ಕರ್ನಾಟಕ

karnataka

ETV Bharat / state

ನಡು ಬೀದಿಯಲ್ಲಿ ಕುಡುಕರ‌ ಕುಸ್ತಿ, ಕೆಸರಿನ ರಾಡಿ ಲೆಕ್ಕಿಸದೆ ಚಪ್ಪಲಿಯಲ್ಲಿ ಹೊಡೆದಾಟ - undefined

ಇಬ್ಬರು ವ್ಯಕ್ತಿಗಳು ಮದ್ಯದ ನಶೆಯಲ್ಲಿ ರಸ್ತೆಯಲ್ಲೇ ಚಪ್ಪಲಿ ಹಿಡಿದು ರಂಪಾಟ ಮಾಡಿರುವ ಘಟನೆ ಖಾನಾಪುರ ‌ತಾಲೂಕಿನ ಕಣಕುಂಬಿ ಸಮೀಪ ನಡೆದಿದ್ದು, ವಿಡಿಯೋ ವೈರಲ್​ ಆಗಿದೆ.

Belgum

By

Published : Jul 25, 2019, 5:43 PM IST

Updated : Jul 25, 2019, 6:37 PM IST

ಬೆಳಗಾವಿ:ಇಬ್ಬರು ವ್ಯಕ್ತಿಗಳು ಮದ್ಯದ ನಶೆಯಲ್ಲಿ ರಸ್ತೆಯಲ್ಲೇ ಚಪ್ಪಲಿಯಿಂದ ಹೊಡೆದಾಡಿಕೊಂಡು ರಂಪ ಮಾಡಿರುವ ಘಟನೆ ಖಾನಾಪುರ ‌ತಾಲೂಕಿನ ಕಣಕುಂಬಿ ಸಮೀಪ ನಡೆದಿದ್ದು, ವಿಡಿಯೋ ವೈರಲ್​ ಆಗಿದೆ.

ನಡು ರಸ್ತೆಯಲ್ಲೆ ಕುಡುಕರಿಬ್ಬರು ಹೊಡೆದಾಡಿಕೊಂಡಿರುವುದು.

ಕುಡಿದ ನಶೆಯಲ್ಲಿ ನಡು ರಸ್ತೆಯಲ್ಲೇ ಇಬ್ಬರು ವ್ಯಕ್ತಿಗಳು ಕ್ಷುಲ್ಲಕ ಕಾರಣಕ್ಕೆ ಗಲಾಟೆ ಮಾಡಿಕೊಂಡಿದ್ದು, ಒಬ್ಬರಿಗೊಬ್ಬರು ಕೈ ಕೈ ಮಿಲಾಯಿಸಿದ್ದಾರೆ. ಜಿಲ್ಲೆಯಲ್ಲಿ ಮಳೆಯಿಂದ ರಸ್ತೆ ಮೇಲೆ ನೀರು ನಿಂತಿತ್ತು. ಅದನ್ನು ಲೆಕ್ಕಿಸಿದೆ ಹೊಡೆದಾಡಿಕೊಂಡಿದ್ದಾರೆ.

ಇವರಿಬ್ಬರ ಗಲಾಟೆಯನ್ನು ನೋಡುತ್ತಿದ್ದ ಸ್ಥಳೀಯರು ಇಬ್ಬರಿಗೂ ಬುದ್ಧಿವಾದ ಹೇಳಿ, ಗಲಾಟೆ ಬಗೆಹರಿಸಿದ್ದಾರೆ. ಹೊಡೆದಾಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Last Updated : Jul 25, 2019, 6:37 PM IST

For All Latest Updates

TAGGED:

ABOUT THE AUTHOR

...view details