ಚಿಕ್ಕೋಡಿ :ಎರಡು ಗಂಟೆಗೂ ಅಧಿಕ ಕಾಲ ಸುರಿದ ಮಳೆಯಿಂದಾಗಿ ಜನ ಮತ್ತೆ ಸಂಕಷ್ಟಕ್ಕೀಡಾಗಿದ್ದಾರೆ.
ಪ್ರವಾಹ ಪೀಡಿತ ತಾಲೂಕಿನಲ್ಲಿ ಮತ್ತೆ ಮಳೆರಾಯನ ಅಬ್ಬರ..
ಈ ಹಿಂದೆ ಸುರಿದ ಮಳೆಯಿಂದಾಗಿ ಭೀಕರ ಪ್ರವಾಹ ಎದುರಿಸಿದ್ದ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಜನ, ಮಳೆ ಕಡಿಮೆಯಾಯಿತು ಎಂದು ಸಂತಸ ಪಡುವಷ್ಟರಲ್ಲೇ ಮತ್ತೆ ವರುಣ ತನ್ನ ಆರ್ಭಟ ತೋರಿಸಿದ್ದಾನೆ. ರೈತರು ಮತ್ತೆ ಸಂಕಷ್ಟ ಎದಿರುಸುವಂತಾಗಿದೆ.
ಮಳೆರಾಯನ ಅಬ್ಬರ
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸತ್ತಿ, ಸವದಿ, ದರೂರ, ಹುಲಗಬಾಳಿ, ಹಲ್ಯಾಳ, ಅವರಕೋಡ ಗ್ರಾಮಗಳಲ್ಲಿ ಮತ್ತೆ ಮಳೆರಾಯ ತನ್ನ ಅಬ್ಬರ ಪ್ರದರ್ಶಿಸಿದ್ದು, ಪ್ರವಾಹಕ್ಕೆ ಸಿಲುಕಿದ್ದ ಗ್ರಾಮಸ್ಥರು ಹಾಗೂ ರೈತರು ಮತ್ತೆ ಆತಂಕ ಪಡುವ ಪರಿಸ್ಥಿತಿ ಎದುರಾಗಿದೆ.
ಈಗಾಗಲೇ ಕಬ್ಬಿನ ಗದ್ದೆಗಳಲ್ಲಿ ನೀರು ಹೊಕ್ಕಿ ಬೆಳೆ ಹಾಳಾಗಿದ್ದು, ಬಿಸಲಿನ ತಾಪಕ್ಕೆ ಸ್ವಲ್ಪ ಪ್ರಮಾಣದಲ್ಲಿ ಸುಧಾರಣೆಯಾಗುತ್ತಿದ್ದವು. ಈಗ ಮತ್ತೆ ಮಳೆರಾಯ ಅಬ್ಬರಿಸಿದ್ದು, ಬೆಳೆ ಹಾಳಾಗುವ ಸಾಧ್ಯತೆಗಳಿವೆ. ಇದರಿಂದಾಗಿ ಮತ್ತೆ ರೈತರು ಸಂಕಷ್ಟ ಅನುಭವಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.