಲವು ನಾಯಕರು ವಿಪಕ್ಷಗಳ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಸ್ಪೀಕರ್ ಕಾಗೇರಿಯವರು ತಮ್ಮ ಘನತೆ ಗೌರವ ಮೀರಿ ಟೀಕೆ ಮಾಡಿದ್ದಾರೆ. ಕಲಾಪದಲ್ಲಿ ಕಾಂಗ್ರೆಸ್ ‌ಸೇರಿ ಎಲ್ಲ ಪ್ರತಿಪಕ್ಷಗಳು ಪೆಗಾಸಸ್ ಚರ್ಚೆಗೆ ಒತ್ತಾಯಿಸಿದ್ದವು. ಈ ಸಂಬಂಧ ಮಾಧ್ಯಮಗಳಲ್ಲಿ ಸರಣಿ ವರದಿಗಳು ಬಂದಿವೆ. ಇದಕ್ಕಾಗಿ ದೇಶದ ಹಲವು ಜನರು ಸುಪ್ರೀಂಕೋರ್ಟ್ ‌ಮೆಟ್ಟಿಲೇರಿದ್ದರು. ಪೆಗಾಸಸ್ ವಿಷಯ ಸದನದಲ್ಲಿ ಚರ್ಚೆ ಆಗಬೇಕು ಎಂಬ ಆಗ್ರಹ ನಮ್ಮದಾಗಿತ್ತು ಎಂದರು.

ಬೆಲೆ ಏರಿಕೆಯಿಂದ ಜನರು ಕಂಗೆಟ್ಟಿದ್ದಾರೆ:ದೇಶದ ಭದ್ರತೆಗೆ ಧಕ್ಕೆ ತರುವ ಕೃತ್ಯಕ್ಕೆ ಕೇಂದ್ರ ‌ಸರ್ಕಾರ ಕೈ ಹಾಕಿದೆ. ರಾಜಕೀಯ ನಾಯಕರು, ಪತ್ರಕರ್ತರ ಫೋನ್ ‌ಕದ್ದಾಲಿಕೆ ಮಾಡಲಾಗಿದೆ. ಮೊದಲ ಆದ್ಯತೆಯಾಗಿ ಪೆಗಾಸಸ್ ಚರ್ಚೆಗೆ ಬೇಡಿಕೆ ಇಡಲಾಗಿತ್ತು. ರೈತರ ಪ್ರತಿಭಟನೆ, ಕೋವಿಡ್ ‌ನಿಯಂತ್ರಣದಲ್ಲಿ ವೈಫಲ್ಯದ ಚರ್ಚೆಗೆ ಅವಕಾಶ ಕೇಳಲಾಗಿತ್ತು. ದೇಶದಲ್ಲಿ ದಿನಬಳಕೆಯ ವಸ್ತುಗಳ ಬೆಲೆ ಏರಿಕೆಯಿಂದ ಜನರು ಕಂಗೆಟ್ಟಿದ್ದಾರೆ ಎಂದರು.

ಸರ್ಕಾರದ ವರ್ತನೆಯೇ ಕಾರಣ:ಈ ಎಲ್ಲ ‌ವಿಷಯಗಳ ಬಗ್ಗೆ ಚರ್ಚೆ ಆಗಬೇಕು ಎಂಬ ಬೇಡಿಕೆ ನಮ್ಮದಾಗಿತ್ತು.‌ ಪೆಗಾಸಸ್ ಚರ್ಚೆ ಆಗಿದ್ದರೆ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್​ ಶಾ ರಾಜೀನಾಮೆ ‌ನೀಡಬೇಕಾಗುತ್ತಿತ್ತು. ಹೀಗಾಗಿಯೇ ಪ್ರತಿಪಕ್ಷ ನಾಯಕರ ಬೇಡಿಕೆಗೆ ಕೇಂದ್ರ ‌ಸರ್ಕಾರ ಅವಕಾಶ ನೀಡಿಲ್ಲ.‌ ಮುಂಗಾರು ಅಧಿವೇಶನ ಹಾಳಾಗಲು ಬಿಜೆಪಿ ಸರ್ಕಾರದ ವರ್ತನೆಯೇ ಕಾರಣ ಎಂದು ಟೀಕಿಸಿದರು.

ಓದಿ:ಸಚಿವ ಎ ನಾರಾಯಣಸ್ವಾಮಿ ಸ್ವಾಗತಿಸುವ ವೇಳೆ ಅವಘಡ: ಪೊಲೀಸ್ ಸಿಬ್ಬಂದಿ ಕಾಲಿನ ಮೇಲೆ ಹರಿದ ಜೀಪ್

ABOUT THE AUTHOR

...view details