ಅಥಣಿ:ಆಂಬ್ಯುಲೆನ್ಸ್ಗೆ ದಾರಿ ಬಿಡದೇ ಟಿಪ್ಪರ್ ಚಾಲಕರು ಬಂಡತನ ಪ್ರದರ್ಶಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ನಡೆದಿದೆ.
ಆಂಬ್ಯುಲೆನ್ಸ್ಗೆ ದಾರಿ ಬಿಡದೆ ಬಂಡತನ ಪ್ರದರ್ಶಿಸಿದ ಟಿಪ್ಪರ್ ಚಾಲಕರು: ವಿಡಿಯೋ - ರಸ್ತೆ ಮಧ್ಯೆ ಜಗಳ ಪ್ರಾರಂಭಿಸಿದ ಟಿಪ್ಪರ್ ಚಾಲಕರು
ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಇಬ್ಬರು ಟಿಪ್ಪರ್ ಚಾಲಕರು, ತಮ್ಮ ವಾಹನಗಳನ್ನು ರಸ್ತೆ ಮಧ್ಯೆದಲ್ಲಿ ನಿಲ್ಲಿಸಿ ಆಂಬ್ಯುಲೆನ್ಸ್ಗೂ ದಾರಿ ನೀಡದೇ ಪರಸ್ಪರ ಇಬ್ಬರು ವಾಗ್ವಾದ ನಡೆಸಿದ ಘಟನೆ ನಡೆದಿದೆ.

ನಗರದ ಹೃದಯ ಭಾಗದ ಅಂಬೇಡ್ಕರ್ ಸರ್ಕಲ್ನಲ್ಲಿ ಇಬ್ಬರು ಟಿಪ್ಪರ್ ಚಾಲಕರು, ತಮ್ಮ ವಾಹನಗಳನ್ನು ರಸ್ತೆ ಮಧ್ಯೆದಲ್ಲಿ ನಿಲ್ಲಿಸಿ ವಾಹನ ಸವಾರರಿಗೆ ಕಿರಿ ಕಿರಿ ಉಂಟು ಮಾಡಿದರು. ಅಷ್ಟೇ ಅಲ್ಲದೇ ಹಿಂದೆ ನಿಲ್ಲಿಸಿದ್ದ ಆಂಬ್ಯುಲೆನ್ಸ್ಗೂ ದಾರಿ ನೀಡದೇ ಪರಸ್ಪರ ಇಬ್ಬರು ವಾಗ್ವಾದ ನಡೆಸಿದ್ದು, ಇವರ ಜಗಳದಿಂದ ಆಂಬ್ಯುಲೆನ್ಸ್ ವಾಹನ ಟ್ರಾಫಿಕ್ ಮಧ್ಯೆ ಸಿಲುಕಿ ಅದರಲ್ಲಿದ್ದ ರೋಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.
ಇನ್ನು ಈ ಘಟನೆಯನ್ನು ಮಾಧ್ಯಮಗಳು ಸೆರೆ ಹಿಡಿಯಲು ಮುಂದಾಗುತ್ತಿದ್ದಂತೆ ಎತ್ತೆಚ್ಚ ಟಿಪ್ಪರ್ ಚಾಲಕರು ವಾಹನಗಳನ್ನ ತೆಗೆದುಕೊಂಡು ಪರಾರಿಯಾದರು. ಈ ಸಂಬಂಧ ಆಕ್ರೋಶ ವ್ಯಕ್ತಪಡಿಸಿರುವ ಸಾರ್ವಜನಿಕರು, ಆಂಬ್ಯುಲೆನ್ಸ್ ದಾರಿ ಬಿಡದೇ ಸತಾಯಿಸಿದ್ದಲ್ಲದೇ ಮಿತಿಮೀರಿದ ವಾಹನ ಸಂಚಾರ, ನಿಯಮ ಉಲ್ಲಂಘನೆ ಪಾಲಿಸದೇ ವಾಹನ ಚಲಾಯಿಸಿದ ಚಾಲಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.