ಕರ್ನಾಟಕ

karnataka

ETV Bharat / state

ಕೊರೊನಾ ಇದೆ ಅಂತಾ ಸುಳ್ಳು ಸುದ್ದಿ ಹರಡಿದ ಕಿಡಿಗೇಡಿಗಳು.. - ಬೆಳಗಾವಿ‌ ಜಿಲ್ಲೆಯ ಗೋಕಾಕ್​ ತಾಲೂಕಿನ ಶಿಂದಿಕುರಬೇಟ

ಕೊರೊನಾ ಭೀತಿಯ ಮಧ್ಯೆಯೇ ಕೆಲ ಸುಳ್ಳು ಸುದ್ದಿ ಹರದಾಡ್ತಿವೆ. ಇಂತಹವರ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳೋದು ಅವಶ್ಯಕವಾಗಿದೆ. ಗೋಕಾಕ್‌ ತಾಲೂಕಿನಲ್ಲೂ ಇಂತಹುದೇ ಘಟನೆ ನಡೆದಿದೆ.

psi baladandi Visit to the village of Shindikurabeta
ಸುಳ್ಳು ಸುದ್ದಿಗೆ ತೆರೆ ಎಳೆದ ಘಟಪ್ರಭಾ ಪಿಎಸ್ಐ ಎಚ್.ವೈ.ಬಾಲದಂಡಿ

By

Published : Mar 29, 2020, 7:42 PM IST

ಬೆಳಗಾವಿ‌ : ಗೋಕಾಕ್​ ತಾಲೂಕಿನ ಶಿಂದಿಕುರಬೇಟ ಗ್ರಾಮದಲ್ಲಿ ಕೊರೊನಾ ಪೀಡಿತ ವ್ಯಕ್ತಿ ಇದ್ದಾನೆ ಅಂತಾ ಸುಳ್ಳು ಸುದ್ದಿ ಹರಡಿಸಿದ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಘಟಪ್ರಭಾ ಪಿಎಸ್ಐ ಹೆಚ್ ವೈ ಬಾಲದಂಡಿ ಭೇಟಿ ನೀಡಿದರು. ಆದರೆ, ವೈದ್ಯರು ಪರೀಕ್ಷೆ ನಡೆಸಿದಾಗ ಆ ವ್ಯಕ್ತಿಗೆ ಕೊರೊನಾ ಲಕ್ಷಣಗಳು ಕಂಡು ಬಂದಿಲ್ಲ.

ಸುಳ್ಳು ಸುದ್ದಿಗೆ ತೆರೆ ಎಳೆದ ಘಟಪ್ರಭಾ ಪಿಎಸ್ಐ ಹೆಚ್ ವೈ ಬಾಲದಂಡಿ..

ದಯವಿಟ್ಟು ಈ ರೀತಿ ಸುಳ್ಳು ಸುದ್ದಿ ಹರಡಿಸಬೇಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡ ಪಿಎಸ್ಐ, ಈಗಾಗಲೇ ಕೊರೊನಾ ಇಂದ ದೇಶವೇ ತೊಂದರೆಯಲ್ಲಿದೆ. ಈ ರೀತಿ ಸುಳ್ಳು ಸುದ್ದಿ ಹರಡಿಸಬೇಡಿ. ಒಂದು ವೇಳೆ ಸುಳ್ಳು ಸುದ್ದಿ ಹರಡಿಸಿದರೆ,ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುತ್ತದೆ ಎಂದರು. ಈ ಸುಳ್ಳು ಸುದ್ದಿ ಹರಡಿಸಿದವರ ವಿರುದ್ಧ ಪರಿಶೀಲನೆ ನಡೆಸಿ ಕ್ರಮಕೈಗೊಳ್ಳಲಾಗುತ್ತಿದೆ. ನಿಮ್ಮ ಜೀವನದ ಸಲುವಾಗಿ ಹಗಲು-ರಾತ್ರಿ ಎನ್ನದೇ ಪೊಲೀಸ್, ಆರೋಗ್ಯ ಇಲಾಖೆ, ಮಾಧ್ಯಮಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರೂ ಸೇರಿದಂತೆ ಎಲ್ಲರೂ ದುಡಿಯುತ್ತಿದ್ದಾರೆ.

ನಿಮ್ಮಗೆ ತೊಂದರೆಯಾದರೆ ಯಾವ ಸಮಯದಲ್ಲಿ ಬೇಕಾದರೂ ಕರೆ ಮಾಡಿ, ನಿಮಗೆ ನಾವು ಸಂಪೂರ್ಣವಾಗಿ ಸ್ಪಂದಿಸುತ್ತೇವೆ ಎಂದರು.

ABOUT THE AUTHOR

...view details