ಬೆಳಗಾವಿ:ಸ್ಮಶಾನಕ್ಕೆ ಹೋಗಲು ಸಮರ್ಪಕ ರಸ್ತೆ ಇಲ್ಲದ ಕಾರಣ ಸಂಬಂಧಿಕರು ಶವ ಮನೆಯಲ್ಲೇ ಇಟ್ಟುಕೊಂಡು ಜಿಲ್ಲಾಡಳಿತ ವಿರುದ್ಧ ವಿನೂತನ ಪ್ರತಿಭಟನೆ ನಡೆಸಿದ್ದಾರೆ. ಕುಟುಂಬಸ್ಥರಿಗೆ ಗ್ರಾಮಸ್ಥರು ಕೂಡ ಸಾಥ್ ನೀಡುತ್ತಿದ್ದಾರೆ.
ಸ್ಮಶಾನಕ್ಕೆ ಹೋಗಲು ರಸ್ತೆ ಇಲ್ಲ, ಮನೆಯಲ್ಲೇ ಶವ ಇಟ್ಟು ಗ್ರಾಮಸ್ಥರಿಂದ ಪ್ರತಿಭಟನೆ - Belagam protest news
ಗ್ರಾಮದಲ್ಲಿರುವ ಹಿಂದೂ-ಮುಸ್ಮಿಂ ಸ್ಮಶಾನಕ್ಕೆ ಶವ ಒಯ್ಯಲು ಸಮರ್ಪಕ ರಸ್ತೆಯಿಲ್ಲ. ಅಂತ್ಯಸಂಸ್ಕಾರಕ್ಕೆ ಹೋಗಲು ಜನರು ಪರದಾಡುವ ಸ್ಥಿತಿ ಇಲ್ಲಿದೆ. ರಸ್ತೆ ನಿರ್ಮಾಣ ಸಂಬಂಧ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ರಸ್ತೆ ನಿರ್ಮಿಸದ ತಾಲೂಕಾಡಳಿತ ವಿರುದ್ಧ ಗ್ರಾಮಸ್ಥರು ಇದೀಗ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಚಿಕ್ಕ ಏಣಗಿ ಗ್ರಾಮದಲ್ಲಿ ಈ ಪ್ರತಿಭಟನೆ ನಡೆಯುತ್ತಿದೆ. ಹಸ್ಮತ್ ದುಪದಾಳ ಎಂಬುವವರು ಬುಧವಾರ ಮಧ್ಯಾಹ್ನ 12 ಕ್ಕೆ ಮೃತಪಟ್ಟಿದ್ದಾರೆ. ಸ್ಮಶಾನಕ್ಕೆ ಹೋಗಲು ರಸ್ತೆಯಿಲ್ಲದೇ ಸಂಬಂಧಿಕರು ಹಸ್ಮತ್ ಅವರ ಶವವನ್ನು ಕಳೆದ 10 ಗಂಟೆಗಳಿಂದ ಮನೆಯಲ್ಲೇ ಇಟ್ಟುಕೊಂಡಿದ್ದಾರೆ. ಆ ಮೂಲಕ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತದ ವಿರುದ್ಧ ವಿನೂತನವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಗ್ರಾಮದಲ್ಲಿರುವ ಹಿಂದೂ-ಮುಸ್ಮಿಂ ಸ್ಮಶಾನಕ್ಕೆ ಶವ ಒಯ್ಯಲು ಸಮರ್ಪಕ ರಸ್ತೆಯಿಲ್ಲ. ಅಂತ್ಯಸಂಸ್ಕಾರಕ್ಕೆ ಹೋಗಲು ಜನರು ಪರದಾಡುವ ಸ್ಥಿತಿ ಇಲ್ಲಿದೆ. ರಸ್ತೆ ನಿರ್ಮಾಣ ಸಂಬಂಧ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ರಸ್ತೆ ನಿರ್ಮಿಸದ ತಾಲೂಕು ಆಡಳಿತ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.