ಕರ್ನಾಟಕ

karnataka

ETV Bharat / state

ಮುಜರಾಯಿ ಇಲಾಖೆ ಅನುದಾನ ಬೇರೆ ರಾಜ್ಯಗಳಿಗೆ ನೀಡುತ್ತಿದ್ದಾರೆ: ಮಾಜಿ ಶಾಸಕ ರಾಜು ಕಾಗೆ ಆರೋಪ - Etv Bharat Kannada

ಮುಜರಾಯಿ ಇಲಾಖೆ ಅನುದಾನ ನಮ್ಮ ರಾಜ್ಯದ ದೇವಸ್ಥಾನಕ್ಕೆ ನೀಡದೇ ಬೇರೆ ರಾಜ್ಯದ ದೇವಸ್ಥಾನಗಳಿಗೆ ಬಿಡುಗಡೆ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ರಾಜು ಕಾಗೆ ಆರೋಪಿಸಿದ್ದಾರೆ.

KN_BGM_0
ಮಾಜಿ ಶಾಸಕ ರಾಜು ಕಾಗೆ

By

Published : Oct 4, 2022, 10:33 PM IST

ಚಿಕ್ಕೋಡಿ: ಮುಜರಾಯಿ ಇಲಾಖೆ ಸಚಿವೆ ಶಶಿಕಲಾ‌ ಜೊಲ್ಲೆ ಮುಜರಾಯಿ ಇಲಾಖೆಗೆ ಸಂಬಂಧಿಸಿದ ಅನುದಾನವನ್ನು ಬೇರೆ ರಾಜ್ಯಗಳ ದೇವಸ್ಥಾನಕ್ಕೆ ನೀಡುತ್ತಿದ್ದಾರೆ. ಆದ್ರೆ, ನಮ್ಮ ಗ್ರಾಮದ ದೇವಸ್ಥಾನಗಳಿಗೆ ಅನುದಾನ ಬಿಡುಗಡೆ ಮಾಡುತ್ತಿಲ್ಲ ‌ಎಂದು‌ ಮಾಜಿ ಶಾಸಕ ರಾಜು ಕಾಗೆ, ಜೊಲ್ಲೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಜಿ ಶಾಸಕ ರಾಜು ಕಾಗೆ ಆರೋಪ

ಬೆಳಗಾವಿ ಜಿಲ್ಲೆಯ ಕಾಗವಾಡ ಮತಕ್ಷೇತ್ರದ ಐನಾಪೂರ ಪಟ್ಟಣದಲ್ಲಿ ಮಾತನಾಡಿದ ಅವರು, ಮುಜರಾಯಿ ಇಲಾಖೆಗೆ ಸಂಬಂಧಿಸಿ ಅನುದಾನವನ್ನು ಮಹಾರಾಷ್ಟ್ರ, ಆಂಧ್ರಪ್ರದೇಶ, ಕಾಶಿ ದೇವಸ್ಥಾನಗಳಿಗೆ ನೀಡಲಾಗುತ್ತಿದೆ. ಆದರೆ, ನಮಗೆ ಸರಿಯಾಗಿ ಅನುದಾನ ನೀಡುತ್ತಿಲ್ಲ ಮುಜರಾಯಿ ಇಲಾಖೆ ಅನುದಾನದಲ್ಲಿ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ ಎಂದು ಪರೋಕ್ಷವಾಗಿ ಆರೋಪಿಸಿದ ರಾಜು ಕಾಗೆ, ದೇವಸ್ಥಾನ ನಿರ್ಮಾಣದಲ್ಲೂ ರಾಜಕಾರಣ‌‌ ಸರಿಯಲ್ಲ ಎಂದರು.

ನಮ್ಮ ಗ್ರಾಮದಲ್ಲಿ ದೇವಸ್ಥಾನ ನಿರ್ಮಾಣ ಮಾಡಲಾಗುತ್ತಿದ್ದು, ಅದರಲ್ಲಿ ನಾನು ಭಾಗವಹಿಸಿದ್ದಕ್ಕೆ ಬಿಜೆಪಿ ಅವರು ದೇವಸ್ಥಾನ ನಿರ್ಮಾಣಕ್ಕಾಗಿ ದೇಣಿಗೆ ಹಣ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ:ಅಡ್ಡ ಮತದಾನ: ಶಾಸಕ ಗುಬ್ಬಿ ಶ್ರೀನಿವಾಸ್, ಶ್ರೀನಿವಾಸ ಗೌಡಗೆ ನೋಟೀಸ್

ABOUT THE AUTHOR

...view details