ಲಾಕ್‌ಡೌನ್ ಉಲ್ಲಂಘನೆ ಮಾಡಿ ಜೀವಕ್ಕೆ ಕುಂದು ತಂದುಕೊಳ್ಳಬೇಡಿ.. ಪಿಎಸ್‌ಐ ಎಚ್ಚರಿಕೆ - Getting out of the house is their bike siege
ಸದ್ಯಕ್ಕೆ ಗ್ರಾಮದಲ್ಲಿದ್ದವರು ಮನೆಯಲ್ಲಿಯೇ ಉಳಿಯಿರಿ. ಹೊರಗಿನಿಂದ ಬಂದವರ ಜತೆ ಬೆರೆಯಬೇಡಿ. ಹೊರಗಿನಿಂದ ಗ್ರಾಮಕ್ಕೆ ಬಂದವರು ನಿಮಗಾಗಿ, ನಿಮ್ಮ ಕುಟುಂಬಕ್ಕಾಗಿ ಸ್ವಯಂ ಕ್ವಾರಂಟೈನ್ ವಿಧಿಸಿಕೊಳ್ಳಿ.
![ಲಾಕ್‌ಡೌನ್ ಉಲ್ಲಂಘನೆ ಮಾಡಿ ಜೀವಕ್ಕೆ ಕುಂದು ತಂದುಕೊಳ್ಳಬೇಡಿ.. ಪಿಎಸ್‌ಐ ಎಚ್ಚರಿಕೆ PSI warn the people about corona virus in athani](https://etvbharatimages.akamaized.net/etvbharat/prod-images/768-512-6694584-823-6694584-1586240534798.jpg)
ಪಿಎಸ್‌ಐ ಕೆ. ಎಸ್. ಕೊಚರಿ
ಅಥಣಿ :ಲಾಕ್‌ಡೌನ್ ಉಲ್ಲಂಘನೆ ಮಾಡಿ ಜೀವಕ್ಕೆ ಕುಂದು ತಂದುಕೊಳ್ಳಬೇಡಿ, ಪರಿಸ್ಥಿತಿ ಕೈಮೀರುವ ಮುನ್ನ ಎಚ್ಚರಗೊಳ್ಳಿ. ಒಂದು ವೇಳೆ ಅನಾವಶ್ಯಕವಾಗಿ ಮನೆಯಿಂದ ಹೊರ ಬಂದರೆ ಅವರ ಬೈಕ್ ಸೀಜ್ ಮಾಡಲಾಗುವುದು ಎಂದು ಐಗಳಿ ಠಾಣೆಯ ಪಿಎಸ್‌ಐ ಕೆ ಎಸ್ ಕೊಚರಿ ಎಚ್ಚರಿಸಿದ್ದಾರೆ.