ಕರ್ನಾಟಕ

karnataka

ETV Bharat / state

ಮಹಾರಾಷ್ಟ್ರ, ಚಿಕ್ಕೋಡಿ ಉಪವಿಭಾಗದಲ್ಲಿ ಮಳೆ ಪ್ರಮಾಣ ಇಳಿಕೆ - River Dudhganga

ಮಹಾರಾಷ್ಟ್ರ ಭಾಗದಲ್ಲಿ ಮಳೆಯಾರ್ಭಟ ಕಡಿಮೆಯಾಗಿರುವ ಹಿನ್ನೆಲೆ ಬೆಳಗಾವಿಗೆ ಹರಿದು ಬರುತ್ತಿದ್ದ ನೀರಿನ ಪ್ರಮಾಣದಲ್ಲಿ ಇಳಿಕೆಯಾಗಿದೆ. ಹಲವು ಜಲಾಶಯಗಳ ಹೊರ ಹರಿವಿನಲ್ಲೂ ಗಣನೀಯ ಇಳಿಕೆ ಕಂಡಿದೆ.

rainfall-decreased-in-maharashtra-belagavi-region
ಮಹಾರಾಷ್ಟ್ರ, ಚಿಕ್ಕೋಡಿ ಉಪವಿಭಾಗದಲ್ಲಿ ಮಳೆ ಪ್ರಮಾಣ ಇಳಿಕೆ

By

Published : Sep 2, 2020, 3:57 PM IST

ಚಿಕ್ಕೋಡಿ (ಬೆಳಗಾವಿ): ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಸಂಪೂರ್ಣವಾಗಿ ಮಳೆ ಕಡಿಮೆಯಾಗಿದ್ದು, ಕೊಯ್ನಾ-1 ಮಿ.ಮೀ, ನವಜಾ-1 ಮಿ.ಮೀ, ಮಹಾಬಲೇಶ್ವರ-4 ಮಿ.ಮೀ, ಪಾಟಗಾಂವ-4 ಮಿ.ಮೀ ಮಳೆಯಾಗಿದ್ದು ಅತಿ ಕಡಿಮೆ ಪ್ರಮಾಣದಲ್ಲಿ ಮಳೆಯಾಗಿರುವ ವರದಿಯಾಗಿದೆ.

ಚಿಕ್ಕೋಡಿ ಉಪವಿಭಾಗದ ಚಿಕ್ಕೋಡಿ, ಅಂಕಲಿ, ನಾಗರಮುನ್ನೋಳಿ, ಸದಲಗಾ, ಜೋಡಟ್ಟಿ ಭಾಗದಲ್ಲಿ 1 ಮಿ.ಮೀ ಗಿಂತಲೂ ಕಡಿಮೆ ಮಳೆಯಾಗಿದೆ.

ಮಹಾರಾಷ್ಟ್ರ, ಚಿಕ್ಕೋಡಿ ಉಪವಿಭಾಗದಲ್ಲಿ ಮಳೆ ಪ್ರಮಾಣ ಇಳಿಕೆ

ಕೃಷ್ಣಾ, ವೇದಗಂಗಾ ಮತ್ತು ದೂಧಗಂಗಾ ನದಿಗಳ ಒಳ ಹರಿವಿನಲ್ಲೂ ಇಳಿಮುಖವಾಗಿದೆ. 43,000ಕ್ಕೂ ಅಧಿಕ ಕ್ಯೂಸೆಕ್‌ಕ್ಕಿಂತ ಹೆಚ್ಚು ಕೃಷ್ಣಾ ನದಿ ಒಳ ಹರಿವು ಇದೆ. ಮಹಾರಾಷ್ಟ್ರದ ರಾಜಾಪೂರ ಬ್ಯಾರೆಜ್‌ನಿಂದ 38,125 ಕ್ಯೂಸೆಕ್ ನೀರು, ದೂಧಗಂಗಾ ನದಿಯಿಂದ 5,104 ಕ್ಯೂಸೆಕ್ ನೀರು ಹೀಗೆ ಒಟ್ಟು 43,000 ಕ್ಯೂಸೆಕ್​​ಗೂ ಅಧಿಕ ನೀರು ರಾಜ್ಯದ ಕೃಷ್ಣಾ ನದಿಗೆ ಹರಿದು ಬರುತ್ತಿದೆ.

ಸದ್ಯ ಕೊಯ್ನಾ ಜಲಾಶಯ, ವಾರಣಾ, ರಾಧಾನಗರಿ, ಕಣೇರಿ ಜಲಾಶಯ ಶೇ 97ರಷ್ಟು ತುಂಬಿವೆ. ಧೂಮ ಜಲಾಶಯ ಶೇ 98ರಷ್ಟು, ಪಾಟಗಾಂವ ಶೇ100ರಷ್ಟು, ದೂಧಗಂಗಾ ಶೇ 99ರಷ್ಟು ತುಂಬಿದೆ. ಹಿಪ್ಪರಗಿ ಬ್ಯಾರೆಜ್‌ನಿಂದ 37,000 ಹಾಗೂ ಆಲಮಟ್ಟಿ ಜಲಾಶಯದಿಂದ 47,000 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ.

ABOUT THE AUTHOR

...view details