ಬೆಳಗಾವಿ:ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಆರೋಪಿಗೆ ಸಾರ್ವಜನಿಕರು ಹಿಗ್ಗಾ-ಮುಗ್ಗ ಥಳಿಸಿರುವ ಘಟನೆ ನಗರದ ಕೋರ್ಟ್ ಆವರಣದಲ್ಲಿ ನಡೆದಿದೆ.
ಅತ್ಯಾಚಾರ ಎಸಗಿದ್ದ ವ್ಯಕ್ತಿಯನ್ನು ಹಿಗ್ಗಾ-ಮುಗ್ಗಾ ಥಳಿಸಿದ ಸಾರ್ವಜನಿಕರು..ವಿಡಿಯೋ - ಅತ್ಯಾಚಾರ ಎಸಗಿದ್ದ ವ್ಯಕ್ತಿಯನ್ನು ಹಿಗ್ಗಾ-ಮುಗ್ಗಾ ಥಳಿಸಿದ ಸಾರ್ವಜನಿಕರು
ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಆರೋಪಿಗೆ ಸಾರ್ವಜನಿಕರೇ ಥಳಿಸಿರುವ ಘಟನೆ ನಗರದ ಕೋರ್ಟ್ ಆವರಣದಲ್ಲಿ ನಡೆದಿದೆ.
Publics beetan accused
ತಾಲೂಕಿನ ಕಡೋಲಿ ಗ್ರಾಮದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಪರಾರಿಯಾಗಿದ್ದ ದುಷ್ಕರ್ಮಿ ಸುನೀಲ್ ಬಾಳನಾಯಿಕನನ್ನು (26) ಕಾಕತಿ ಠಾಣೆಯ ಪೊಲೀಸರು ಇಂದು ನ್ಯಾಯಾಲಯಕ್ಕೆ ಹಾಜರು ಪಡಿಸಿ ಮರಳಿ ಜೈಲಿಗೆ ಕರೆದೊಯ್ಯುತ್ತಿದ್ದರು. ಈ ವೇಳೆ ನ್ಯಾಯಾಲಯದ ಆವರಣ ಮುಂದೆಯೇ ಸ್ಥಳೀಯರು ಆರೋಪಿ ಸುನೀಲ್ನನ್ನು ಹಿಗ್ಗಾ ಮುಗ್ಗ ಥಳಿಸಿದ್ದಾರೆ.
ಇನ್ನು ಈ ವೇಳೆ ಸಾರ್ವಜನಿಕರನ್ನು ಚದುರಿಸಲು ಪೊಲೀಸರು ಹರಸಾಹಸ ಪಟ್ಟು, ಕೊನೆಗೆ ಹಲ್ಲೆ ನಡೆಸಿದ ಸಾರ್ವಜನಿಕರನ್ನು ವಶಕ್ಕೆ ಪಡೆದರು. ಇದರಿಂದ ಸಿಟ್ಟಿಗೆದ್ದ ಸ್ಥಳೀಯರು ಪೊಲೀಸರ ಕ್ರಮ ಖಂಡಿಸಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.