ಬೆಳಗಾವಿ:ಜಿಲ್ಲೆಯಲ್ಲಿ ಆಶ್ಲೇಷ ಮಳೆ ಅಬ್ಬರ ಮುಂದುವರಿದಿದೆ. ಬೈಲಹೊಂಗಲ, ಖಾನಾಪೂರ, ಸವದತ್ತಿ ಸೇರಿದಂತೆ ಜಿಲ್ಲೆಯಲ್ಲಿ ಹಲವೆಡೆ ಭಾರಿ ಮಳೆ ಆಗುತ್ತಿರವುದರಿಂದ ನದಿಪ್ರದೇಶದ ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.
ಬೆಳಗಾವಿ: ಮಳೆಯ ಅಬ್ಬರಕ್ಕೆ ಕೊಚ್ಚಿ ಹೋದ ಭತ್ತದ ಬೆಳೆ
ಅಲ್ಲಲ್ಲಿ ಇರುವ ಹಳ್ಳಗಳೇ ನದಿಯ ಸ್ವರೂಪ ಪಡೆದುಕೊಂಡು ಹರಿಯುತ್ತಿವೆ. ಇದರಿಂದಾಗಿ ಹಳ್ಳದ ಸುತ್ತಲೂ ಇರುವ ನೂರಾರು ಎಕರೆ ಜಮೀನಿಗೆ ಹಳ್ಳದ ನೀರು ನುಗ್ಗಿದೆ.
flood
ಕಳೆದ ಮೂರು ದಿನಗಳಿಂದ ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯಲ್ಲಿ ಮತ್ತೆ ಪ್ರವಾಹ ಭೀತಿ ಎದುರಾಗಿದೆ. ಇದಲ್ಲದೇ ಜಿಲ್ಲೆಯ ಖಾನಾಪುರ ತಾಲೂಕಿನಲ್ಲಿ ಮಳೆ ಅಬ್ಬರ ಜೋರಾಗಿದ್ದು, ಅಲ್ಲಲ್ಲಿ ಇರುವ ಹಳ್ಳಗಳೇ ನದಿಯ ಸ್ವರೂಪ ಪಡೆದುಕೊಂಡು ಹರಿಯುತ್ತಿವೆ. ಇದರಿಂದಾಗಿ ಹಳ್ಳದ ಸುತ್ತಲೂ ಇರುವ ನೂರಾರು ಎಕರೆ ಜಮೀನಿಗೆ ಹಳ್ಳದ ನೀರು ನುಗ್ಗಿದೆ.
ಇತ್ತೀಚೆಗಷ್ಟೇ ಮಳೆ ಚೆನ್ನಾಗಿ ಆಗಿದ್ದರಿಂದ ಈ ಭಾಗದ ರೈತರು ಭತ್ತದ ನಾಟಿ ಮಾಡಿದ್ದರು. ಅದೆಲ್ಲವೂ ಈಗ ಕೊಚ್ಚಿಕೊಂಡು ಹೋಗಿದ್ದು, ರೈತರು ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ.