ಕರ್ನಾಟಕ

karnataka

ETV Bharat / state

'ನೂರು ಬಾರಿ ಮೈ ತೊಳೆದರೂ ಎಮ್ಮೆ'- ಕುಮಾರಸ್ವಾಮಿಗೆ ಶಾಸಕ ರಾಜು ಕಾಗೆ ಟಾಂಗ್ - undefined

ಮೋದಿ 10 ಬಾರಿ ಮೇಕಪ್ ಮಾಡಿಕೊಂಡು ಕ್ಯಾಮರಾ ಮುಂದೆ ಬರ್ತಾರೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಬಿಜೆಪಿಯ ಮಾಜಿ ಶಾಸಕ ರಾಜು ಕಾಗೆ ಟಾಂಗ್​ ಕೊಟ್ಟರು. ಸುಮಲತಾ ಅಂಬರೀಶ್​​ ವಿಚಾರವಾಗಿಯೂ ಮಾತನಾಡಿದ ಅವರು, ಒಬ್ಬ ಹೆಣ್ಣು ಮಗಳ ವಿಚಾರವಾಗಿ ರಾಜ್ಯದ ಮುಖ್ಯಮಂತ್ರಿಯಾಗಿ ಕೇವಲವಾಗಿ ಮಾತನಾಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕುಮಾರಸ್ವಾಮಿ ವಿರುದ್ದ ಮಾಜಿ ಶಾಸಕ ರಾಜು ಕಾಗೆ ಏಕವಚನದಲ್ಲೆ ವಾಗ್ದಾಳಿ

By

Published : Apr 16, 2019, 11:33 PM IST

ಚಿಕ್ಕೋಡಿ: 'ನೂರು ಬಾರಿ ಮೈ ತೊಳೆದರೂ ನೀನು ಎಮ್ಮೆ ಥರಾನೆ ಇರ್ತಿಯಾ' ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಕಾಗವಾಡ ಮಾಜಿ ಶಾಸಕ ರಾಜು ಕಾಗೆ ಏಕವಚನದಲ್ಲೆ ವಾಗ್ದಾಳಿ ನಡೆಸಿದರು.

ಕುಮಾರಸ್ವಾಮಿ ವಿರುದ್ದ ಮಾಜಿ ಶಾಸಕ ರಾಜು ಕಾಗೆ ವಾಗ್ದಾಳಿ

ಕಾಗವಾಡ ತಾಲೂಕಿನಲ್ಲಿ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಪರ ಮತಪ್ರಚಾರದ ವೇಳೆ ಮಾತನಾಡಿದ ಅವರು, ಮೋದಿ 10 ಬಾರಿ ಮೇಕಪ್ ಮಾಡಿಕೊಂಡು ಕ್ಯಾಮರಾ ಮುಂದೆ ಬರ್ತಾರೆ ಎಂದು ಕುಮಾರಸ್ವಾಮಿ ಹೇಳುತ್ತಾರೆ. ಆದ್ರೆ ನೀನು ನೂರು ಮೈ ತೊಳೆದರೂ ಎಮ್ಮೆ ಥರಾನೇ ಇರ್ತಿಯಾ ಎಂದು ಟಾಂಗ್ ಕೊಟ್ಟರು.

ಇದೇ ವೇಳೆ ಅವರು ಸುಮಲತಾ ಅಂಬರೀಶ್​​​ ಕುರಿತ ಸಿ ಎಂ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿಯೂ ಆಕ್ರೋಶ ವ್ಯಕ್ತಪಡಿಸಿದರು. ಸುಮಲತಾ ಅಂಬರೀಶ್​​ ಮನೆಯ ವಿಚಾರ ಕುಮಾರಸ್ವಾಮಿಗೆ ಏಕೆ ಬೇಕು? ಒಬ್ಬ ಹೆಣ್ಣು ಮಗಳ ವಿಚಾರವಾಗಿ ರಾಜ್ಯದ ಮುಖ್ಯಮಂತ್ರಿಯಾಗಿ ಕೇವಲವಾಗಿ ಮಾತನಾಡುವುದು ಸರಿಯಲ್ಲ ಎಂದರು.

ಅಂಬರೀಶ್​​​ ಸತ್ತಾಗ ಸುಮಲತಾ ಮನೆಯಲ್ಲಿರಲಿಲ್ಲ, ಅಂಬರೀಶ್​​ ಪಾರ್ಥಿವ ಶರೀರವನ್ನು ನಾನು ಮಂಡ್ಯಕ್ಕೆ ಸಾಗಿಸಿದೆ ಎನ್ನುವ ಹೇಳಿಕೆಗಳನ್ನು ಕುಮಾರಸ್ವಾಮಿ ಏಕೆ ಕೊಡುತ್ತಾರೆ..? ಸುಮಲತಾರ ಬಗ್ಗೆ ಮಾತನಾಡುವ ಅಧಿಕಾರವನ್ನು ಇವರಿಗೆ ಕೊಟ್ಟವರು ಯಾರು ಎಂದು ಪ್ರಶ್ನಿಸಿದರು. ಕುಮಾರಸ್ವಾಮಿ ತಮ್ಮ ಕ್ಷೇತ್ರಕ್ಕೆ ಹಾಗು ರಾಜ್ಯಕ್ಕೆ ಏನು ಮಾಡುತ್ತಾರೆ ಎನ್ನುವುದನ್ನು ಹೇಳಬೇಕು ಎಂದರು.

For All Latest Updates

TAGGED:

ABOUT THE AUTHOR

...view details