ಬೆಳಗಾವಿ :ಇಲ್ಲಿನ ಬೀಮ್ಸ್ ಆಸ್ಪತ್ರೆಯಲ್ಲಿ ಕ್ವಾರಂಟೈನ್ನಲ್ಲಿರುವ ಕೊರೊನಾ ಶಂಕಿತರು ಎಲ್ಲೆಂದರಲ್ಲಿ ಉಗುಳಿ ವಿಕೃತಿ ಮೆರೆಯುತ್ತಿದ್ದಾರೆ. ಶಂಕಿತರ ಅಸಹ್ಯ ವರ್ತನೆಗೆ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ ಬೇಸತ್ತು ಹೋಗಿದ್ದಾರೆ.
ಕ್ವಾರಂಟೈನಲ್ಲಿದ್ದವರು ಎಲ್ಲೆಂದರಲ್ಲಿ ಉಗುಳಿ ವಿಕೃತಿ.. ಜೀವಭಯದಲ್ಲಿ ಬೀಮ್ಸ್ ಸಿಬ್ಬಂದಿ.. - ಬೀಮ್ಸ್ ಸಿಬ್ಬಂದಿಗೆ ತೊಂದರೆ
ಬೀಮ್ಸ್ ಆಸ್ಪತ್ರೆಯಲ್ಲಿ ಕ್ವಾರಂಟೈನ್ನಲ್ಲಿರುವ ಕೊರೊನಾ ಶಂಕಿತರು ಆಸ್ಪತ್ರೆಯಲ್ಲಿ ಎಲ್ಲೆಂದರಲ್ಲಿ ಉಗುಳಿ ವಿಕೃತಿ ಮೆರೆಯುತ್ತಿದ್ದಾರೆ.
![ಕ್ವಾರಂಟೈನಲ್ಲಿದ್ದವರು ಎಲ್ಲೆಂದರಲ್ಲಿ ಉಗುಳಿ ವಿಕೃತಿ.. ಜೀವಭಯದಲ್ಲಿ ಬೀಮ್ಸ್ ಸಿಬ್ಬಂದಿ.. Beams hospital staff](https://etvbharatimages.akamaized.net/etvbharat/prod-images/768-512-6667206-thumbnail-3x2-chaii.jpg)
ಬೀಮ್ಸ್ ಸಿಬ್ಬಂದಿ
ದೆಹಲಿಯ ನಿಜಾಮುದ್ದೀನ್ ತಬ್ಲಿಘಿ ಧರ್ಮಸಭೆಯಲ್ಲಿ ಪಾಲ್ಗೊಂಡು ಬಂದವರನ್ನು ಬೀಮ್ಸ್ ಆಸ್ಪತ್ರೆಯ 2ನೇ ಮಹಡಿಯ ಮೆಡಿಕಲ್ ವಾರ್ಡ್‌ನಲ್ಲಿರಿಸಲಾಗಿದೆ. ಇದರಲ್ಲಿ ಮೂವರಲ್ಲಿ ಕೊರೊನಾ ಸೋಂಕಿರುವುದು ದೃಢಪಟ್ಟಿದೆ.
ಸಭ್ಯತೆಯಿಂದ ನಡೆದುಕೊಳ್ಳಬೇಕಿದ್ದ ಶಂಕಿತರು ಆಸ್ಪತ್ರೆಯಲ್ಲಿ ಎಲ್ಲೆಂದರಲ್ಲಿ ಉಗುಳಿ ವಿಕೃತಿ ಮೆರೆಯುತ್ತಿದ್ದಾರೆ. ಹೀಗಾಗಿ ಬೀಮ್ಸ್ ಸಿಬ್ಬಂದಿ ಜೀವ ಭಯದಲ್ಲೇ ಕೆಲಸ ಮಾಡುತ್ತಿದ್ದಾರೆ. ಶಂಕಿತರ ವರ್ತನೆಗೆ ಕಡಿವಾಣ ಹಾಕುವಂತೆ ಇಲ್ಲಿನ ಸಿಬ್ಬಂದಿ ಬೀಮ್ಸ್ ನಿರ್ದೇಶಕರ ಮುಂದೆ ಅಳಲು ತೋಡಿಕೊಂಡಿದ್ದಾರೆ.