ಅಥಣಿ: ಮರಾಠಿ ಭಾಷಾ ಪ್ರೇಮ ಮೆರೆದು ಮಹಾರಾಷ್ಟ್ರ ಸಚಿವರನ್ನು ಓಲೈಸಲು ಮರಾಠಿ ಭಾಷಣ ಮಾಡಿದ ಸಚಿವ ಶ್ರೀಮಂತ ಪಾಟೀಲ ವಿರುದ್ಧ ಅಥಣಿ ಮತಕ್ಷೇತ್ರದಲ್ಲಿ ಕನ್ನಡಿಗರ ಆಕ್ರೋಶ ಮುಂದುವರೆದಿದೆ.
ಮರಾಠಿ ಭಾಷಾ ಪ್ರೇಮ ಮೆರೆದ ಸಚಿವ ಶ್ರೀಮಂತ ಪಾಟೀಲ: ಜಯಕರ್ನಾಟಕ ಸಂಘಟನೆಯಿಂದ ಪ್ರತಿಭಟನೆ - ಮಹಾರಾಷ್ಟ್ರ ಸಚಿವರನ್ನು ಓಲೈಸಲು ಮರಾಠಿ ಭಾಷಣ
ಮರಾಠಿ ಭಾಷಾ ಪ್ರೇಮ ಮೆರೆದು ಮಹಾರಾಷ್ಟ್ರ ಸಚಿವರನ್ನು ಓಲೈಸಲು ಮರಾಠಿ ಭಾಷಣ ಮಾಡಿದ ಶ್ರೀಮಂತ ಪಾಟೀಲ ವಿರುದ್ಧ ಜಯಕರ್ನಾಟಕ ಸಂಘಟನೆಯಿಂದ ಅಥಣಿ ಪಟ್ಟಣ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಮರಾಠಿ ಭಾಷಾ ಪ್ರೇಮ ಮೆರೆದ ಶ್ರೀಮಂತ ಪಾಟೀಲ, ಜಯಕರ್ನಾಟಕ ಸಂಘಟನೆಯಿಂದ ಪ್ರತಿಭಟನೆ
ಆಗಸ್ಟ್ ಒಂದರಂದು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬಳ್ಳಿಗೇರಿ ಗ್ರಾಮದಲ್ಲಿ, ಮಹಾರಾಷ್ಟ್ರ ಕೃಷಿ ಸಚಿವ ವಿಶ್ವಜೀತ ಕದಮ್ ಒಡೆತನದ ಬಸವೇಶ್ವರ ಸಕ್ಕರೆ ಕಾರ್ಖಾನೆ ಭೂಮಿ ಪೂಜೆ ವೇಳೆ ಕಾಗವಾಡ ಶಾಸಕ ಹಾಗೂ ಜವಳಿ ಖಾತೆ ಸಚಿವ ಶ್ರೀಮಂತ ಪಾಟೀಲ ಮರಾಠಿಯಲ್ಲಿ ಭಾಷಣ ಮಾಡಿ ಕನ್ನಡ ಕಡೆಗಣಿಸಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದ್ದವು.
ನಾಡದ್ರೋಹಿ ಶ್ರೀಮಂತ ಪಾಟೀಲರನ್ನು ಶಾಸಕ ಮತ್ತು ಸಚಿವಸ್ಥಾನದಿಂದ ಕೈಬಿಡಬೇಕು ಹಾಗೂ ಗಡಿಪಾರು ಮಾಡಬೇಕೆಂದು ಆಗ್ರಹಿಸಿ ಅಥಣಿ ಉಪ ತಹಶೀಲ್ದಾರ್ ಎಮ್ ವಿ ಬಿರಾದಾರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
Last Updated : Aug 6, 2020, 4:57 PM IST