ಬೆಳಗಾವಿ: ರಾಜೀವ್ ಆವಾಸ ಜಿ3 ಯೋಜನೆ ಅಡಿಯಲ್ಲಿ ಮಂಜೂರಾದ ಮನೆಗಳನ್ನು ಅಧಿಕಾರಿಗಳ ಸಂಬಂಧಿಕರಿಗೆ ಹಾಗೂ ಜನಪ್ರತಿನಿಧಿಗಳ ಪರಿಚಯದವರಿಗೆ ನೀಡಲಾಗಿದೆ. ನಿಜವಾದ ಫಲಾನುಭವಿಗಳಿಗೆ ಜಿಲ್ಲಾಡಳಿತ ಅನ್ಯಾಯ ಮಾಡಲು ಹೊರಟಿದೆ. ಫಲಾನಿಭವಿಗಳ ಪಟ್ಟಿಯನ್ನು ಮರು ಪರಿಶೀಲನೆ ಮಾಡಬೇಕೆಂದು ಎಂದು ನಗರದ ವಂಟಮಕರಿ ಜೋಪಡ ಪಟ್ಟಿ ನಿರಾಶ್ರಿತರು ಹಾಗೂ ಫಲಾನಿಭವಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ರಾಜೀವ್ ಆವಾಸ ಯೋಜನೆಯಲ್ಲಿ ಅಕ್ರಮ: ಸೂಕ್ತ ಕ್ರಮಕ್ಕೆ ಆಗ್ರಹ
ರಾಜೀವ್ ಆವಾಸ ಯೋಜನೆ ಅಡಿಯಲ್ಲಿ ಯೋಗ್ಯ ಫಲಾನುಭವಿಗಳಿಗೆ ದೊರಕಬೇಕಾದ ಮನೆಗಳನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಫಲಾನುಭವಿಗಳ ಪಟ್ಟಿಯನ್ನು ಪರಿಶೀಲಿಸವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು
ಬೆಳಗಾವಿ ನಗರದ ವಂಟಮುರಿ ಕಾಲನಿಯಲ್ಲಿ ಕಳೆದ 25 ವರ್ಷಗಳಿಂದ ನಿರಾಶ್ರಿತರಾಗಿ ಜೀವನ ಸಾಗಿಸುತ್ತಿದ್ದೇವೆ. ನಿರಾಶ್ರಿತರಿಗೆ ಆಶ್ರಯ ನೀಡಲು ರಾಜೀವ್ ಆವಾಸ ಜಿ3 ಯೋಜನೆ ಅಡಿಯಲ್ಲಿ ನಿರ್ಮಿಸಿದ ಮನೆಗಳನ್ನು ಯೋಗ್ಯ ಫಲಾನುಭವಿಗಳಿಗೆ ನೀಡದೆ, ಅನ್ಯಾಯ ಮಾಡಲಾಗುತ್ತಿದೆ. ಅರ್ಜಿಗಳನ್ನು ಮತ್ತು ಎಲ್ಲ ದಾಖಲಾತಿಗಳನ್ನು ಲಗತ್ತಿಸಿ ಕೊಟ್ಟಿದ್ದು ನಿಗದಿ ಪಡಿಸಿದ ಹಣವನ್ನು ನಾವು ತುಂಬಲು ಸಿದ್ಧರಿದ್ದರೂ ನಮಗೆ ಆಶ್ರಯ ಮನೆಗಳನ್ನು ನೀಡುತ್ತಿಲ್ಲ. ಜಿಲ್ಲಾಧಿಕಾರಿಗಳು ಕೂಡಲೇ ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿ ಕಾಲನಿ ನಿವಾಸಿಗಳು ಪ್ರತಿಭಟನೆ ನಡೆಸಿ, ಮನವಿಪತ್ರ ಸಲ್ಲಿಸಿದರು.