ಚಿಕ್ಕೋಡಿ:ಕಾಗವಾಡ ಮತಕ್ಷೇತ್ರ ನನ್ನ ತವರು ಮನೆ ಇದ್ದ ಹಾಗೆ ನನಗೆ ಅಥಣಿಗೆ ಹೋಗಲು ಇಷ್ಟವಿಲ್ಲ ಎಂದು ರಾಜು ಕಾಗೆ ಹೇಳಿದ್ದಾರೆ.
ಕಾಂಗ್ರೆಸ್ ಟಿಕೆಟ್ ಸ್ವೀಕರಿಸಿ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಉಗಾರಖುರ್ದ ಪಟ್ಟಣದಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಅವರು, ನಾನು ಈ ಹಿಂದೆ ಶಾಸಕನಾಗಿದ್ದಾಗ ಅಲ್ಲಿಯೂ ಸಹ ನನ್ನ ಹಿಡಿತದಲ್ಲಿರುವ ಅಥಣಿ ಮತಕ್ಷೇತ್ರದ 25 ಹಳ್ಳಿಗಳಿವೆ. ಆದರೆ, ನನಗೆ ಅಲ್ಲಿಗೆ ಹೋಗಲು ಮನಸಿಲ್ಲ ಎಂದುಕಾಂಗ್ರೆಸ್ ಅಭ್ಯರ್ಥಿ ರಾಜು ಕಾಗೆ ಹೇಳಿದ್ದಾರೆ.