ಕರ್ನಾಟಕ

karnataka

ETV Bharat / state

ಶಾಸಕಿ ನಿಂಬಾಳ್ಕರ್ ಮನೆ ಸೇರಿ 50ಕ್ಕೂ ಅಧಿಕ ಮನೆಗಳಿಗೆ ನುಗ್ಗಿದ ನೀರು: ಸಂತ್ರಸ್ತರ ಸ್ಥಳಾಂತರ - MLA Anjali Nimbalkar

ಖಾನಾಪುರದ ದುರ್ಗಾ ನಗರ, ನಿಂಬಾಳ್ಕರ್ ಲೇಔಟ್‌ನಲ್ಲಿ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಮನೆ ಸಂಪೂರ್ಣ ಜಲಾವೃತಗೊಂಡಿದೆ.

belgavi
ಬೆಳಗಾವಿಯಲ್ಲಿ ಮಳೆ ಅಬ್ಬರ

By

Published : Jul 23, 2021, 2:08 PM IST

ಬೆಳಗಾವಿ:ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಮಲಪ್ರಭಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಮಲಪ್ರಭಾ ನದಿ ನೀರು ಖಾನಾಪುರ ಪಟ್ಟಣಕ್ಕೆ ಲಗ್ಗೆ ಇಟ್ಟಿದ್ದು, ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ಮನೆ ಸೇರಿ 50ಕ್ಕೂ ಅಧಿಕ ಮನೆಗಳು‌ ಮುಳುಗಡೆಯಾಗಿವೆ.

ಖಾನಾಪುರದ ದುರ್ಗಾ ನಗರ, ನಿಂಬಾಳ್ಕರ್ ಲೇಔಟ್‌ನಲ್ಲಿ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಮನೆ ಸಂಪೂರ್ಣ ಜಲಾವೃತಗೊಂಡಿದೆ. ಸ್ಥಳಕ್ಕೆ ಎನ್​ಡಿಆರ್​ಎಫ್ ಸಿಬ್ಬಂದಿ ದೌಡಾಯಿಸಿದ್ದು, ಸಂತ್ರಸ್ತರನ್ನು ಕಲ್ಯಾಣ ಮಂಟಪಕ್ಕೆ ಶಿಫ್ಟ್ ಮಾಡಿಸಲಾಗಿದೆ.

ಬೆಳಗಾವಿಯಲ್ಲಿ ಮಳೆ ಅಬ್ಬರ

ಮಕ್ಕಳು, ವಯಸ್ಸಾದವರಿದ್ದು ಎಲ್ಲರನ್ನೂ ಬೋಟ್​ನಲ್ಲಿ ಸುರಕ್ಷಿತ ‌ಸ್ಥಳಕ್ಕೆ ಸಾಗಿಸಲಾಗಿದೆ.

ABOUT THE AUTHOR

...view details