ಚಿಕ್ಕೋಡಿ : ಕೊರೊನಾ ಕೇಂದ್ರದಲ್ಲಿ ಸರಿಯಾದ ವ್ಯವಸ್ಥೆ ಕಲ್ಪಿಸಿಕೊಡಬೇಕಾಗಿದ್ದ ಅಧಿಕಾರಿಗಳಿಬ್ಬರು, ಸಣ್ಣದೊಂದು ಪೊರಕೆ ವಿಷಯಕ್ಕೆ ಜಗಳವಾಡಿಕೊಂಡಿರುವ ಘಟನೆರಾಯಬಾಗ ತಾಲೂಕಿನ ನಾಗರಾಳ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಕೋವಿಡ್ ಕೇರ್ ಕೇಂದ್ರದಲ್ಲಿ ನಡೆದಿದೆ.
ಕೋವಿಡ್ ಕೇಂದ್ರದಲ್ಲೇ ಅಧಿಕಾರಿಗಳಿಬ್ಬರ ’’ಪೊರಕೆ ಕಾಳಗ’’: ವಿಡಿಯೋ - Qurrel Between Oficers in Covid Center
ಪೊರಕೆ ಕಾಣೆಯಾದ ವಿಚಾರಕ್ಕೆ ಅಧಿಕಾರಿಗಳಿಬ್ಬರು ಜಗಳವಾಡಿಕೊಂಡ ಘಟನೆ ರಾಯಬಾಗ ತಾಲೂಕಿನ ನಾಗರಾಳ ಗ್ರಾಮದ ಕೋವಿಡ್ ಕೇರ್ ಕೇಂದ್ರದಲ್ಲಿ ನಡೆದಿದೆ.
ಕೋವಿಡ್ ಕೇಂದ್ರದಲ್ಲಿ ಅಧಿಕಾರಿಗಳ ಪೊರಕೆ ಕಾಳಗ
ರಾಯಬಾಗ ತಹಶೀಲ್ದಾರ್ ಕಚೇರಿ ಕಂದಾಯ ನಿರೀಕ್ಷಕ ಗೌಡಪ್ಪ ಸಸಾಲಟ್ಟಿ ಹಾಗೂ ನಾಗರಾಳ ಗ್ರಾಮ ಲೆಕ್ಕಾಧಿಕಾರಿ ವಿನಾಯಕ ಬಾಟೆ, ತಹಶೀಲ್ದಾರ್ ಎನ್.ಬಿ ಗೆಜ್ಜಿ ಮುಂದೆಯೇ ಜಗಳವಾಡಿಕೊಂಡಿದ್ದಾರೆ. ಕೋವಿಡ್ ಕೇರ್ ಕೇಂದ್ರದಲ್ಲಿದ್ದ ಎರಡು ಪೊರಕೆಗಳು ಕಾಣೆಯಾದ ವಿಚಾರಕ್ಕೆ ಪ್ರಾರಂಭವಾದ ಇವರಿಬ್ಬರ ಜಗಳ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ.
ಕೋವಿಡ್ ಕೇಂದ್ರದಲ್ಲಿ ಅಧಿಕಾರಿಗಳ ವರ್ತನೆ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.