ಚಿಕ್ಕೋಡಿ: ಕೇರೂರ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಲವು ಮೂಲ ಸಮಸ್ಯೆಗಳನ್ನು ಬಗೆಹರಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘಟನೆಯಿಂದ ತಹಶೀಲ್ದಾರ್ ಅವರಿಗೆ ಮನವಿಯನ್ನು ಸಲ್ಲಿಸಲಾಯಿತು.
ನುರಿತ ವೈದ್ಯರ ನೇಮಕಕ್ಕೆ ರೈತರಿಂದ ತಹಶೀಲ್ದಾರ್ಗೆ ಮನವಿ - ಕೇರೂರ ಗ್ರಾಮದ ಸರ್ಕಾರಿ ಆಸ್ಪತ್ರೆ
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕೇರೂರ ಗ್ರಾಮದ ಸರ್ಕಾರಿ ಆಸ್ಪತ್ರೆಗೆ ನುರಿತ ವೈದ್ಯರನ್ನು ನೇಮಕ ಮಾಡಬೇಕೆಂದು, ರಾಜ್ಯ ರೈತ ಸಂಘಟನೆ ತಹಶೀಲ್ದಾರ್ ಅವರಿಗೆ ಮನವಿ ಪತ್ರ ನೀಡುವ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿಯನ್ನು ಮಾಡಿತು.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕೇರೂರ ಗ್ರಾಮವು ಚಿಕ್ಕೋಡಿಯಿಂದ 10 ಕಿ.ಮೀ ದೂರವಿದೆ. ರಾತ್ರಿ ಸಮಯದಲ್ಲಿ ರೈತರಿಗೆ ಚಿಕ್ಕೋಡಿ ಆಸ್ಪತ್ರೆಗೆ ಬರಲು ತೊಂದರೆಯಾಗುತ್ತಿದೆ. ಅದಕ್ಕಾಗಿ ಕೇರೂರ ಗ್ರಾಮದಲ್ಲಿ ನೂರಿತ ವೈದ್ಯರನ್ನು ಹಾಗೂ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು, ಚಿಕ್ಕೋಡಿ ತಹಶೀಲ್ದಾರರಿಗೆ ರೈತ ಸಂಘಟನೆ ಮನವಿ ಸಲ್ಲಿಸಿತು.
ಕೇರೂರ ಹಳೆಯ ಕೀನಾಲವನ್ನು ಸ್ವಚ್ಚತೆಯನ್ನು ಮಾಡಿ ನೀರು ಹರಿಸಿ, ಪ್ರವಾಹ ಪೀಡಿತ ಗ್ರಾಮಗಳಲ್ಲಿ ಸರಿಯಾದ ರೀತಿಯಲ್ಲಿ ಸರ್ವೆಯಾಗಿಲ್ಲ. ಇದರಲ್ಲಿ ಸಾಕಷ್ಟು ಬಡವರಿಗೆ ಅನ್ಯಾಯವಾಗಿದೆ. ಮತ್ತೊಮ್ಮೆ ಸರ್ವೆಗೆ ಅವಕಾಶವನ್ನು ನೀಡಬೇಕು ಹಾಗೂ 10 ಸಾವಿರ ಚೆಕ್ ಸಹ ಕೆಲವೊಂದು ಫಲಾನುಭವಿಗಳಿಗೆ ತಲುಪಿಲ್ಲ. ಇದರ ಬಗ್ಗೆ ಕೂಲಂಕುಷವಾಗಿ ತನಿಖೆ ಮಾಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘಟನೆಯ ಸದಸ್ಯರು ತಹಶೀಲ್ದಾರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿಯನ್ನು ಮಾಡಿದರು.