ಕರ್ನಾಟಕ

karnataka

ETV Bharat / state

ಒಣಗಲು ಹಾಕಿದ್ದ ದ್ರಾಕ್ಷಿಗೆ ಅಕಾಲಿಕ ಮಳೆ ಕಾಟ : ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದ ವರುಣ - ಅಥಣಿ ತಾಲೂಕಿನಲ್ಲಿ ಅಕಾಲಿಕ ಮಳೆಗೆ ನೆನೆದ ಒಣ ದ್ರಾಕ್ಷಿ

ನವೆಂಬರ್- ಅಕ್ಟೋಬರ್ ತಿಂಗಳಿನಲ್ಲಿ ದ್ರಾಕ್ಷಿ ಬೆಳೆಗಾರರಿಗೆ ಅಕಾಲಿಕ ಮಳೆಯಿಂದ ಭಾರಿ ನಷ್ಟ ಸಂಭವಿಸಿತ್ತು. ಅದರಲ್ಲಿ ಅಳಿದುಳಿದ ದ್ರಾಕ್ಷಿಯನ್ನೂ ರೈತರು ಒಣ ಹಾಕಿದ ಸಂದರ್ಭದಲ್ಲಿ ಹಠಾತ್ತನೆ ಮಳೆ ಬಂದ ಪರಿಣಾಮ ಒಣದ್ರಾಕ್ಷಿ ನೀರಿನಲ್ಲಿ ನೆನೆದಿದೆ. ಇದು ರೈತರನ್ನು ತೀವ್ರ ಸಂಕಷ್ಟಕ್ಕೆ ಸಿಲುಕಿಸಿದೆ.

ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದ ವರುಣ
ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದ ವರುಣ

By

Published : Apr 3, 2022, 8:03 PM IST

Updated : Apr 4, 2022, 10:16 PM IST

ಅಥಣಿ(ಬೆಳಗಾವಿ):ತಾಲೂಕಿನಾದ್ಯಂತ ಇಂದು ಸಂಜೆ ಅಕಾಲಿಕ ಮಳೆ ಸುರಿದ ಪರಿಣಾಮ ದ್ರಾಕ್ಷಿ ಬೆಳೆಗಾರರಿಗೆ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ತಾಲೂಕಿನ ಅಡಹಳ್ಳಿ, ಕೋಹಳ್ಳಿ, ಐಗಳಿ, ಕೋತನಟ್ಟಿ ಗ್ರಾಮಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿಪರೀತ ಗಾಳಿ ಸಮೇತ ಮಳೆಯಾಗಿದ್ದು, ಒಣದ್ರಾಕ್ಷಿ ನೀರಿನಲ್ಲಿ ನೆನೆದು ಭಾರಿ ಹಾನಿ ಸಂಭವಿಸಿದೆ. ನವೆಂಬರ್- ಅಕ್ಟೋಬರ್ ತಿಂಗಳಿನಲ್ಲಿ ದ್ರಾಕ್ಷಿ ಬೆಳೆಗಾರರಿಗೆ ಅಕಾಲಿಕ ಮಳೆಯಿಂದ ಭಾರಿ ನಷ್ಟ ಸಂಭವಿಸಿತ್ತು. ಇದೀಗ ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.

ದ್ರಾಕ್ಷಿ ಬೆಳೆಗಾರರಿಗೆ ಅಕಾಲಿಕ ಮಳೆ ಕಾಟ

ಅದರಲ್ಲಿ ಅಳಿದು ಉಳಿದ ದ್ರಾಕ್ಷಿಯನ್ನು ರೈತರು ಒಣ ಹಾಕಿದ ಸಂದರ್ಭದಲ್ಲಿ ಹಠಾತ್ತನೆ ಮಳೆ ಬಂದ ಪರಿಣಾಮ ಒಣದ್ರಾಕ್ಷಿ ನೀರಿನಲ್ಲಿ ನೆನೆದು ರೈತರನ್ನು ತೀವ್ರ ಸಂಕಷ್ಟಕ್ಕೆ ಸಿಲುಕಿಸಿದೆ. ಇನ್ನೇನು ಈ ವಾರದಲ್ಲಿ ಮಾರಾಟವಾಗಬೇಕಿದ್ದ ಒಣದ್ರಾಕ್ಷಿ ಮಳೆ ನೀರಿನಲ್ಲಿ ನೆನೆದ ಪರಿಣಾಮ, ರೈತರನ್ನು ಚಿಂತೆಗೀಡು ಮಾಡಿದೆ. ಕಳೆದ ಒಂದು ವರ್ಷದಿಂದ ಬೆಳೆದ ಬೆಳೆ ಕೊನೆ ಹಂತದಲ್ಲಿ ಈ ರೀತಿ ನಷ್ಟ ಉಂಟಾಗಿರುವುದು, ರೈತರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

Last Updated : Apr 4, 2022, 10:16 PM IST

For All Latest Updates

TAGGED:

ABOUT THE AUTHOR

...view details