ಚಿಕ್ಕೋಡಿ (ಬೆಳಗಾವಿ):ಮಹಾರಾಷ್ಟ್ರ ಹಾಗೂ ಚಿಕ್ಕೋಡಿ ಉಪ ವಿಭಾಗದಲ್ಲಿ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆ ಕಂಚ ತಗ್ಗಿದೆ. ಹೀಗಾಗಿ ಕೃಷ್ಣಾ, ವೇದಗಂಗಾ ಮತ್ತು ದೂಧಗಂಗಾ ನದಿಗಳ ಒಳಹರಿವಿನಲ್ಲೂ ಇಳಿಮುಖ ಕಂಡಿದೆ.
ಕೃಷ್ಣಾ ನದಿಯಲ್ಲಿ 1,35,000ಕ್ಕೂ ಅಧಿಕ ಕ್ಯೂಸೆಕ್ ಒಳಹರಿವು ಇದೆ ಎಂದು ಚಿಕ್ಕೋಡಿ ತಹಶೀಲ್ದಾರ್ ಶುಭಾಶ್ ಸಂಪಗಾಂವಿ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.
ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ನಿಂದ 1,13,500 ಕ್ಯೂಸೆಕ್ ನೀರು, ದೂಧಗಂಗಾ ನದಿಯಿಂದ 22,000 ಕ್ಯೂಸೆಕ್ ನೀರು ಹೀಗೆ ಒಟ್ಟು 1,35,000 ಕ್ಯೂಸೆಕ್ಗಿಂತಲೂ ಅಧಿಕ ನೀರು ರಾಜ್ಯದ ಕೃಷ್ಣಾಗೆ ಹರಿದು ಬರುತ್ತಿದೆ.
ನದಿಗಳ ಒಳಹರಿವಿನ ಪ್ರಮಾಣದಲ್ಲಿ ಇಳಿಮುಖ ಮಹಾರಾಷ್ಟ್ರದ ಕೊಯ್ನಾ - 49 ಮಿ.ಮೀ., ನವಜಾ - 55 ಮಿ.ಮೀ., ಮಹಾಬಲೇಶ್ವರ - 32 ಮಿ.ಮೀ., ವಾರಣಾ - 25 ಮಿ.ಮೀ., ಕಾಳಮ್ಮವಾಡಿ - 26 ಮಿ.ಮೀ., ರಾಧಾನಗರಿ - 44 ಮಿ.ಮೀ., ಪಾಟಗಾಂವ - 45 ಮಿ.ಮೀ. ಮಳೆ ವರದಿಯಾಗಿದೆ. ಕಳೆದ ಎರಡು ದಿನಗಳಿಗೆ ಹೋಲಿಸಿದರೆ ಮಹಾರಾಷ್ಟ್ರದಲ್ಲಿ ಮತ್ತೆ ಸ್ವಲ್ಪ ಪ್ರಮಾಣದಲ್ಲಿ ಮಳೆಯಾಗಿರುವ ಬಗ್ಗೆ ವರದಿಯಾಗಿದೆ.
ಸದ್ಯ ಕೊಯ್ನಾ ಜಲಾಶಯ 91%, ವಾರಣಾ ಜಲಾಶಯ 94%, ರಾಧಾನಗರಿ ಜಲಾಶಯ 100%, ಕಣೇರ ಜಲಾಶಯ 92%, ಧೂಮ ಜಲಾಶಯ 96%, ಪಾಟಗಾಂವ 100%, ಧೂದಗಂಗಾ 97% ತುಂಬಿದೆ. ಹಿಪ್ಪರಗಿ ಬ್ಯಾರೇಜ್‌ನಿಂದ 1,42,000 ಹಾಗೂ ಆಲಮಟ್ಟಿ ಜಲಾಶಯದಿಂದ 1,00,000 ಕ್ಯೂಸೆಕ್ ನೀರು ಹೊರಗಡೆ ಬಿಡಲಾಗುತ್ತಿದೆ.