ಬೆಳಗಾವಿ: ಕೊರೊನಾ ಹಾವಳಿಯಿಂದ ಸಂಕಷ್ಟಕ್ಕೊಳಗಾಗಿರುವ ಕುಸ್ತಿ ಪೈಲ್ವಾನರಿಗೆ ಆರ್ಥಿಕ ಸಹಾಯ ನೀಡುವಂತೆ ಆಗ್ರಹಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಕುಸ್ತಿ ಸಂಘಟನೆಯ ಮುಖಂಡರು ಪ್ರತಿಭಟನೆ ನಡೆಸಿದರು.
ಬೆಳಗಾವಿ ಜಿಲ್ಲಾ ಕುಸ್ತಿ ಪೈಲ್ವಾನರಿಗೆ ಸಹಾಯಧನ ನೀಡುವಂತೆ ಆಗ್ರಹಿಸಿ ಪ್ರತಿಭಟನೆ - belgavi peotest latest news
ಕೊರೊನಾ ಹಾವಳಿಯಿಂದಾಗಿ ಕಳೆದ ಐದಾರು ತಿಂಗಳುಗಳಿಂದ ಜಿಲ್ಲೆಯ ಎಲ್ಲಾ ಪೈಲ್ವಾನರಿಗೆ ಸ್ಪರ್ಧಿಸಲು ಸ್ಪರ್ಧೆಗಳು ನಡೆದಿಲ್ಲ. ಹೀಗಾಗಿ ಪೈಲ್ವಾನರು ಆರ್ಥಿಕ ತೊಂದರೆಯಿಂದಾಗಿ ಸಾಕಷ್ಟು ಕುಗ್ಗಿ ಹೋಗಿದ್ದು, ಕುಸ್ತಿ ಕಲೆ ಉಳಿಸುವ ಸಲವಾಗಿ ಸರ್ಕಾರದಿಂದ ಆರ್ಥಿಕ ಸಹಾಯ ನೀಡಬೇಕು ಎಂದ ಕುಸ್ತಿ ಸಂಘಟನೆಯ ಮುಖಂಡರು ಪ್ರತಿಭಟನೆ ನಡೆಸಿ ಒತ್ತಾಯಿಸಿದರು.
ಕುಸ್ತಿ ಹಿಡಿದು ಜೀವನ ನಡೆಸುತ್ತಿದ್ದ ಕುಸ್ತಿ ಪೈಲ್ವಾನರು ಕೊರೊನಾ ಹಿನ್ನೆಲೆ ಸಂಕಷ್ಟ ಎದುರಿಸುತ್ತಿದ್ದು, ಜೀವನ ನಿರ್ವಹಣೆ ಕಷ್ಟಕರವಾಗಿದೆ. ಹೀಗಾಗಿ ಸರ್ಕಾರ ನಮಗೂ ಆರ್ಥಿಕ ಸಹಾಯಧನ ನೀಡಬೇಕು ಎಂದು ಒತ್ತಾಯಿಸಿದರು. ಕೊರೊನಾ ಹಾವಳಿಯಿಂದಾಗಿ ಕಳೆದ ಐದಾರು ತಿಂಗಳುಗಳಿಂದ ಜಿಲ್ಲೆಯ ಎಲ್ಲಾ ಪೈಲ್ವಾನರಿಗೆ ಸ್ಪರ್ಧಿಸಲು ಸ್ಪರ್ಧೆಗಳು ನಡೆದಿಲ್ಲ. ಹೀಗಾಗಿ ಪೈಲ್ವಾನರು ಆರ್ಥಿಕ ತೊಂದರೆಯಿಂದಾಗಿ ಸಾಕಷ್ಟು ಕುಗ್ಗಿ ಹೋಗಿದ್ದು, ಕುಸ್ತಿ ಕಲೆ ಉಳಿಸುವ ಸಲವಾಗಿ ಸರ್ಕಾರದಿಂದ ಆರ್ಥಿಕ ಸಹಾಯ ನೀಡಬೇಕು ಎಂದು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ವೇಳೆ ಕುಸ್ತಿ ಸಂಘದ ಅಧ್ಯಕ್ಷ ವಿಶ್ವನಾಥ್ ಪಾಟೀಲ್, ಅಪ್ಪಯ್ಯ ಅಪ್ಪಣ್ಣವರ, ಸುಧೀರ್ ಬಿರ್ಜೆ, ಜ್ಯೋತಿಬಾ ಹೊಂದರೆ, ಶಿವಾಜಿ ಪಾಟೀಲ್ ಇದ್ದರು.