ಬೆಳಗಾವಿ :ಬೆಂಗಳೂರಿನಲ್ಲಿ ಜ. 20ರಂದು ಕಾಂಗ್ರೆಸ್ ಹಮ್ಮಿಕೊಂಡಿರುವ ರಾಜಭವನ ಚಲೋ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಇಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ನೇತೃತ್ವದಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ನೂರಾರು ರೈತರು ವಿಶೇಷ ಬಸ್ ಮೂಲಕ ತೆರಳಿದರು.
ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಕಚೇರಿಯಿಂದ ಬಸ್ನಲ್ಲಿ ರೈತರು ಪ್ರಯಾಣ ಬೆಳೆಸಿದರು. ಭಾರತ ದೇಶ ರೈತರ ದೇಶ, ರೈತರ ಮೇಲೆಯೇ ಅವಲಂಬಿಸಿರುವ ದೇಶ, ರೈತರನ್ನು ಕಡೆಗಣಿಸಿದರೆ ದೇಶಕ್ಕೆ ಉಳಿಗಾಲವಿಲ್ಲ.
ಕಾಂಗ್ರೆಸ್ ಪಕ್ಷ ಸದಾ ರೈತರ ಪರವಾಗಿಯೇ ನಿಲ್ಲುತ್ತದೆ. ರೈತರಿಗಾಗಿಯೇ ಹೋರಾಡುತ್ತದೆ. ಆದರೆ, ಕೇಂದ್ರದ ಬಿಜೆಪಿ ಸರ್ಕಾರ ರೈತ ವಿರೋಧಿ ಕಾಯ್ದೆ ಜಾರಿಗೊಳಿಸಿದೆ. ಹಾಗಾಗಿ, ಬುಧವಾರ ಕಾಂಗ್ರೆಸ್ ಪಕ್ಷ ರಾಜಭವನ ಚಲೋ ಹಮ್ಮಿಕೊಂಡಿದೆ. ಅದರಲ್ಲಿ ಭಾಗಿಯಾಗಲು ಬೆಳಗಾವಿಯಿಂದ ನೂರಾರು ರೈತರು ವಿಶೇಷ ಬಸ್ ಮೂಲಕ ಬೆಂಗಳೂರಿಗೆ ಹೋಗುತ್ತಿರುವುದಾಗಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.
ಓದಿ:ಬ್ಯಾನರ್ನಲ್ಲಿ ನನ್ನ ಫೋಟೋ ಇಲ್ಲ, ವೇದಿಕೆ ಮೇಲೆ ಬರಲ್ಲ.. ಶಾಸಕ ಜಿಟಿಡಿ ತಗಾದೆ