ಬೆಳಗಾವಿ : ಕರ್ನಾಟಕ ರಾಜ್ಯೋತ್ಸವ ದಿನ ಕರಾಳ ದಿನಾಚಾರಣೆ ಆಚರಿಸಿ ಪುಂಡಾಟಿಕೆ ಮೆರೆಯುವ ಎಂಇಎಸ್ಗೆ ಅನುಮತಿ ನೀಡಬಾರದೆಂದು ಆಗ್ರಹಿಸಿ ಕರ್ನಾಟಕ ವಿಶ್ವ ನಿರ್ಮಾಣ ಸೇನೆ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ಎಂಇಎಸ್ ಕರಾಳ ದಿನಾಚರಣೆಗೆ ಅವಕಾಶ ನೀಡದಂತೆ ಕನ್ನಡಪರ ಸಂಘಟನೆಯಿಂದ ಪ್ರತಿಭಟನೆ - Kannada Organization Protest in Belgum against MES black day
ಗಡಿ ಜಿಲ್ಲೆ ಬೆಳಗಾವಿಯಲ್ಲಿ ನವೆಂಬರ್ 1ರಂದು ಕರ್ನಾಟಕ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಆದರೆ ಅದೇ ದಿನ ಎಂಇಎಸ್ ಕರಾಳ ದಿನಾಚರಣೆ ಮಾಡುವುದರ ಮೂಲಕ, ಪುಂಡಾಟಿಕೆ ಮೆರೆಯುತ್ತಿದೆ. ಆದ್ದರಿಂದ ಈ ಭಾರಿ ಯಾವುದೇ ಕಾರಣಕ್ಕೆ ಕರಾಳ ದಿನಾಚರಣೆಗೆ ಜಿಲ್ಲಾಡಳಿತ ಅನುಮತಿ ನೀಡಬಾರದೆಂದು ಆಗ್ರಹಿಸಿ ಮನವಿ ಸಲ್ಲಿಸಲಾಯಿತು.
ಗಡಿ ಜಿಲ್ಲೆ ಬೆಳಗಾವಿಯಲ್ಲಿ ನವೆಂಬರ್ 1ರಂದು ಕರ್ನಾಟಕ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಆದರೆ ಅದೇ ದಿನ ಎಂಇಎಸ್ ಕರಾಳ ದಿನಾಚರಣೆ ಮಾಡುವುದರ ಮೂಲಕ, ಪುಂಡಾಟಿಕೆ ಮೆರೆಯುತ್ತಿದೆ. ಆದ್ದರಿಂದ ಈ ಭಾರಿ ಯಾವುದೇ ಕಾರಣಕ್ಕೆ ಕರಾಳ ದಿನಾಚರಣೆಗೆ ಜಿಲ್ಲಾಡಳಿತ ಅನುಮತಿ ನೀಡಬಾರದೆಂದು ಆಗ್ರಹಿಸಿ ಮನವಿ ಸಲ್ಲಿಸಲಾಯಿತು
ಪ್ರತಿಭಟನೆ ನೇತೃತ್ವ ವಹಿಸಿದ್ದ ಸಂಘಟನೆ ರಾಜ್ಯಾಧ್ಯಕ್ಷ ಶಾನವಾಜ ಮುಲ್ಲಾ ಮಾತನಾಡಿ, ಕನ್ನಡಿಗರು ಮತ್ತು ಮರಾಠಿಗರು ಒಗ್ಗಟ್ಟಾಗಿ ಸೌಹಾರ್ದತೆ ಜೀವನ ನಡೆಸುತ್ತಿರುವ ಬೆಳಗಾವಿಯಲ್ಲಿ, ಎಂಇಎಸ್ ಸಂಘಟನೆ ರಾಜಕೀಯ ಕುತಂತ್ರಕ್ಕಾಗಿ ಕರಾಳ ದಿನ ಆಚರಿಸುತ್ತಾ ಬಂದಿದೆ. ಈ ಬಾರಿ ಅದಕ್ಕೆ ಅನುಮತಿ ನೀಡಬಾರದು, ಮತ್ತು ಆ ಸಂಘಟನೆಯನ್ನು ರಾಜ್ಯದಿಂದಲೇ ನಿಷೇಧಿಸಬೇಕೆಂದು ಆಗ್ರಹಿಸಿದರು.