ಬೆಳಗಾವಿ:ಕುಂದಾನಗರಿಯಲ್ಲಿ ಮಳೆಯ ಆರ್ಭಟ ಜಾಸ್ತಿಯಾಗಿದ್ದು ನಗರದ ಜಿಲ್ಲಾಸ್ಪತ್ರೆಯೊಳಗೆ ನೀರು ನುಗ್ಗಿದ ಪರಿಣಾಮ ಆಸ್ಪತ್ರೆಗೆ ಬಂದಿದ್ದ ರೋಗಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಭಾರಿ ಮಳೆ: ಬೆಳಗಾವಿ ಜಿಲ್ಲಾಸ್ಪತ್ರೆಗೆ ನುಗ್ಗಿದ ನೀರು,ರೋಗಿಗಳ ಪರದಾಟ - ಬೆಳಗಾವಿ ಆಸ್ಪತ್ರಯಲ್ಲಿರೋಗಿಗಳ ಪರದಾಟ
ಬೆಳಗಾವಿಯಲ್ಲಿ ಮಳೆ ಆರ್ಭಟ ಮುಂದುವರಿದಿದ್ದು ಮಂಗಳವಾರ ಸುರಿದ ಭಾರಿ ಮಳೆಗೆ ಜಿಲ್ಲಾಸ್ಪತ್ರೆ ತುಂಬಿಕೊಂಡಿದ್ದು ಅಲ್ಲಿನ ರೋಗಿಗಳು ಪರದಾಡಿದ್ದಾರೆ.
![ಭಾರಿ ಮಳೆ: ಬೆಳಗಾವಿ ಜಿಲ್ಲಾಸ್ಪತ್ರೆಗೆ ನುಗ್ಗಿದ ನೀರು,ರೋಗಿಗಳ ಪರದಾಟ](https://etvbharatimages.akamaized.net/etvbharat/prod-images/768-512-4839247-36-4839247-1571786454420.jpg)
ನಗರದ ಜಿಲ್ಲಾಸ್ಪತ್ರೆ ಸದ್ಯಕ್ಕೆ ಮಳೆಯಿಂದ ಸೋರುತಿದ್ದು ಒಳಗಿರುವ ರೋಗಿಗಳು ಪರದಾಡುತ್ತಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಉಂಟಾದ ಮಳೆಯಲ್ಲಿಯೂ ರೋಗಿಗಳು ಇದೇ ಪರಿಸ್ಥಿತಿ ಅನುಭವಿಸಿದ್ದರು. ಆದರೂ ಎಚ್ಚೆತ್ತುಕೊಳ್ಳದ ಆರೋಗ್ಯ ಇಲಾಖೆ ಜಿಲ್ಲಾಸ್ಪತ್ರೆ ರಿಪೇರಿ ಮಾಡುವ ಕೆಲಸ ಮಾಡಿಲ್ಲದ್ದರಿಂದ ಇದೀಗ ಮತ್ತೆ ರೋಗಿಗಳು ಪರದಾಡುವಂತಾಗಿದೆ.
ಮೂರು ದಿನಗಳಿಂದ ಸುರಿಯುತ್ತಿರುವ ಮಳೆಗೆ ಜಿಲ್ಲಾಸ್ಪತ್ರೆಯ ಅನೇಕ ಕೋಣೆಗಳು ನೀರಿನಿಂದ ಆವೃತ್ತವಾಗಿವೆ ಆಸ್ಪತ್ರೆ ಚರಂಡಿಯಂತಾಗಿದೆ. ದಿನನಿತ್ಯ ರೋಗಿಗಳು ಆರೋಗ್ಯ ಸರಿ ಮಾಡಿಕೊಳ್ಳಲು ಆಸ್ಪತ್ರೆಗೆ ಬಂದರೆ, ಇಲ್ಲಿನ ಅವ್ಯವಸ್ಥೆ ಕಂಡು ಎಲ್ಲಿ ಅರೋಗ್ಯ ಹಾಳಾಗುವುದೊ ಎನ್ನು ಭಯಪಡುವಂತಾಗಿದೆ.