ಕರ್ನಾಟಕ

karnataka

ETV Bharat / state

ವರುಣನ ಆರ್ಭಟ... ಯಕ್ಸಂಬಾ ಗ್ರಾಮದಲ್ಲಿ ಕೊಚ್ಚಿ ಹೋಯ್ತು ಕಾರು - undefined

ಯಕ್ಸಂಬಾ ಗ್ರಾಮದಲ್ಲಿ ವರುಣನ ಆರ್ಭಟಕ್ಕೆ ತಗ್ಗು ಪ್ರದೇಶದಲ್ಲಿ ನಿಂತಿರುವ ವಾಹನಗಳೆಲ್ಲವೂ ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿವೆ.

ವಾಹನಗಳು ಮುಳುಗಡೆ

By

Published : Jun 24, 2019, 10:55 AM IST

ಚಿಕ್ಕೋಡಿ: ವರುಣನ ಅಬ್ಬರಕ್ಕೆ ರಸ್ತೆಯ‌ ಮೇಲೆ ನಿಂತಿದ್ದ ವಾಹನಗಳು ಮಳೆಯ ರಭಸದಿಂದ ಕೊಚ್ಚಿಹೋಗಿರುವ ಘಟನೆ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಗ್ರಾಮದಲ್ಲಿ ನಡೆದಿದೆ.

ವರುಣನ ಅಬ್ಬರಕ್ಕೆ ಕೊಚ್ಚಿಹೋದ ವಾಹನಗಳು

ಚಿಕ್ಕೋಡಿ ತಾಲೂಕಿನ ಕೆಲ ಹಳ್ಳಿಗಳಲ್ಲಿ ದಾಖಲೆ ಪ್ರಮಾಣದಲ್ಲಿ ಮಳೆಯಾಗಿದ್ದು, ಜನಜೀವನ, ರಸ್ತೆ ಸಂಚಾರ ಅಸ್ತವ್ಯಸ್ತವಾಗಿದೆ.

ಸತತ ನಾಲ್ಕು ತಿಂಗಳಿಂದ ಬಿಸಿಲಿನ ಬೇಗೆಗೆ ಜನ ಮತ್ತು ಜಾನುವಾರುಗಳು ಕಂಗಾಲಾಗಿದ್ದರು. ಆದರೆ, ಅಬ್ಬರದ ಮಳೆಯಿಂದಾಗಿ ತಂಪಿನ ವಾತಾವರಣ ಸೃಷ್ಟಿಯಾಗಿದ್ದು, ರೈತರಲ್ಲಿ ಸಂತಸ ಮೂಡಿಸಿದೆ. ಸಣ್ಣಪುಟ್ಟ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ.

For All Latest Updates

TAGGED:

ABOUT THE AUTHOR

...view details