ಕರ್ನಾಟಕ

karnataka

ETV Bharat / state

ಬಿಜೆಪಿ ಕಾರ್ಯಕರ್ತರ ಆಧಾರಿತ ಪಕ್ಷ ; ರಾಜ್ಯಸಭೆ ಬಿಜೆಪಿ ಅಭ್ಯರ್ಥಿ ಈರಣ್ಣ ಕಡಾಡಿ - Iranna Kadadi responds

ಪ್ರಭಾಕರ್ ಕೋರೆ, ರಮೇಶ್ ಕತ್ತಿ ನಾವು ಒಂದೇ ಕುಟುಂಬದ ಸದಸ್ಯರು. ಅವರ ಹಿಂಬಾಲಕರಾಗಿ ನಾನು ಕೆಲಸ ಮಾಡಿದ್ದೇನೆ. ನನಗೆ ಟಿಕೆಟ್ ಕೊಟ್ಟಿದ್ದಕ್ಕೆ ಪ್ರಭಾಕರ್ ಕೋರೆ, ರಮೇಶ್ ಕತ್ತಿ ಖುಷಿ ಪಡುತ್ತಾರೆ ಅಂದುಕೊಂಡಿರುವೆ.

Rajya Sabha BJP candidate Iranna Kadadi reaction
ರಾಜ್ಯಸಭೆ ಬಿಜೆಪಿ ಅಭ್ಯರ್ಥಿ ಈರಣ್ಣ ಕಡಾಡಿ

By

Published : Jun 8, 2020, 4:52 PM IST

ಬೆಳಗಾವಿ :ಸಾಮಾನ್ಯ ಕಾರ್ಯಕರ್ತರನ್ನು ರಾಜ್ಯಸಭೆಗೆ ಅಭ್ಯರ್ಥಿ ಮಾಡುವ ಮೂಲಕ ಬಿಜೆಪಿ ಯಾವತ್ತೂ ಕಾರ್ಯಕರ್ತರ ಆಧಾರಿತ ಪಕ್ಷ ಅನ್ನೋ ಸಂದೇಶ ಕೊಟ್ಟಿದೆ ಎಂದು ಈರಣ್ಣ ಕಡಾಡಿ ಖುಷಿ ಹಂಚಿಕೊಂಡರು.

ಮೂಡಲಗಿ ತಾಲೂಕಿನ ಕಲ್ಲೊಳ್ಳಿ ಗ್ರಾಮದಲ್ಲಿ ಮಾತನಾಡಿದ ಅವರು, ಇದು ನನ್ನ ಜೀವನದಲ್ಲಿ ಅತಿ ಹೆಚ್ಚು ಸಂತೋಷದ ಘಳಿಗೆ. ಇಬ್ಬರು ಕಾರ್ಯಕರ್ತರಿಗೆ ರಾಜ್ಯಸಭೆ ಟಿಕೆಟ್ ನೀಡುವ ಮೂಲಕ ಬಿಜೆಪಿ ತನ್ನದೇಯಾದ ಸಂದೇಶ ಕೊಟ್ಟಿದೆ.

ರಾಜ್ಯಸಭೆ ಬಿಜೆಪಿ ಅಭ್ಯರ್ಥಿ ಈರಣ್ಣ ಕಡಾಡಿ

ಪ್ರಭಾಕರ್ ಕೋರೆ, ರಮೇಶ್ ಕತ್ತಿ ನಾವು ಒಂದೇ ಕುಟುಂಬದ ಸದಸ್ಯರು. ಅವರ ಹಿಂಬಾಲಕರಾಗಿ ನಾನು ಕೆಲಸ ಮಾಡಿದ್ದೇನೆ. ನನಗೆ ಟಿಕೆಟ್ ಕೊಟ್ಟಿದ್ದಕ್ಕೆ ಪ್ರಭಾಕರ್ ಕೋರೆ, ರಮೇಶ್ ಕತ್ತಿ ಖುಷಿ ಪಡುತ್ತಾರೆ ಅಂದುಕೊಂಡಿರುವೆ.

ಇಬ್ಬರ ಮಾರ್ಗದರ್ಶನದಲ್ಲಿ ಪಕ್ಷವನ್ನು ಮತ್ತಷ್ಟು ಬಲಿಪಡಿಸಲು ಶ್ರಮಿಸುವೆ. ಕಳೆದ ಮೂರು ದಶಕಗಳಿಂದ ನಾನು ಬಿಜೆಪಿಯಲ್ಲಿ ಸೇವೆ ಸಲ್ಲಿಸಿದ್ದೇನೆ. ನನ್ನ ಸೇವೆಗೆ ಬಿಜೆಪಿ ಗೌರವ ಕೊಟ್ಟಿದೆ ಎಂದರು.

ABOUT THE AUTHOR

...view details